ಕಾಂಟಿನೆಂಟಲ್ ಕಾರ್ನರಿಂಗ್ ಎಬಿಎಸ್ ಸಿಸ್ಟಂ ಭಾರತಕ್ಕೆ?

By Nagaraja

ವಾಹನಗಳ ಸುರಕ್ಷತೆ ಕಾಪಾಡುವ ಹಿನ್ನೆಲೆಯಲ್ಲಿ ವ್ಯಾಪಕ ಬದಲಾವಣೆಗಳಿಗೆ ಮುಂದಾಗಿರುವ ಭಾರತ ಸರಕಾರವು ಕಾರು ಹಾಗೂ ಬೈಕ್‌ಗಳಿಗೆ ಅನೇಕ ನೂತನ ಸುರಕ್ಷಾ ಮಾನದಂಡಗಳನ್ನು ಆಳವಡಿಸುವ ಯೋಜನೆಯಲ್ಲಿದೆ.

ಇವುಗಳಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಎಬಿಎಸ್ ಹಾಗೂ ಏರ್ ಬ್ಯಾಗ್ ಸ್ಟಾಂಡರ್ಡ್ ಮಾಡುವುದು ಪ್ರಮುಖವಾಗಿದೆ. ಅದೇ ರೀತಿ ದ್ವಿಚಕ್ರ ವಾಹನಗಳಿಗೂ ಎಬಿಎಸ್ ಕಡ್ಡಾಯಗೊಳಿಸುವ ಇರಾದೆಯಲ್ಲಿದೆ.

CONTINENTAL

ಇದರಂತೆ ಎಲ್ಲ ಸಂಸ್ಥೆಗಳು ಎಬಿಎಸ್ ಉಪಕರಣ ಅಭಿವೃದ್ಧಿಪಡಿಸುವುದರಲ್ಲಿ ಕಾರ್ಯ ಮಗ್ನವಾಗಿದೆ. ಇದೀಗ ಚಕ್ರ, ಬ್ರೇಕ್ ಸಿಸ್ಟಂ, ಸೇಫ್ಟಿ, ಪವರ್ ಹಾಗೂ ಚಾಸೀ ನಿರ್ಮಾಣದಲ್ಲಿ ಹೆಸರುವಾಸಿಯಾಗಿರುವ ಜರ್ಮನಿಯ ಪ್ರತಿಷ್ಠಿತ ಆಟೋಮೋಟಿವ್ ಸಂಸ್ಥೆ ಕಾಂಟಿನೆಂಟಲ್ ಮೋಟಾರು ಸೈಕಲ್‌ಗಾಗಿ ಹೊಸತಾದ ಕಾರ್ನರಿಂಗ್ ಎಬಿಎಸ್ ಸಿಸ್ಟಂ ಪರಿಚಯಿಸಿದೆ.

ಕಾಂಟಿನೆಂಟಲ್‌ನ ಕಾರ್ನರಿಂಗ್ ಎಬಿಸ್ ವ್ಯವಸ್ಥೆಯು ಮೊದಲ ಬಾರಿಗೆ ಬಿಎಂಡಬ್ಲ್ಯು ಎಸ್1000ಎಕ್ಸ್‌ಆರ್ ಮಾದರಿಯಲ್ಲಿ ಬಳಕೆಯಾಗಲಿದೆ. ಈ ಮೂಲಕ ಇಂತಹದೊಂದು ತಂತ್ರಗಾರಿಕೆ ಪಡೆದ ಮೊದಲ ಬೈಕ್ ಎಂದೆನಿಸಿಕೊಳ್ಳಲಿದೆ.

ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಬಿಎಂಡಬ್ಲ್ಯು ಬೈಕ್‌ಗಳಲ್ಲೂ ಇದೇ ತಂತ್ರಗಾರಿಕೆ ನಿರೀಕ್ಷಿಸಬಹುದಾಗಿದೆ. ಪ್ರಸ್ತುತ ಬಾಷ್ ಸಂಸ್ಥೆ ಮಾತ್ರ ಕಾಂಟಿನೆಂಟಲ್‌ಗೆ ಸಮಾನವಾದ ಕಾರ್ನರಿಂಗ್ ಎಬಿಎಸ್ ಸಿಸ್ಟಂ ಬಳಕೆ ಮಾಡುತ್ತಿದೆ.

2013ನೇ ಸಾಲಿನಲ್ಲಿ ಪರಿಚಯವಾಗಿರುವ ಈ ಬಾಷ್ ಕಾರ್ನರಿಂಗ್ ಎಬಿಎಸ್ ತಂತ್ರಜ್ಞಾನವನ್ನು ಕೆಟಿಎಂ 1290 ಸೂಪರ್ ಅಡ್ವೆಂಚರ್ ಬೈಕ್‌ನಲ್ಲಿ ಬಳಕೆ ಮಾಡಲಾಗಿತ್ತು.

Article Published On: Thursday, December 11, 2014, 16:33 [IST]
English summary
The current Government in India is planning to implement several safety measures for cars as well as motorcycles. They plan to make it mandatory that four wheelers will offer airbags and ABS as standard equipment, while two wheeler will have to be compulsorily offered with ABS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+