ದೀಪಾವಳಿ ಹಬ್ಬಕ್ಕೆ ಮೆರುಗು ತುಂಬಿದ ಹೀರೊ ಮ್ಯಾಸ್ಟ್ರೋ
ದೀಪಾವಳಿ ಹಬ್ಬದ ಆವೃತ್ತಿ ಆಗಮನವಾಗಿರುವಂತೆಯೇ ದೇಶದ ನಂ.1 ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿಯ ಮ್ಯಾಸ್ಟ್ರೋ ಸ್ಕೂಟರ್‌ಗೆ ಇನ್ನಷ್ಟು ಮೆರಗು ತುಂಬಿದೆ. ಹೌದು, ಹೀರೊ ಮ್ಯಾಸ್ಟ್ರೋ 110 ಸಿಸಿ ಸ್ಕೂಟರ್ ಹೊಸ ವರ್ಣಗಳಲ್ಲಿ ಹಾಗೂ ದೇಹ ಶೈಲಿಗಳಲ್ಲಿ ಲಭ್ಯವಾಗಲಿದೆ.
ವಿಶೇಷವಾಗಿ ಪುರುಷರಿಗಾಗಿ ವಿನ್ಯಾಸಗೊಳಿಸಲಾಗಿರುವ ಮ್ಯಾಸ್ಟ್ರೋ, ಬಿಳಿ ಹಾಗೂ ಕೆಂಪು ಡ್ಯುಯಲ್ ಟೋನ್ ಗ್ರೂವಿ ಮಿಡ್ಲೇ, ಪ್ಯಾಂಥರ್ ಬ್ಲ್ಯಾಕ್, ಮ್ಯಾಗ್ನೇಟಿಕ್ ಗ್ರೇ, ಫೋರ್ಸ್ ಸಿಲ್ವರ್, ವೈಟಲ್ ವೈಟ್, ಬ್ಲೇಜಿಂಗ್ ರೆಡ್ ಮತ್ತು ಎಲೆಕ್ಟ್ರಿಕ್ ರೆಡ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಅದೇ ರೀತಿ ಸ್ಕೂಟರ್‌ಗೆ ಇನ್ನಷ್ಟು ಸ್ಟೈಲಿಷ್ ಲುಕ್ ಪ್ರದಾನ ನಿಟ್ಟಿನಲ್ಲಿ ಗ್ರಾಫಿಕ್ಸ್ ಸೈಡ್ ಪ್ಯಾನೆಲ್ ಸಹ ಒದಗಿಸಲಾಗುತ್ತದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.
ಹೊಸ ಹೀರೊ ಮ್ಯಾಸ್ಟ್ರೋ 109 ಸಿಸಿ ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 8.2 ಪಿಎಸ್ ಪವರ್ (9.1 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದರ ಮುಂಬೈ ಎಕ್ಸ್ ಶೋ ರೂಂ ಬೆಲೆ 52,360 ರು.ಗಳಾಗಿರಲಿದೆ.
ವಿಶಿಷ್ಟತೆಗಳು:
ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ,
ಡಿಜಿಟಲ್ ಅನಲಾಗ್ ಕೊಂಬೊ ಮೀಟರ್ ಕನ್ಸೋಲ್,
ಡ್ರಮ್ ಬ್ರೇಕ್ (ಮುಂಭಾಗ ಹಾಗೂ ಹಿಂದುಗಡೆ)
ಆಯಾಮ (ಎಂಎಂ)
ಉದ್ದ: 1780
ಅಗಲ: 710
ಎತ್ತರ: 1165
ವೀಲ್ ಬೇಸ್: 1240
ಗ್ರೌಂಡ್ ಕ್ಲಿಯರನ್ಸ್: 155
ಇಂಧನ ಟ್ಯಾಂಕ್ ಸಾಮರ್ಥ್ಯ: 5.3 ಲೀಟರ್
ಕರ್ಬ್ ಭಾರ: 110 ಕೆ.ಜಿ


Click it and Unblock the Notifications








