ಭಾರತಕ್ಕೆ ಬರಲಿದೆ ಬೆನೆಲ್ಲಿ ಸೂಪರ್ ಬೈಕ್
ಇದುವರೆಗೆ ದೇಶಕ್ಕೆ ಹ್ಯೊಸಂಗ್ ಮೋಟಾರ್‌ಸೈಕಲುಗಳನ್ನು ಪರಿಚಯಿಸುತ್ತಿದ್ದ ಡಿಎಸ್‌ಕೆ ತನ್ನ ವ್ಯಾಪಾರ ವಲಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಇರಾದೆಯಲ್ಲಿದ್ದು, ಇಟಲಿಯ ಸೂಪರ್ ಬೈಕ್ ಬೆನೆಲ್ಲಿ ಭಾರತಕ್ಕೆ ತರುವ ಯೋಜನೆಯಲ್ಲಿದೆ.
ಹ್ಯೊಸಂಗ್ ಜೊತೆ ಪಾಲುದಾರಿಕೆ ಹೊಂದಿದ್ದ ಡಿಎಸ್‌ಕೆ ಮೊಟೊವೀಲ್ಸ್, ದೇಶಕ್ಕೆ ಅತ್ಯಾಕರ್ಷಕ ಬೈಕ್‌ಗಳನ್ನು ಪರಿಚಯಿಸಿತ್ತು. ಇದೀಗ ಇಟಲಿಯ ಐಕಾನಿಕ್ ಐಕಾನಿಕ್ ಬೆನೆಲ್ಲಿ ಜೊತೆಗೂ ಬಾಂಧವ್ಯ ಕಂಡುಕೊಳ್ಳುವ ಇರಾದೆಯಲ್ಲಿದೆ.

ಸದ್ಯ ಚೀನಾ ಮೂಲದ ಕ್ವಿಯಾನ್‌ಜಿಯಾಂಗ್ ಕಾರ್ಪೋರೇಷನ್ ಅಧೀನತೆಯಲ್ಲಿರುವ ಬೆನೆಲ್ಲಿ, ಸೂಪರ್ ಬೈಕ್ ವಿಭಾಗದಲ್ಲಿ ಹೆಸರು ಮಾಡಿದೆ. ಇದು 300 ಸಿಸಿ ನೆಕ್ಡ್ ಸ್ಟ್ರೀಟ್ ಫೈಟರ್‌ನಿಂದ ಆರಂಭವಾಗಿ 1130 ಸಿಸಿ ಇನ್ ಲೈನ್ ತ್ರಿ ಸಿಲಿಂಡರ್ ಟೂರರ್ ವರೆಗಿನ ಮಾದರಿಯನ್ನು ಪಡೆದುಕೊಂಡಿದೆ.
ಅದೇ ರೀತಿ ಬೆನೆಲ್ಲಿ ಎಂಟ್ರಿ ಲೆವೆಲ್ ಸೂಪರ್ ಬೈಕ್ ಬಿಎನ್302 300 ಸಿಸಿ ಬೈಕ್ ಪರಿಚಯವಾದ್ದಲ್ಲಿ ಇದು ಕೆಟಿಎಂ ಡ್ಯೂಕ್ 390 ಮಾದರಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








