2025 KTM 390 Adventure Review: ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್ ರಿವ್ಯೂ.. ಹೇಗಿದೆ ಗೊತ್ತಾ?

ಆಸ್ಟ್ರಿಯಾ ಮೂಲದ ಕೆಟಿಎಂ (KTM) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ '390 ಸೀರೀಸ್' ಮೋಟಾರ್‌ಸೈಕಲ್‌ಗಳ ಗುಂಪಿಗೆ ಹೊಸ ಸೇರ್ಪಡೆಯಾಗಿ 2025ರ '390 ಅಡ್ವೆಂಚರ್' ಬೈಕ್‌ನ್ನು ಹೊರ ತಂದಿದೆ. ಇದು ಹೆಚ್ಚು ಆಕರ್ಷಕವಾಗದ್ದು, ರಾಯಲ್ ಎನ್‌ಫೀಲ್ಡ್‌ ಹಿಮಾಲಯನ್‌ಗೆ (Royal Enfield Himalayan) ನೇರ ಎದುರಾಳಿಯಾಗಲಿದೆ. ಆದರೆ, ಮೊದಲ ತಲೆಮಾರಿನ ಅಥವಾ ಹಳೆಯ 390 ಅಡ್ವೆಂಚರ್ ಬೈಕ್, '390 ಡ್ಯೂಕ್' ಮೋಟಾರ್‌ಸೈಕಲ್‌ನ್ನು ಆಧರಿಸಿತ್ತು. ಜೊತೆಗೆ ಕೆಲವೊಂದು ಸಮಸ್ಯೆಗಳನ್ನು ಹೊಂದಿತ್ತು. ಅದನ್ನು ಗಮನದಲ್ಲಿಟ್ಟುಕೊಂಡ ಕಂಪನಿಯು '450 ರ‍್ಯಾಲಿ ಡಕಾರ್ ವಿನ್ನಿಂಗ್' ಮೋಟಾರ್‌ಸೈಕಲ್‌ನಿಂದ ಸ್ಫೂರ್ತಿ ಪಡೆದು, ಈ ಎರಡನೇ ತಲೆಮಾರಿನ '390 ಅಡ್ವೆಂಚರ್‌'ನ್ನು ವಿನ್ಯಾಸಗೊಳಿಸಿದೆ.

ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿಗೆ ಗೋವಾದಲ್ಲಿ ನೂತನ ಕೆಟಿಎಂ 390 ಅಡ್ವೆಂಚರ್ (KTM 390 Adventure) ಬೈಕ್ ಟೆಸ್ಟ್ ರೈಡ್ ನಡೆಸಲು ಈಚೆಗೆ ಅವಕಾಶ ಲಭ್ಯವಾಯಿತು. ಬನ್ನಿ.. ಈ ಮೋಟಾರ್‌ಸೈಕಲ್‌ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.

2025 KTM 390 Adventure Review Specs Riding Impressions Design Features details

ವಿನ್ಯಾಸ: (Design): ಈ ಕೆಟಿಎಂ 390 ಅಡ್ವೆಂಚರ್ ಮೋಟಾರ್‌ಸೈಕಲ್‌ ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಅದು 450 ರ‍್ಯಾಲಿ ಬೈಕ್‌ಗೆ ಹೋಲಿಕೆಯಾಗುತ್ತದೆ. ಎತ್ತರವಿರುವ ಫ್ರಂಟ್ ಫೆಂಡರ್, ಹೊಸದಾದ ವರ್ಟಿಕಲ್ ವಿಂಡ್‌ಸ್ಕ್ರೀನ್, ಡುಯಲ್ ಎಲ್‌ಇಡಿ ಹೆಡ್‌ಲೈಟ್ ಸೆಟಪ್ ಮತ್ತು 'ಹಾರ್ಸ್‌ಶೂ' ಆಕಾರಕ್ಕೆ ಹೋಲಿಕೆಯಾಗುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ತನ್ನದಾಗಿಸಿಕೊಂಡಿದೆ.

ಇದರೊಟ್ಟಿಗೆ ಹೊಸ 390 ಅಡ್ವೆಂಚರ್ ಬೈಕ್ 14-ಲೀಟರ್ ಸಾಮರ್ಥ್ಯವಿರುವ ಫ್ಯುಯೆಲ್ ಟ್ಯಾಂಕ್, ಕಲರ್-ಇಂಜೆಕ್ಟೆಡ್ ಸೈಡ್ ಪ್ಯಾನೆಲ್‌ಗಳು, ನಕಲ್ ಗಾರ್ಡ್‌ಗಳು, ಸಿಂಗಲ್-ಪೀಸ್ ಸೀಟ್ ಮತ್ತು ಸಣ್ಣದಾಗಿರುವ ಎಲ್ಇಡಿ ಟೈಲ್‌ಲೈಟ್‌ನ್ನು ಪಡೆದಿದೆ. ಈ ಮೂಲಕ ನೂತನ ಮೋಟಾರ್‌ಸೈಕಲ್‌ ಸಾಕಷ್ಟು ಅತ್ಯುತ್ತಮವಾಗಿ ಕಾಣುತ್ತದೆ.

2025 KTM 390 Adventure Review Specs Riding Impressions Design Features details

ಕಾರ್ಯಕ್ಷಮತೆ & ವೈಶಿಷ್ಟ್ಯಗಳು (Performance & Features): ಹೊಸ ಕೆಟಿಎಂ 390 ಅಡ್ವೆಂಚರ್ ಮೋಟಾರ್‌ಸೈಕಲ್‌ 399 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. 45.3 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 39 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, ಬೈ-ಡೈರೆಕ್ಷನಲ್ ಕ್ವಿಕ್-ಶಿಫ್ಟರ್ ಹಾಗೂ ಸ್ಲಿಪ್ಪರ್ ಕ್ಲಚ್ ಆಯ್ಕೆಯನ್ನು ಪಡೆದಿದೆ.

ಈ ಬೈಕ್ ಮುಂಭಾಗ (ಫ್ರಂಟ್) 41 ಎಂಎಂ ಡಬ್ಲ್ಯೂಪಿ ಯುಎಸ್‌ಡಿ ಓಪನ್ ಕಾರ್ಟ್ರಿಡ್ಜ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಸವಾರರ ಸುರಕ್ಷತೆಗಾಗಿ ಮುಂದೆ 320 ಎಂಎಂ ಮತ್ತು ಹಿಂದೆ 220 ಎಂಎಂ ಡಿಸ್ಕ್ ಬ್ರೇಕ್‌ನ್ನು ಒಳಗೊಂಡಿದೆ.

2025 KTM 390 Adventure Review Specs Riding Impressions Design Features details

ನೂತನ ಕೆಟಿಎಂ 390 ಅಡ್ವೆಂಚರ್ ಮೋಟಾರ್‌ಸೈಕಲ್‌ ಸ್ಪೋರ್ಟ್ಸ್ ಸ್ಪೋಕ್ಡ್ ವೀಲ್‌ಗಳನ್ನು (ಮುಂಭಾಗ: 21-ಇಂಚು ಮತ್ತು ಹಿಂಭಾಗ: 17-ಇಂಚು) ಹೊಂದಿದೆ. ಹಾಗೆಯೇ ಮುಂದೆ 90/90 x21 ಹಾಗೂ ಹಿಂದೆ 130/80 x 17 ಅಳತೆಯ ಅಪೊಲೊ ಟ್ಯೂಬ್‌ಲೆಸ್ ಟೈರ್‌ಗಳನ್ನು ತನ್ನದಾಗಿಸಿಕೊಂಡಿದೆ.

ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಕಲರ್ ಟಿಎಫ್‌ಟಿ ಡಿಸ್‌ಪ್ಲೇ (5-ಇಂಚು), ರೈಡ್-ಬೈ-ವೈರ್, ಕಾರ್ನರಿಂಗ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್‌, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ & ಮ್ಯೂಸಿಕ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

2025 KTM 390 Adventure Review Specs Riding Impressions Design Features details

ಚಾಲನಾ ಅನುಭವ (riding-impressions): ನಮಗೆ ಹೊಸ ಕೆಟಿಎಂ 390 ಅಡ್ವೆಂಚರ್ (KTM 390 Adventure) ಬೈಕ್ ಅದ್ಬುತವಾದ ಚಾಲನಾ ಅನುಭವವನ್ನು ಒದಗಿಸಿತು. ಇದರ ಮೇಲೆ ಸವಾರರು ಆರಾಮದಾಯಕವಾಗಿ ಸವಾರಿ ಮಾಡಬಹುದಾಗಿದ್ದು, ಆಫ್-ರೋಡ್ ಪ್ರಿಯರಿಗೆ ಹೇಳಿ ಮಾಡಿದ ರೀತಿಯಲ್ಲಿದೆ. ಇದರ ಸೀಟ್ ಎತ್ತರವು ಕಡಿಮೆಯಿದ್ದು, ಹೆಚ್ಚು ಸವಾರ ಸ್ನೇಹಿಯಾಗಿದೆ. ಎರಡು ಪಾದಗಳನ್ನು ನೆಲದ ಮೇಲೆ ಸುಲಭವಾಗಿ ಇಡಬಹುದು.

ಎತ್ತರವಿರುವ ವಿಂಡ್‌ಸ್ಕ್ರೀನ್ ಹೊಂದಿದ್ದು, ಹೆದ್ದಾರಿಯಲ್ಲಿ ಬೀಸುವ ಗಾಳಿಯಿಂದ ರಕ್ಷಣೆ ನೀಡುತ್ತದೆ. ಬೈಕ್ ಹೆಚ್ಚಿನ ವೇಗದಲ್ಲಿರುವಾಗ ಹ್ಯಾಂಡಲ್‌ಬಾರ್‌ಗಳು ಹಾಗೂ ಫುಟ್‌ಪೆಗ್‌ಗಳಲ್ಲಿ ಸಣ್ಣ ಕಂಪನಗಳು ಉಂಟಾಗುವುದನ್ನು ಕಂಡು ಕೊಳ್ಳಲಾಯಿತು. ಆದರೂ ಆಫ್-ರೋಡಿಂಗ್ ಸಂದರ್ಭದಲ್ಲಿ ಸವಾರ ಎದ್ದು ನಿಂತು ಚಲಾಯಿಸಿದರೂ ಈ ಹ್ಯಾಂಡಲ್‌ಬಾರ್‌ಗಳು & ಫುಟ್‌ಪೆಗ್‌ಗಳು ಗಟ್ಟಿಯಾದ ಹಿಡಿತವನ್ನು ಒದಗಿಸುತ್ತವೆ.

2025 KTM 390 Adventure Review Specs Riding Impressions Design Features details

ಈ ಕೆಟಿಎಂ 390 ಅಡ್ವೆಂಚರ್, 390 ಡ್ಯೂಕ್‌ನಂತೆಯೇ 399 ಸಿಸಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದರೆ ಕಡಿಮೆ ಮಟ್ಟದ 'ಟಾರ್ಕ್'ನ್ನು ಹೊರಹಾಕುತ್ತದೆ. ಡೌನ್‌ಶಿಫ್ಟ್ ಅಗತ್ಯವಿಲ್ಲದೆಯೂ 3ನೇ ಗೇರ್‌ನಲ್ಲಿ 25 ಕೆಎಂಪಿಹೆಚ್ ವೇಗದಲ್ಲಿ ಸುಲಭವಾಗಿ ಚಲಿಸುತ್ತದೆ. ಜೊತೆಗೆ 6.2 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆದುಕೊಂಡಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಆಫ್-ರೋಡ್, ಸ್ಟ್ರೀಟ್ & ರೈನ್ ಎಂಬ ಮೂರು ರೈಡಿಂಗ್ ಮೋಡ್‌ಗಳಿಗೆ ತಕ್ಕಂತೆ ಈ ಬೈಕ್ ಅದ್ಬುತವಾಗಿ ಕಾರ್ಯನಿರ್ವಹಿಸಿತು. ಈ ಮೋಟಾರ್‌ಸೈಕಲ್‌ ಸಸ್ಪೆನ್ಷನ್ ಸೆಟಪ್ ಮತ್ತು ಬ್ರೇಕಿಂಗ್ ಸಿಸ್ಟಮ್ ಕೂಡ ಎಲ್ಲ ವಿವಿಧ ರಸ್ತೆಯಲ್ಲಿಯೂ ಉತ್ತಮವಾಗಿ ಕೆಲಸ ಮಾಡಿದವು. ಅಪೊಲೊ ಟೈರ್‌ಗಳು ಸಹ ಹೆಚ್ಚು ಉತ್ತಮವಾಗಿವೆ.

2025 KTM 390 Adventure Review Specs Riding Impressions Design Features details

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ (Drivespark Thoughts): ಒಟ್ಟಾರೆ ಕೆಟಿಎಂ 390 ಅಡ್ವೆಂಚರ್ ಬೈಕ್ ರೂ.3.68 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರ ಆಯ್ಕೆಯ ದ್ವಿಚಕ್ರ ವಾಹನವಾಗಬಹುದು ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಮೋಟಾರ್‌ಸೈಕಲ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, February 25, 2025, 10:00 [IST]
English summary
2025 ktm 390 adventure review specs riding impressions design features details
Read more on ktm india bike review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+