ಬಿಎಂಡಬ್ಲ್ಯು ಪ್ರೀಮಿಯಂ ಬೈಕ್ ಭಾರತದಲ್ಲಿ ಮಾರಾಟಕ್ಕೆ
ಕಳೆದ ಕೆಲವು ಸಮಯಗಳಿಂದ ಬಿಎಂಡಬ್ಲ್ಯು ಬೈಕ್‌ಗಳು ಭಾರತದಲ್ಲಿ ಮಾರಾಟಕ್ಕಿದೆ. ಆದರೆ ಈ ಪ್ರೀಮಿಯಂ ಹಾಗೂ ಶಕ್ತಿಶಾಲಿ ಬೈಕ್‌ಗಳನ್ನು ಮಾರಾಟ ಮಾಡಲು ತನ್ನದೇ ಆದ ಶೋ ರೂಂಗಳ ಕೊರತೆ ಕಾಡುತ್ತಿತ್ತು. ಇದರಿಂದಾಗಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಆಯ್ದ ನಗರಗಳಲ್ಲಿ ಮಾರಾಟ ಮಾಡುವ ಗುರಿಯಿರಿಸಿಕೊಂಡಿದೆ.
ಪ್ರಸ್ತುತ ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಅಧಿಕೃತವಾಗಿ ಎಸ್1000ಆರ್ ಲಾಂಚ್ ಮಾಡಿದೆ. ಇದರ ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 26.50 ಲಕ್ಷ ರು. ರುಪಾಯಿ.

ಇದು ಪ್ರಮುಖವಾಗಿಯೂ ಜಪಾನ್ ನಿರ್ಮಿತ ಕವಾಸಕಿ ಝಡ್1000 ಹಾಗೂ ಹೋಂಡಾ ಸಿಬಿ1000ಆರ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಹಾಗಿದ್ದರೂ ದರದ ವಿಚಾರದಲ್ಲಿ ಜರ್ಮನಿಯ ಈ ನೆಕ್ಡ್ ಸ್ಪೋರ್ಟ್ಸ್ ಬೈಕ್ ತುಂಬಾನೇ ದುಬಾರಿಯೆನಿಸಲಿದೆ.
ಈ ಮೊದಲೇ ತಿಳಿಸಿರುವಂತೆಯೇ ಜರ್ಮನಿಯ ಈ ಪ್ರೀಮಿಯಂ ಆಯ್ದ ನಗರಗಳಲ್ಲಿ ಮಾತ್ರ ಲಭ್ಯವಾಗಲಿದೆ. ಇದು ಮುಂಬೈ ಹಾಗೂ ಬೆಂಗಳೂರಿನಲ್ಲಿ ನವನೀತ್ ಮೋಟಾರ್ಸ್‌ಗಳಲ್ಲಿ ಲಭ್ಯವಾಗಲಿದೆ.
ಅಂದ ಹಾಗೆ ಎಸ್1000 ಆರ್ ಸೂಪರ್ ಬೈಕ್‌ನಲ್ಲಿ, 1000ಸಿಸಿ ಇನ್ ಲೈನ್ ಫೋರ್ ಎಂಜಿನ್ ಆಳವಡಿಸಲಾಗಿದ್ದು, 163 ಅಶ್ವಶಕ್ತಿ (112 ಎನ್‌ಎಂ ಟಾರ್ಕ್) ಶಕ್ತಿ ಹೊಂದಿದೆ. ಅಷ್ಟೇ ಅಲ್ಲದೆ ಚಾಲಕರು ಡೈನಾಮಿಕ್, ಡೈನಾಮಿಕ್ ಆರ್, ರೈನ್ ಹಾಗೂ ರೋಡ್ ಮೋಡ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.


Click it and Unblock the Notifications








