ಇಂಡೋನೇಷ್ಯಾದಲ್ಲಿ 2014 ಹೋಂಡಾ ಸಿಬಿಆರ್250ಆರ್ ಲಾಂಚ್
ಜಪಾನ್‌ನ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, 2014 ಸಿಬಿಆರ್ 250ಆರ್ ಬೈಕ್ ಲಾಂಚ್ ಮಾಡಿದೆ. ಈ ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್ ಸದ್ಯದಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದು ಸದ್ಯದ ಹಾಟ್ ಸುದ್ದಿ.
2014 ಹೋಂಡಾ ಸಿಬಿಆರ್ 250ಆರ್ ಕೇವಲ ನಾಮಮಾತ್ರಕ್ಕಷ್ಟೇ ಫೇಸ್‌ಲಿಫ್ಟ್ ರೂಪವನ್ನು ಪಡೆದುಕೊಂಡಿರುವುದು. ಇದು ಇನ್ನಿತರ ಹಲವಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇವೆಲ್ಲವನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಇಂಡೋನೇಷ್ಯಾ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೊಸ ಸಿಬಿಆರ್ 250ಆರ್. ಮುಂದಿನ ಸ್ಲೈಡರ್‌ನಲ್ಲಿ ಹಳೆಯ ಮಾದರಿಯನ್ನು ಗುರುತಿಸಿ.

ಚಿತ್ರದಲ್ಲಿರುವುದು ಭಾರತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹಳೆಯ ಸಿಬಿಎರ್ 250ಆರ್. ಇದೀಗ ಬದಲಾವಣೆಗಳನ್ನು ನೀವೇ ಗುರುತಿಸಿಕೊಳ್ಳಬಹುದಾಗಿದೆ.

ಮುಂಭಾಗದಲ್ಲಿ ಪ್ರಮುಖ ಬದಲಾವಣೆ ಕಂಡುಬಂದಿದ್ದು, ಡ್ಯುಯಲ್ ಹೆಡ್ ಲ್ಯಾಂಪ್ ವಿನ್ಯಾಸ ಕಂಡುಬಂದಿದೆ.

ಹೊಸ ಮಾದರಿಯು ಸಿಬಿಆರ್ 500ಆರ್‌ನಿಂದ ಸ್ಫೂರ್ತಿ ಪಡೆದು ರಚಿಸಲಾಗಿದೆ.

ಇದರ ಫೇರ್ಡ್ ವಿನ್ಯಾಸ, ಹಿಂಭಾಗದ ಬದಲಾವಣೆ ಹಾಗೂ ಕ್ರೋಮ್ ಎಕ್ಸಾಸ್ಟ್ ಫಿನಿಶಿಂಗ್ ಪ್ರಮುಖವಾಗಿದೆ.

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದು 249ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 29.4 ಅಶ್ವಶಕ್ತಿ (23 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದುಕೊಳ್ಳಲಿದೆ.

ಅಂತಿಮವಾಗಿ ಹಳೆಯ ಮಾದರಿಗಿಂತಲೂ 3. ಕೆ.ಜಿ ಹಗುರವಾಗಲಿರುವ ಹೊಸ ಆವೃತ್ತಿಯು 164 ಕೆ.ಜಿ ಭಾರ ಹೊಂದಿರಲಿದೆ. ಅಲ್ಲದೆ 11 ಎಂಎಂ ವೀಲ್‌ಬೇಸ್ ಸಹ (1378 ಎಂಎಂ) ಹೆಚ್ಚಿಸಲಾಗಿದೆ.

ದರ ಮಾಹಿತಿ
2014 ಹೋಂಡಾ ಸಿಬಿಆರ್ 250 ಆರ್ ಸ್ಟಾಂಡರ್ಡ್ ವರ್ಷನ್ ಇಂಡೋನೇಷ್ಯಾದಲ್ಲಿ 2.52 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಹಾಗೆಯೇ ಎಬಿಎಸ್ ವರ್ಷನ್‌ಗಾಗಿ 2.98 ಲಕ್ಷ ರು. ಪಾವತಿಸಬೇಕಾಗಿದೆ.


Click it and Unblock the Notifications








