Review: ಯುವಕರ ಫೆವರೇಟ್ KTM 390 ಅಡ್ವೆಂಚರ್ ಎಸ್‌ಡಬ್ಲ್ಯೂ, ಎಕ್ಸ್ ಮಾದರಿ ಹೇಗಿದೆ.. ಇಲ್ಲಿದೆ ವಿಮರ್ಶೆ
ಭಾರತದಲ್ಲಿ ಬೈಕ್ ರೈಡಿಂಗ್ ಮಾಡಿವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದು ಆಫ್-ರೋಡ್ ಅಥವಾ ಲಾಂಗ್ ಡ್ರೈವ್ ಆಗಿರಬಹುದು. ಅದಕ್ಕೆ ತಕ್ಕಂತೆ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಕೂಡ ಅತ್ಯಾಕರ್ಷಕ ಅಡ್ವೆಂಚರ್ಸ್ ಮೋಟಾರ್ ಸೈಕಲ್ ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿವೆ.
ಸದ್ಯ, ಆಸ್ಟ್ರಿಯನ್ ಮೋಟಾರ್ ಸೈಕಲ್ ಬ್ರ್ಯಾಂಡ್ ಕೆಟಿಎಂ (KTM) ಸಹ ಹೊರತಾಗಿಲ್ಲ. 2019ರಲ್ಲಿ ಯುವಕರ ಹಾಟ್ ಫೆವರೇಟ್ ಎಂದು ಕರೆಸಿಕೊಳ್ಳುವ 390 ಅಡ್ವೆಂಚರ್ ಬೈಕ್‌ನ್ನು ಬಿಡುಗಡೆ ಮಾಡಿತ್ತು. ನಾಲ್ಕು ವರ್ಷಗಳ ಬಳಿಕ, ತನ್ನ ಗ್ರಾಹಕರಿಗಾಗಿ ಈ ಮೋಟಾರ್ ಸೈಕಲ್ ಅನ್ನು ಮತ್ತಷ್ಟು ಆಧುನೀಕರಿಸಿ, SW ಹಾಗೂ X ಮಾದರಿಗಳನ್ನು ಪರಿಚಯಿಸಿದೆ. ನಮ್ಮ ತಂಡಕ್ಕೆ ಪುಣೆಯಲ್ಲಿ ಇವುಗಳನ್ನು ರೈಡ್ ಮಾಡುವ ಅವಕಾಶ ದೊರೆಯುತು. ಹೇಗಿವೆ ಎಂದು ತಿಳಿಯೋಣ ಬನ್ನಿ.

ಕೆಟಿಎಂ 390 ಅಡ್ವೆಂಚರ್ SW ಹಾಗೂ X ರೂಪಾಂತರದಲ್ಲಿ ಆಗಿರುವ ಬದಲಾವಣೆಗಳೇನು?: ಮೊದಲಿಗೆ ಕೆಟಿಎಂ 390 ಅಡ್ವೆಂಚರ್ SW ಮಾದರಿ ಬಗ್ಗೆ ಮಾತನಾಡೋಣ. ಇದು ಸಸ್ಪೆನ್ಷನ್ ಹಾಗೂ ವೀಲ್ಸ್ ನಲ್ಲಿ ಪ್ರಮುಖ ಬದಲಾವಣೆಗಳನ್ನು ಪಡೆದಿದ್ದು, ಇತರೆ ಅಡ್ವೆಂಚರ್ 390 ಬೈಕ್‌ಗಳಿಗಿಂತ ಭಿನ್ನ ಎಂದು ಹೇಳಬಹುದು. ಆದರೆ, ಇದನ್ನು ಬರವಣಿಗೆಯಲ್ಲಿ ವಿವರಿಸುವುದು ತುಂಬಾ ಕಷ್ಟ. ಇದರ ಫ್ರಂಟ್ ಹಾಗೂ ರೇರ್ ಸಸ್ಪೆನ್ಷನ್ ಸೆಟಪ್ ಫುಲ್ ಅಡ್ಜಸ್ಟ್ಏಬಲ್ ಆಗಿದೆ.
ಅಪ್ ಸೈಡ್-ಡೌನ್ ಫ್ರಂಟ್ ಫೋರ್ಕ್ 30 ಕ್ಲಿಕ್ಸ್ ಕಂಪ್ರೆಷನ್ ಹಾಗೂ ರಿಬೌಂಡ್ ಅಡ್ಜಸ್ಟ್ಮೆಂಟ್ ಹೊಂದಿದೆ. ಎರಡಕ್ಕೂ ಫ್ಯಾಕ್ಟರಿ ಸೆಟ್ಟಿಂಗ್ 15 ಕ್ಲಿಕ್ಸ್ ಇದೆ. ರೇರ್ ಮೊನೊಶಾಕ್ 20 ಕ್ಲಿಕ್ಸ್ ಅಡ್ಜಸ್ಟ್ಮೆಂಟ್ ಪಡೆದಿದ್ದು, ಫ್ಯಾಕ್ಟರಿ ಸೆಟ್ಟಿಂಗ್ ಮೊನೊಶಾಕ್ 3 ಕ್ಲಿಕ್ಸ್ ಪ್ರಿಲೋಡ್, 10 ಕ್ಲಿಕ್ ರಿಬೌಂಡ್ ಹೊಂದಿದೆ. ಇದು ಸಸ್ಪೆನ್ಷನ್ ಸೆಟಪ್ ಕುರಿತ ಮುಖ್ಯ ಮಾಹಿತಿಯಾಗಿದೆ.

SW ರೂಪಾಂತರದ ವೀಲ್‌ಗಳ ಬಗ್ಗೆ ಮಾತನಾಡುವುದಾದರೆ, ಇದು ಅಲ್ಯೂಮಿನಿಯಂ ಆಧಾರಿತ ಸ್ಪೋಕ್ಡ್ ವೀಲ್‌ಗಳನ್ನು ಪಡೆದಿದೆ. ಇತರೆ ಕೆಟಿಎಂ 390 ಅಡ್ವೆಂಚರ್ ಬೈಕ್ ಗಳು ಸ್ಟೀಲ್ ವೀಲ್ಸ್ ಹೊಂದಿವೆ. ಲಾಂಗ್ ಡ್ರೈವ್, ಆಫ್-ರೋಡ್ ಚಾಲನೆಗೆ ಯೋಗ್ಯವಾಗುವಂತೆ ಮೆಟ್ಜೆಲರ್ ಟ್ಯೂಬಿಡ್ ಟೈರ್‌ಗಳನ್ನು ಪಡೆದಿದೆ. ಇದು ಸಾಕಷ್ಟು ಯುವ ಬೈಕ್ ರೈಡರ್ ಉತ್ಸಾಹಿಗಳಿಗೆ ಇಷ್ಟವಾಗುತ್ತದೆ.
ಕೆಟಿಎಂ 390 ಅಡ್ವೆಂಚರ್ X ರೂಪಾಂತರದ ಬಗ್ಗೆ ಹೇಳುವುದಾದರೆ, ಇದು ಆಕರ್ಷಕ TFT ಸ್ಕ್ರಿನ್, ಫ್ರಂಟ್ ಪಿಸ್ಟನ್ ಫೋರ್ಕ್ ಸಸ್ಪೆನ್ಷನ್ ಸೆಟಪ್ ಇದ್ದು, 170ಎಂಎಂ ಅಳತೆಯ ವೀಲ್ಸ್ ಹೊಂದಿದೆ. ಕ್ವಿಕ್‌ಶಿಫ್ಟರ್ ಕೂಡ ಬಳಕೆ ಮಾಡಲು ಅತ್ಯುತ್ತಮವಾಗಿದೆ. ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇದರಲ್ಲೂ MRF Meteor Mo-grip F2 ಟೈರ್ ಬಲದಲಿಗೆ ಮೆಟ್ಜೆಲರ್ ಟೈರ್‌ಗಳನ್ನೇ ಬಳಕೆ ಮಾಡಲಾಗಿದೆ.

ಕೆಟಿಎಂ 390 ಅಡ್ವೆಂಚರ್ SW ಹಾಗೂ X ರೂಪಾಂತರಗಳು ಒಂದೇ ರೀತಿಯ ಎಂಜಿನ್ ಆಯ್ಕೆಯನ್ನು ಹೊಂದಿವೆ. 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8,000 rpmನಲ್ಲಿ 42.9 bhp ಪವರ್ ಹಾಗೂ 7,000 rpmನಲ್ಲಿ 37 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.
ಕೆಟಿಎಂ 390 ಅಡ್ವೆಂಚರ್ SW ಹಾಗೂ X ಮಾದರಿ ರೈಡಿಂಗ್ ಅನುಭವ: ಕೆಟಿಎಂ 390 ಅಡ್ವೆಂಚರ್ SW ಬೈಕ್ ಅದರ ಸವಾರರಿಗೆ ಅತ್ಯುತ್ತಮ ರೈಡಿಂಗ್ ಅನುಭವ ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರಸ್ತೆಯ ತಿರುವುಗಳಲ್ಲಿಯೂ ಈ ಬೈಕ್ ಅನ್ನು ಉತ್ತಮವಾಗಿ ಓಡಿಸಬಹುದು. ಇದರಿಂದ ನಿಮ್ಮ ಪ್ರಯಾಣ ತುಂಬಾ ಆರಾಮದಾಯವಾಗಿರುತ್ತದೆ.

ಈ ಮೋಟಾರ್ ಸೈಕಲ್ ನಲ್ಲಿ ಸಸ್ಪೆನ್ಷನ್ ಸೆಟಪ್ ಸೆಟ್ಟಿಂಗ್ ಹೇಗಿರುತ್ತದೆ ಎಂದು ತಿಳಿಯಲು ಅದರ ಮಾಹಿತಿಯನ್ನು ಒಳಗೊಂಡ ಸ್ಟಿಕರ್ ವೊಂದನ್ನು ಕೆಟಿಎಂ ಕಂಪನಿ ನೀಡಿದೆ. ಬೈಕ್ ಮೇಲಿರುವ ಸೀಟ್ ತೆಗೆದರೆ, ಫ್ಯುಯೆಲ್ ಟ್ಯಾಂಕ್ ಮೇಲೆ ಒಂದು ಹಿಡನ್ ಸ್ಟಿಕರ್ ಇದ್ದು, ಅಲ್ಲಿ ಯಾವ ರೀತಿ ಸಸ್ಪೆನ್ಷನ್ ಸೆಟ್ಟಿಂಗ್ ಮಾಡಬಹುದು ಎಂದು ತಿಳಿಯುತ್ತದೆ.
ಕೆಟಿಎಂ 390 ಅಡ್ವೆಂಚರ್ SW ಬೈಕ್ ಅನ್ನು ಸಾಮಾನ್ಯ ರಸ್ತೆಗಳಲ್ಲಿಯೂ ಒಡಿಸಬಹುದು. ಆದರೆ, ಆಫ್ ರೋಡ್ ಚಾಲನೆಗೆ ಹೆಚ್ಚು ಸೂಕ್ತವಾಗಿದ್ದು, ನೀವು ಆಫ್ ರೋಡ್ ಉತ್ಸಾಹಿ ಆಗಿದ್ರೆ, ಇದಕ್ಕಿಂತ ಮತ್ತೊಂದು ಉತ್ತಮ ಆಯ್ಕೆ ಇಲ್ಲ ಎಂದೇ ಹೇಳಬಹುದು. ನಿಮಗೆ ಬೇಕಿರುವ ಎಲ್ಲ ರೀತಿಯ ಕಂಫರ್ಟ್ ಈ ಬೈಕ್ ನಲ್ಲಿದ್ದು, ಅಡ್ವೆಂಚರ್ X ಗೆ ಹೋಲಿಸಿದರೆ ಕೊಂಚ ದುಬಾರಿ.

ಕೆಟಿಎಂ 390 ಅಡ್ವೆಂಚರ್ X ಬಗ್ಗೆ ರೈಡಿಂಗ್ ಬಗ್ಗೆ ಹೇಳುವುದಾದರೆ, ಸಾಮಾನ್ಯ ರಸ್ತೆಯಲ್ಲಿ ಈ ಬೈಕ್ ಓಡಿಸುವುದು ಉತ್ತಮ ಅನುಭವನ್ನು ನೀಡುತ್ತದೆ. ಅದಕ್ಕೆ ಹೊಂದಾಣೆಕೆಯಾಗುವ ವೀಲ್ಸ್ ಹಾಗೂ ಟೈಯರ್ ಗಳನ್ನು ಪಡೆದಿದೆ. ಆದರೂ ಆಫ್-ರೋಡ್ ಚಾಲನೆ ಮಾಡಬಹುದು. ಅದು ಕೊಂಚ ಕಷ್ಟವಾಗಬಹುದು. ಆಫ್-ರೋಡ್ ಪ್ರಿಯರಿಗೆ SW ಮಾದರಿಯೇ ಸೂಕ್ತವಾಗಿದೆ. X ಮಾದರಿ ಸುಲಭ ಬಳಕೆಗೆ ಅತ್ಯುತ್ತವಾಗಿದೆ.
ಡ್ರೈವ್ ಸ್ಮಾರ್ಕ್ ಅಭಿಪ್ರಾಯ: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅಡ್ವೆಂಚರ್ಸ್ ರೈಡ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಬಹುತೇಕ ಯುವ ಉತ್ಸಾಹಿ ರೈಡರ್ ಗಳು ಕೆಟಿಎಂನತ್ತ ಮುಖ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕಂಪನಿಯು ಗ್ರಾಹಕರನ್ನು ಆಶೋತ್ತರಗಳನ್ನು ಪೂರೈಸಲು ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಅದರ ಭಾಗವೇ ಕೆಟಿಎಂ 390 ಅಡ್ವೆಂಚರ್ SW ಹಾಗೂ X ಮಾದರಿಗಳು.
ಇದರಲ್ಲಿ ಅಡ್ವೆಂಚರ್ SW ಮಾದರಿ ಸಸ್ಪೆನ್ಷನ್ ಸೆಟಪ್ ಹಾಗೂ ವೀಲ್ಸ್ ಆಫ್ ರೋಡ್ ಪ್ರಿಯರಿಗೆ ಹೇಳಿ ಮಾಡಿಸಿದ ರೀತಿಯಲ್ಲಿ ಇದ್ದು, ದೇಶದಲ್ಲಿ ಹೆಚ್ಚಾಗಿ ಕಂಡುಬರುವ ಗುಡ್ಡಗಾಡಿನ ರಸ್ತೆಯಲ್ಲಿ ಈ ಬೈಕ್ ಸುಲಭವಾಗಿ ಅಡ್ಜಸ್ಟ್ ಆಗುತ್ತದೆ. X ಮಾದರಿ ಕೂಡ ಅತ್ಯತ್ತಮವಾಗಿದ್ದು, ಸಾಮಾನ್ಯ ರಸ್ತೆಗಳಲ್ಲಿ ಇದಕ್ಕೆ ಸರಿ ಸಾಟಿಯೇ ಇಲ್ಲ. ಇವುಗಳಲ್ಲಿ ಯಾವ ಬೈಕ್ ಬೇಕೆಂದು ನೀವೇ ಆರಿಸಿಕೊಳ್ಳಿ.


Click it and Unblock the Notifications








