10 ಲಕ್ಷ ನಿರ್ಮಾಣ ಮೈಲುಗಲ್ಲು ತಲುಪಿದ ಡುಕಾಟಿ
ಇಟಲಿಯ ಪ್ರತಿಷ್ಠಿತ ಬೈಕ್‌ಗಳಲ್ಲಿ ಒಂದಾಗಿರುವ ಡುಕಾಟಿ 10 ಲಕ್ಷ ಯುನಿಟ್‌ಗಳ ನಿರ್ಮಾಣವನ್ನು ತಲುಪಿದೆ. ಮೊನಸ್ಟರ್ 1200ಎಸ್ ನಿರ್ಮಾಣದ ಮೂಲಕ ಡುಕಾಟಿ ಇಂತಹದೊಂದು ಸಾಧನೆ ಮಾಡಿದೆ.
ಡುಕಾಟಿ 10 ಲಕ್ಷದ ಬೈಕ್ ಅನ್ನು ಪಡೆಯುವ ಭಾಗ್ಯ ಎರ್ನೆಸ್ಟೊ ಪಸ್ಸೊನಿ (47) ಅವರಿಗೆ ದೊರಕಿದೆ. ಇವರಿಗೆ ಡುಕಾಟಿ ಸಿಇಒ ಕೀಲಿ ಹಸ್ತಾಂತರಿಸಿದರು.

ವಿಶೇಷವೆಂದರೆ ಎರ್ನೆಸ್ಟೊ ಅವರಿಗೆ ತಾವು ಬುಕ್ ಮಾಡಿರುವುದು ಡುಕಾಟಿ 10 ಲಕ್ಷದ ಬೈಕ್ ಎಂಬ ವಿಚಾರ ಗೊತ್ತಿರಲಿಲ್ಲವಂತೆ. ಆದರೆ ಡುಕಾಟಿ ಸಂಸ್ಥೆಯು ಅಚ್ಚರಿಯನ್ನುಂಟು ಮಾಡುವ ನೀಡುವ ಮೂಲಕ ಗಮನ ಸೆಳೆದಿದೆ.
ವಾಹನ ಪ್ರಿಯರ ಪಾಲಿಗೆ ಡುಕಾಟಿ ಬೈಕ್ ಗಿಟ್ಟಿಸಿಕೊಳ್ಳುವುದು ಕನಸಿನ ಮಾತಾಗಿರುತ್ತದೆ. ಇದು ದೇಹ ಶೈಲಿಯಿಂದ ಹಿಡಿದು, ಚಾಲನಾ ಅನುಭವ, ನಿರ್ವಹಣೆ ಹಾಗೂ ಹ್ಯಾಂಡ್ಲಿಂಗ್‌ನಲ್ಲಿ ಗರಿಷ್ಠ ಗುಣಮಟ್ಟತೆಯನ್ನು ಕಾಪಾಡಿಕೊಂಡಿದೆ.

ಅಂದ ಹಾಗೆ 1198 ಸಿಸಿ ಟೆಸ್ಟಾಸ್ಟ್ರೆಟ್ಟಾ 11ಡಿಗ್ರಿ ಡಿಎಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಮೊನಸ್ಟರ್ 1200 ಎಸ್ ಬೈಕ್ 135 ಅಶ್ವಶಕ್ತಿ ಉತ್ಪಾದಿಸಲಿದೆ. ಇದರ ಮಗದೊಂದು ಎಸ್ ವರ್ಷನ್ 145 ಅಶ್ವಶಕ್ತಿ ಉತ್ಪಾದಿಸಲಿದೆ.


Click it and Unblock the Notifications








