River Indie Review: ರಿವರ್ ಇಂಡೀ ಇವಿಯಲ್ಲಿ ನಮ್ಮ ಮೋಜಿನ ಸವಾರಿ, ಸ್ಕೂಟರ್ ಹೇಗಿದೆ ಅಂದ್ರೆ!
ಬೆಂಗಳೂರು ಮೂಲದ EV ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಿವರ್ EV ತನ್ನ ಮೊದಲ ಸ್ಕೂಟರ್ ಇಂಡೀ ಅನ್ನು ಇದೇ ವರ್ಷದ ಮಾರ್ಚ್‌ನಲ್ಲಿ ಪರಿಚಯಿಸಿತು. ರಿವರ್ ಇಂಡೀ ಒಂದು ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ಇದಕ್ಕೆ 'SUV ಆಫ್ ಸ್ಕೂಟರ್' ಎಂಬ ವಿಲಕ್ಷಣ ಅಡಿಬರಹವನ್ನು ಕಂಪನಿ ನೀಡಿದೆ.
ಕಂಪನಿಯು ರಿವರ್ ಇಂಡೀ ಬೆಲೆಯನ್ನು 1.25 ಲಕ್ಷ (ಎಕ್ಸ್-ಶೋರೂಂ) ರೂ.ಗೆ ನಿಗಧಿಪಡಿಸಿದೆ. ಆದರೆ ಗ್ರಾಹಕರು ಖರೀದಿಸುವ ಮುನ್ನ ಸ್ಕೂಟರ್ ಬೆಲೆಗೆ ತಕ್ಕಂತೆ ಇದೆಯೇ ಎಂಬುದನ್ನು ನೋಡುತ್ತಾರೆ. ಹಾಗಾಗಿ ಗ್ರಾಹಕರಿಗೆ ಸ್ಕೂಟರ್ ಹೇಗಿದೆ ಎಂಬುದನ್ನು ತಿಳಿಸಿಕೊಡಲು ನಾವು ರಿವರ್ ಇಂಡೀ ಸ್ಕೂಟರ್ ಅನ್ನು ಬೆಂಗಳೂರಿನ ಸುತ್ತಮುತ್ತ ಓಡಿಸಿದ್ದೇವೆ. ಸ್ಕೂಟರ್ ಖರೀದಿಸಲು ಬಯಸುವವರಿಗೆ ಈ ಕೆಳಗಿನ ವಿಮರ್ಶೆ ಉಪಯುಕ್ತವಾಗಲಿದೆ.

ರಿವರ್ ಇಂಡೀ ರಿವ್ಯೂ: ಈ ಹೊಸ ಸ್ಕೂಟರ್ ವಿನ್ಯಾಸವು 'ವಿಶಿಷ್ಟ'ವಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಅದರ ಬಾಕ್ಸ್ ಲೈಟಿಂಗ್ ಸೆಟಪ್‌ನೊಂದಿಗೆ ಇತರ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಭಿನ್ನವಾಗಿ ಕಾಣುತ್ತದೆ. ಮುಂಭಾಗದಲ್ಲಿ, ಡ್ಯುಯಲ್ ಸ್ಕ್ವೇರ್ ಎಲ್‌ಇಡಿ ಹೆಡ್‌ಲೈಟ್‌ಗಳು ವಾಲ್-ಇ ನ ಕಣ್ಣುಗಳಂತೆ ಕಾಣುತ್ತವೆ.
ಮಾನ್ಸೂನ್ ಬ್ಲೂ, ಸಮ್ಮರ್ ರೆಡ್ ಮತ್ತು ಸ್ಪ್ರಿಂಗ್ ಯೆಲ್ಲೋ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ನೀವು ಯಾವುದನ್ನು ಆರಿಸಿಕೊಂಡರೂ ಮುಂಭಾಗದ ಏಪ್ರನ್, ಮುಂಭಾಗದ ಫೆಂಡರ್ ಶೈನಿ ಬ್ಲಾಕ್ ಬಣ್ಣದಲ್ಲಿ ಬರುತ್ತದೆ. ತೆಳ್ಳಗಿನ ಇಂಡಿಕೇಟರ್‌ಗಳು ಎಲ್ಲರ ಗಮನಸೆಳೆಯುತ್ತದೆ. ಬದಿಗಳು ವಿಶಿಷ್ಟವಾದ ಡಿಸೈನ್ ಹೊಂದಿದ್ದು, ಒಟ್ಟಾರೆ ಪ್ಯಾಕೇಜ್ ಖರೀದಿಸಿದರೆ ಬದಿಗಳಿಂದಲೂ ಹೆಚ್ಚಿನ ಉಪಯುಕ್ತತೆ ಇರುತ್ತದೆ.

ಇಂಡೀ 14-ಇಂಚಿನ ಅಲಾಯ್ ವೀಲ್‌ಗಳು, ವಿಶಾಲವಾದ ಆಸನ ತುಂಬಾ ತಪ್ಪಗಿರುವವರಿಗೂ ಉತ್ತಮ ಸವಾರಿ ಅನುಭವವನ್ನು ಒದಗಿಸುತ್ತದೆ. ಒಮ್ಮೆ ನೀವು ಸೀಟ್ ಮೇಲೆ ಕುಳಿತು 6-ಇಂಚಿನ ಡಿಸ್‌ಪ್ಲೇಯತ್ತ ನೋಡಿದ್ರೆ, ಸ್ಕೂಟರ್ ಸ್ಥಿತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಹೇಳುತ್ತದೆ, ರೈಡಿಂಗ್ ಮೋಡ್‌ಗಳಿಂದ ವೇಗದವರೆಗೆ ಚಾರ್ಜ್ ಮಟ್ಟದ ಬಗ್ಗೆ ಎಲ್ಲವನ್ನೂ ವಿವರಿಸುತ್ತದೆ.
ಉದ್ದವಾದ ಫ್ಲೋರ್‌ಬೋರ್ಡ್‌ನೊಂದಿಗೆ, ಇಂಡಿಯು ಹ್ಯಾಂಡಲ್‌ಬಾರ್‌ಗಳಿಗೆ ಬಡಿದುಕೊಳ್ಳದೆ ಅತಿ ಎತ್ತರದ ಸವಾರರಿಗೂ ಕುಳಿತುಕೊಳ್ಳಲು ಅನುವು ಮಾಡಿಕೊಡುತ್ತದೆ. ಆಸನದ ಎತ್ತರವು 770mm ಇದ್ದು, ನಾವು ಕುಳಿತು ಸವಾರಿ ಮಾಡುವಾಗ ಯಾವುದೇ ಅಪರಿಪೂರ್ಣದ ಅನುಭವ ಒದಗಿಸುವುದಿಲ್ಲ. ಹಾಗೆಯೇ ನಮ್ಮ ಮೊನಕಾಲುಗಳು ಹ್ಯಾಂಡಲ್‌ಬಾರ್‌ಗಳಿಗೆ ತಾಗದಂತೆ ಡಿಸೈನ್ ಮಾಡಲಾಗಿದೆ.

ಬದಿಗಳು ಮುಂಭಾಗದಲ್ಲಿ ಟ್ಯೂಬ್ಯುಲರ್ ಗಾರ್ಡ್ ರೈಲ್‌ಗಳನ್ನು (ಫುಟ್ ರೆಸ್ಟ್) ಹೊಂದಿದ್ದು, ಫ್ಲಾಟ್ ಫ್ಲೋರ್‌ಬೋರ್ಡ್ ಅನ್ನು ಶೇಖರಣಾ ಸ್ಥಳವಾಗಿ (ಸಮಾನುಗಳನ್ನು ಸಾಗಿಸಲು) ಬಳಸಬಹುದು. ಈ ವೇಳೆ ಕಾಲುಗಳನ್ನು ಬದಿಗಳಲ್ಲಿ ಆರಾಮವಾಗಿಟ್ಟುಕೊಂಡು ಸವಾರಿ ಮಾಡಬಹುದು. ಜೊತೆಗೆ ಮುಂಭಾಗದ ಏಪ್ರನ್‌ನಲ್ಲಿ 12-ಲೀಟರ್ ಶೇಖರಣಾ ಪೆಟ್ಟಿಗೆಯನ್ನು ನೀಡಲಾಗಿದೆ.
ಹಾಗೆಯೇ USB ಚಾರ್ಜಿಂಗ್ ಪೋರ್ಟ್ ಅನ್ನು ಸಹ ಆ ಜಾಗದಲ್ಲಿ ನೀಡಲಾಗಿದೆ. ಆಸನದ ಕೆಳಗೆ ದೊಡ್ಡ ಹೆಲ್ಮೆಟ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬರೋಬ್ಬರಿ 43-ಲೀಟರ್ ಶೇಖರಣಾ ಪ್ರದೇಶವಿದೆ. ಈ ಜಾಗವು ನಿಮಗೆ ಸಾಕಾಗದೇ ಇದ್ದರೆ, ನೀವು ಲಾಕ್‌ಗೆ ಪ್ಯಾನಿಯರ್‌ಗಳನ್ನು ಅಳವಡಿಸಬಹುದು. ಹಿಂಭಾಗದ ಬದಿಗಳಿಗೆ ಲೋಡ್ ಮೌಂಟ್‌ಗಳನ್ನು ಅಳವಡಿಸಿ ಬಯಸಿದ್ದನ್ನು ಅಲ್ಲಿಟ್ಟುಕೊಂಡು ಸಾಗಿಸಬಹುದು.

ಇಂಡೀ ಹಿಂಭಾಗದ ಭಾಗವು ಆಯತಾಕಾರದ ಫ್ರಾಸ್ಟೆಡ್ ಗ್ಲಾಸ್ LED ಬ್ರೇಕ್ ಲೈಟ್‌ನಿಂದ ಹೊಂದಿದ್ದು, ಇದು ಲೋಗೋದ ಕೆಳಗೆ ಅಂಟಿಕೊಂಡಿದೆ. ಅದರ ಕೆಳಗೆ ಇಂಡಿಕೇಟರ್‌ಗಳು ಮತ್ತು ರಿಫ್ಲೆಕ್ಟ್ರ್‌ಗಳನ್ನು ನೀಡಲಾಗಿದೆ. ಇನ್ನು ಸ್ಕೂಟರ್‌ನ ಉದ್ದಳತೆಗಳನ್ನು ನೋಡುವುದಾದರೆ ಇಂಡೀಯು 1,365mm ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿದೆ. 165mm ಗ್ರೌಂಡ್ ಕ್ಲಿಯರೆನ್ಸ್ ಇದೆ.
ರಿವರ್ ಇಂಡೀ 32mm ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿರುವುದರ ಜೊತೆಗೆ ಡ್ಯುಯಲ್-ಕ್ರೇಡಲ್ ಟ್ಯೂಬುಲರ್ ಸ್ಟೀಲ್ ಫ್ರೇಮ್ ಸೆಟಪ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಅಲ್ಯೂಮಿನಿಯಂ ಡ್ಯುಯಲ್-ಸೈಡೆಡ್ ಸ್ವಿಂಗರ್ಮ್ ಅನ್ನು ಹೊಂದಿದೆ. ಮೊದಲೇ ಹೇಳಿದಂತೆ ಇಂಡಿಯು 14-ಇಂಚಿನ ಅಲಾಯ್ ವೀಲ್‌ಗಳ ಮೇಲೆ ಚಲಿಸುತ್ತದೆ.

ದಪ್ಪನಾದ 120-ವಿಭಾಗದ ಟೈರ್‌ಗಳನ್ನು ಹೊಂದಿದ್ದು ಇಂಡೀಗೆ ಬ್ರೇಕಿಂಗ್ ಒದಗಿಸಲು ಡಿಸ್ಕ್ ಬ್ರೇಕ್‌ಗಳು ಕಾಂಬಿ-ಬ್ರೇಕಿಂಗ್ ಸಿಸ್ಟಮ್‌ನಿಂದ ಸಹಾಯ ಮಾಡುತ್ತವೆ. ಮುಂಭಾಗದ ಡಿಸ್ಕ್ ಮೂರು-ಪಿಸ್ಟನ್ ಕ್ಯಾಲಿಪರ್‌ಗಳಿಂದ ಕ್ಲ್ಯಾಂಪ್ ಮಾಡಿದ 240 ಎಂಎಂ ಘಟಕವಾಗಿದ್ದು, ಹಿಂಭಾಗವು 200 ಮೀ ಯುನಿಟ್ ಒಂದೇ ಕ್ಯಾಲಿಪರ್‌ನಿಂದ ಸ್ಥಾಪಿತಗೊಂಡಿದೆ.
ಇಂಡೀಗೆ ಆ ಡಿಸ್ಕ್‌ಗಳು ಏಕೆ ಬೇಕು? ಇಂಡೀನಲ್ಲಿನ ಮಿಡಲ್-ಮೌಂಟೆಡ್ ಮಾಹ್ಲೆ-ಮೂಲದ ಎಲೆಕ್ಟ್ರಿಕ್ ಮೋಟರ್ 9bhp ಮತ್ತು 26Nm ಟಾರ್ಕ್ ನ ಗರಿಷ್ಠ ಉತ್ಪಾದನೆಯನ್ನು ಹೊರಹಾಕುತ್ತದೆ, ಇದನ್ನು ಬೆಲ್ಟ್ ಡ್ರೈವ್ ಸೆಟಪ್ ಮೂಲಕ ಹಿಂದಿನ ಚಕ್ರಕ್ಕೆ ಕಳುಹಿಸಲಾಗುತ್ತದೆ. NMC ಕೆಮಿಸ್ಟ್ರಿ ಕೋಶಗಳನ್ನು ಬಳಸುವ IP67-ರೇಟೆಡ್ 4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಮೋಟಾರ್ ಶಕ್ತಿಯನ್ನು ಪಡೆಯುತ್ತದೆ.

ರಿವರ್ EV ಒಂದೇ ಚಾರ್ಜ್‌ನಲ್ಲಿ 120km (ನೈಜವಾಗಿ ಸುಮಾರು 100km) ಮತ್ತು 5 ಗಂಟೆಗಳು ಚಾರ್ಜ್ ಮಾಡಿದರೆ ಶೇ80 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಪ್ರಸ್ತುತ ಹೆಚ್ಚುವರಿ ಡಿಸಿಯಂತಹ ಯಾವುದೇ ವೇಗದ ಚಾರ್ಜಿಂಗ್ ಆಯ್ಕೆಗಳು ಪ್ರಸ್ತುತ ಲಭ್ಯವಿಲ್ಲ. ಬ್ಯಾಟರಿ ಮತ್ತು ಸ್ಕೂಟರ್ ಎರಡನ್ನೂ 5 ವರ್ಷ/ 50,000 ಕಿ.ಮೀ ವಾರಂಟಿಯೊಂದಿಗೆ ನೀಡಲಾಗುತ್ತದೆ.
ರಿವರ್ ಇಂಡೀ ರೈಡಿಂಗ್ ಇಂಪ್ರೆಷನ್ಸ್: ಸ್ಕೂಟರ್ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ. ಇಕೋ, ರೈಡ್ ಮತ್ತು ರಶ್. ಇಕೋ ಮೋಡ್‌ನಲ್ಲಿ, ಗರಿಷ್ಠ ವೇಗವು 55km/h ಗೆ ಸೀಮಿತವಾಗಿದೆ. ರೈಡ್ ಮೋಡ್‌ನಲ್ಲಿ ಗಂಟೆಗೆ 90 ಕಿ.ಮೀ ಎಂದು ರೇಟ್ ಮಾಡಲಾಗಿದೆ. ರಶ್ ಮೋಡ್‌ನಲ್ಲಿ ಪಿಕಪ್ ಹೆಚ್ಚಾಗಿದ್ದು 40 ಕಿ.ಮೀ ವೇಗವನ್ನು 3.9 ಸೆಕೆಂಡ್‌ಗಳಲ್ಲಿ ತಲುಪುತ್ತದೆ. ಇನ್ನು ಟಾಪ್ ಸ್ಪೀಡ್ 90 ಕಿ.ಮೀ ತಲುಪುತ್ತದೆ.

ನೀವು ಮೋಜಿನ ರೈಡ್ ಅನುಭವ ಪಡಿಯಬೇಕಾದ್ರೆ, ರಶ್ ಮೋಡ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಮೋಡ್‌ನಲ್ಲಿ ಪ್ರಾಯಣಿಸುವಾಗ ಸ್ಕೂಟರ್ ಚಾರ್ಜ್ ಕಡಿಮೆಯಾದ್ರೆ ಇಕೋ ಮೋಡ್‌ಗೆ ಅಥವಾ ಚಾರ್ಜರ್ ಹಾಕಿ. ಇದರ ದೊಡ್ಡ ಚಕ್ರಗಳು (ದಪ್ಪವಾದ ಟೈರ್‌ಗಳೊಂದಿಗೆ) ಮತ್ತು ಮೃದುವಾದ ಸಸ್ಪೆನ್ಷನ್ ಸೆಟಪ್ ಉಬ್ಬುಗಳು ಮತ್ತು ಹೊಂಡಗಳಲ್ಲಿ ಸುಲಭವಾಗಿ ನಿರ್ವಹಿಸುತ್ತದೆ.
ಡಿಸ್ಕ್‌ಗಳು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತ್ವರಿತವಾಗಿ ಸ್ಥಗಿತಗೊಳಿಸುವುದರಿಂದ ಇಂಡೀ ಬ್ರೇಕಿಂಗ್ ಕಾರ್ಯಕ್ಷಮತೆ ಕೂಡ ಉತ್ತಮವಾಗಿದೆ. ಆದಾಗ್ಯೂ, ಕಾಂಬಿ-ಬ್ರೇಕಿಂಗ್ ವ್ಯವಸ್ಥೆಯು ಸ್ವಲ್ಪ ಸೂಕ್ಷ್ಮವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಕೆಲವೊಮ್ಮೆ, ನೀವು ಹಿಂಬದಿಯ ಬ್ರೇಕ್‌ಗಾಗಿ ಕೇಳಿದರೆ, ಹಿಂಭಾಗವು ಕೇವಲ ತೊಡಗಿಸಿಕೊಂಡಿರುವಾಗ ಮುಂಭಾಗವು ನಿರೀಕ್ಷೆಗಿಂತ ವೇಗವಾಗಿ ಕ್ಲ್ಯಾಂಪ್ ಮಾಡುವುದನ್ನು ನೀವು ಕಾಣಬಹುದು.

ರಿವರ್ ಇಂಡೀ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ರಿವರ್ ಇಂಡೀ ಒಂದು ಅನನ್ಯ ವಿನ್ಯಾಸ, ದೊಡ್ಡ ಶೇಖರಣಾ ಆಯ್ಕೆಗಳೊಂದಿಗೆ ಬರುತ್ತದೆ. ಇದು ನಿಮ್ಮನ್ನು ಮತ್ತು ನಿಮ್ಮ ಎಲ್ಲಾ ಶಾಪಿಂಗ್ ಮತ್ತು ಹೆಚ್ಚುವರಿ ವಸ್ತುಗಳನ್ನು ನಗರದಾದ್ಯಂತ ಸುಲಭವಾಗಿ ಕೊಂಡೊಯ್ಯಬಹುದು. ವೇಗವಾದ ಚಾರ್ಜಿಂಗ್ ಆಯ್ಕೆ ಒಂದು ಬಿಟ್ಟರೆ, ಕಾಂಬಿ-ಬ್ರೇಕಿಂಗ್ ಸಿಸ್ಟಮ್‌ಗೆ ಸ್ವಲ್ಪ ಟ್ವೀಕ್ ಮಾಡುವುದರಿಂದ ರಿವರ್ ಇಂಡೀ ಸ್ಪೋರ್ಟಿ ಮತ್ತು ಉಪಯುಕ್ತವಾದ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹುಡುಕುತ್ತಿರುವವರಿಗೆ ಶಿಫಾರಸು ಮಾಡಬಹುದು.


Click it and Unblock the Notifications








