ಅತ್ಯಂತ ಸುಂದರ ಬೈಕ್ - ಡುಕಾಟಿ ಸ್ಕ್ರ್ಯಾಂಬ್ಲರ್

Written By:

ಜಗತ್ತಿನ ಅತ್ಯಂತ ಪ್ರಖ್ಯಾತ ವಾಹನ ಪ್ರದರ್ಶನ ಮೇಳಗಳಲ್ಲಿ ಮಿಲಾನ್ (EICMA)ಮೋಟಾರು ಶೋ ಒಂದಾಗಿದೆ. ಇಟಲಿಯ ಮಿಲಾನ್‌ನಲ್ಲಿ ನಡೆಯುವುದರಿಂದ ಇಐಸಿಎಂಎ (Esposizione Internazionale Ciclo Motociclo e Accessori)ಮೇಳ ಮಿಲಾನ್ ಮೋಟಾರ್‌ಸೈಕಲ್ ಶೋ ಎಂದೇ ಜನಪ್ರಿಯತೆ ಪಡೆದುಕೊಂಡಿದೆ.

ಇದರಂತೆ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಂತೆ ಡುಕಾಟಿ ಸ್ಕ್ರ್ಯಾಂಬ್ಲರ್ 'ಅತ್ಯಂತ ಸುಂದರ' ಬೈಕ್‌ ಎಂಬ ಮಾನ್ಯತೆಗೆ ಪಾತ್ರವಾಗಿದೆ.

ಇಟಲಿಯ ನಿಯತಕಾಲಿಕ ಮೊಟೊಸಿಕ್ಲಿಸ್ಮೊ (Motociclismo) ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿರುವ ಪ್ರೇಕ್ಷಕರ ಮತದಾನದ ಆಧಾರದಲ್ಲಿ ವಿಜೇತ ಬೈಕ್ ಅನ್ನು ಆಯ್ಕೆ ಮಾಡಲಾಗಿದೆ.

ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡಿರುವ ಬೈಕ್‌ಗಿಂತಲೂ (ಶೇ. 15) ಮೂರು ಪಟ್ಟು ಹೆಚ್ಚು ಮತದಾನ ಪಡೆಯುವಲ್ಲಿ ಡುಕಾಟಿ ಬೈಕ್ (ಶೇ. 43) ಯಶಸ್ವಿಯಾಗಿತ್ತು.

Ducati Scrambler

ಅಷ್ಟೇ ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಇಐಸಿಎಂಎ ಶೋದಲ್ಲಿ ಸಂದರ್ಶಕರ ಪ್ರಮಾಣದಲ್ಲೂ ಶೇಕಡಾ 25ರಷ್ಟು ಹೆಚ್ಚಾಗಿದೆ ಎಂಬುದನ್ನು ಆಯೋಜಕರು ಅಭಿಪ್ರಾಯಪಟ್ಟಿದ್ದಾರೆ.

2015 ವರ್ಷಾಂತ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಡುಕಾಟಿ ಸ್ಕ್ರ್ಯಾಂಬ್ಲರ್ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 75 ಅಶ್ವಶಕ್ತಿ ಉತ್ಪಾದಿಸಲಿದೆ. 

English summary
The newest Scrambler made by Ducati was awarded the "Most Beautiful Bike" at EICMA 2014. This decision was made by more than 43 percent of fans who took part in the competition organised by an Italian magazine called ‘Motociclismo' every year.
Story first published: Wednesday, November 12, 2014, 15:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark