ಹೀರೊ ಪ್ರಚಾರಕ್ಕೆ ಬಾಲಿವುಡ್ ಬ್ಯೂಟಿ ಆಲಿಯಾ ಭಟ್
ದೇಶದ ನಂ.1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಸದ್ಯದಲ್ಲೇ ಹೊಸ ಪ್ರಚಾರ ರಾಯಭಾರಿ ನೇಮಕ ಮಾಡುವುದು ನಿಚ್ಚಳವಾಗಿದೆ. ಅದು ಬೇರೆ ಯಾರು ಅಲ್ಲ. ಸದ್ಯ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿರುವ ನಟಿ ಆಲಿಯಾ ಭಟ್.
ಯುವ ಗ್ರಾಹಕರನ್ನು ಹೆಚ್ಚು ಸೆಳೆಯುವ ಮೂಲಕ ಮಾರಾಟಕ್ಕೆ ಉತ್ತೇಜನ ನೀಡುವುದು ಸಂಸ್ಥೆಯ ಗುರಿಯಾಗಿದೆ. ಇದರೊಂದಿಗೆ ಹೋಂಡಾ ಸವಾಲನ್ನು ಎದುರಿಸುವ ಯೋಜನೆಯನ್ನು ಹೀರೊ ಹೊಂದಿದೆ.

ನಿರ್ಮಾಪಕ ಮಹೇಶ್ ಭಟ್ ಪುತ್ರಿಯಾಗಿರುವ 21ರ ಹರೆಯದ ಆಲಿಯಾ, ಪ್ರಚಾರ ರಾಯಭಾರಿಯಾಗಿ ನೇಮಕಗೊಂಡರೆ ಹೀರೊಗೆ ಇಬ್ಬರು ಬ್ರಾಂಡ್ ಅಂಬಾಸಿಡರ್‌ಗಳು ಸಿಕ್ಕಿದಂತಾಗುತ್ತದೆ. ಈಗಾಗಲೇ ರಣಬೀರ್ ಕಪೂರ್ ಬ್ರಾಂಡ್ ಅಂಬಾಸಿಡರ್ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಆಲಿಯಾಳ ಮೊದಲ ಪ್ರಚಾರ ಕಾರ್ಯವು ಹೀರೊ ಆಟೋಮ್ಯಾಟಿಕ್ ಕಾರು ಪ್ಲೆಷರ್ ಮುಖಾಂತರ ನೆರವೇರಲಿದೆ. ಈ ಮೂಲಕ ಮಹಿಳಾ ಗ್ರಾಹಕರನ್ನು ಸೆಳೆಯಲಿದ್ದಾರೆ. ನಿಮ್ಮ ಮಾಹಿತಿಗಾಗಿ, ಈ ಹಿಂದೆ ಪ್ರಿಯಾಂಕಾ ಚೋಪ್ರಾ ಮೂಲಕ ಪ್ಲೆಷರ್ ಸ್ಕೂಟರ್ ಪ್ರಚಾರ ನಡೆಸಲಾಗಿತ್ತು.


Click it and Unblock the Notifications








