ಹೋಂಡಾ ಡಿಯೊ vs ಹೀರೊ ಮ್ಯಾಸ್ಟ್ರೊ vs ಯಮಹಾ ರೇ ಝಡ್

ಸ್ವಲ್ಪ ಹಿಂದಿನ ಕಾಲಘಟ್ಟದ ವರೆಗೆ ಸ್ಕೂಟರ್ ಹುಡುಗಿಯರಿಗೆ ಸೀಮಿತವಾದ ಗಾಡಿ; ಗಂಡಸರು ಗೇರ್ ಬೈಕನ್ನು ಓಡಿಸಿದರೆ ಮಾತ್ರನಿಜವಾದ ಗಂಡಸು ಅನ್ನಿಸುತ್ತಾರೆಂಬ ತಪ್ಪು ಭಾವನೆಯಿತ್ತು. ಇದೇ ಕಾರಣಕ್ಕಾಗಿ ಪುರುಷರು ಸ್ಕೂಟರ್‌ಗಳನ್ನು ಓಡಿಸುವುದಕ್ಕೆ ಹಿಂದೇಟು ಹಾಕುತ್ತಿದ್ದರು.

ಆದರೆ ಇದೀಗ ಕಾಲ ಬದಲಾಗಿದೆ. ಪ್ರಸ್ತುತ ಸ್ತ್ರೀಯರಷ್ಟೇ ಪುರುಷರು ಸಹ ಸ್ಕೂಟರುಗಳನ್ನು ಓಡಿಸುವುದನ್ನು ಇಷ್ಟಪಡುತ್ತಾರೆ. ಇದರಂತೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ್ದಂತೆ ಅನೇಕ ಕಂಪನಿಗಳು ಸ್ಕೂಟರ್ ಉತ್ಪಾದಿಸುವುದರಲ್ಲೇ ಗಮನ ಕೇಂದ್ರಿತವಾಗಿದ್ದು, ನೂತನ ಮಾದರಿಗಳನ್ನು ಪರಿಚಯಿಸುತ್ತಿವೆ.

ಈ ಪೈಕಿ ಹೋಂಡಾ ಡಿಯೊ, ಹೀರೊ ಮ್ಯಾಸ್ಟ್ರೊ ಮತ್ತು ಯಮಹಾ ರೇ ಝಡ್ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ. ಇಂದಿನ ಈ ಲೇಖನದ ಮೂಲದ ಮೈಲೇಜ್, ನಿರ್ವಹಣೆ, ವಿನ್ಯಾಸ ಹಾಗೂ ದರಗಳ ಆಧಾರದಲ್ಲಿ ಯಾವುದು ಉತ್ತಮ ಸ್ಕೂಟರ್ ಎಂಬದನ್ನು ಬಿಂಬಿಸುವ ಪ್ರಯತ್ನ ಮಾಡಲಿದ್ದೇವೆ. ಸ್ಕೂಟರುಗಳನ್ನು ಇಷ್ಟಪಡುವ ಎಲ್ಲ ಗ್ರಾಹಕರು ಈ ಲೇಖನದ ಸದ್ಭಳಕೆ ಪಡೆಯುವ ವಿಶ್ವಾಸ ನಮ್ಮದು.

ಸ್ಕೂಟರ್ ರೇಸ್

ಸ್ಕೂಟರ್ ರೇಸ್

ಹಿಂದೊಮ್ಮೆ ಬಜಾಜ್ ಸ್ಕೂಟರುಗಳಿಗೆ ಮಾತ್ರ ಹೆಚ್ಚಿನ ಬೇಡಿಕೆಯಿತ್ತು. ನಮ್ಮ ಹಿರಿಯರು ಹೆಚ್ಚಾಗಿ ಬಜಾಜ್ ಸ್ಕೂಟರುಗಳನ್ನೇ ನೆಚ್ಚಿಕೊಂಡಿದ್ದರು. ಆದರೆ ಇದೀಗ ಕಾಲ ಬದಲಾಗಿದ್ದು, ಹೋಂಡಾ, ಸುಜುಕಿ ಹಾಗೂ ಯಮಹಾ ಕೂಡಾ ತನ್ನದೇ ಆದ ಮಾರುಕಟ್ಟೆ ಸೃಷ್ಟಿ ಮಾಡಿದೆ. ಯುವ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಇಂತಹ ಕಂಪನಿಗಳನ್ನು ಸ್ಕೂಟರುಗಳಿಗೆ ಹೆಚ್ಚು ಆಕರ್ಷಕ ವಿನ್ಯಾಸ ಕಲ್ಪಿಸಿಕೊಡುವುದರಲ್ಲಿ ಯಶಸ್ವಿಯಾಗಿದೆ.

ಎಕ್ಸ್ ಶೋ ದರ (ದೆಹಲಿ): ರು. 44,768
ಹೋಂಡಾ ಡಿಯೊ

ಹೋಂಡಾ ಡಿಯೊ ಹೊಸ ಶೈಲಿಯ ಸ್ಕೂಟರ್ ಆಗಿದ್ದು, ಚಾಲಕರಿಗೆ ಹೆಚ್ಚು ಲೆಗ್ ರೂಂ ಸೃಷ್ಟಿ ಮಾಡಿರುವುದು ಇದರ ಪ್ರಮುಖ ವಿಶೇಷಯಾಗಿದೆ.

ಮೈಲೇಜ್

ಮೈಲೇಜ್

ಕಂಪನಿಯ ಪ್ರಕಾರ ಹೋಂಡಾ ಡಿಯೊ ಪ್ರತಿ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ 45 ಕೀ.ಮೀ. ಮೈಲೇಜ್ ದೊರಕಲಿದೆ. ಹಿಂದಿನ ಮಾದರಿಗಿಂತಲೂ ಶೇಕಡಾ 10ರಷ್ಟು ಹೆಚ್ಚು ಇಂಧನ ಕ್ಷಮತೆ ಸೃಷ್ಟಿ ಮಾಡುವಲ್ಲಿ ಡಿಯೊ ಯಶಸ್ಸನ್ನು ಕಂಡಿದೆ.

ಇಂಧನ ಟ್ಯಾಂಕ್ ಸಾಮರ್ಥ್ಯ 5.3 ಲೀಟರ್

ನಿರ್ವಹಣೆ

ನಿರ್ವಹಣೆ

ಹೋಂಡಾ ಡಿಯೊದಲ್ಲಿ 109 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಎಂಜಿನ್ ಆಳವಡಿಸಲಾಗಿದೆ. ಹೋಂಡಾ ಆಕ್ಟಿವಾ ಹಾಗೂ ಎವಿಯೇಟರ್‌ನಲ್ಲೂ ಇದಕ್ಕೆ ಸಮಾನವಾದ ಎಂಜಿನ್ ಮಾನದಂಡಗಳನ್ನು ಅನುಸರಿಸಲಾಗಿದೆ.

ಪವರ್: 8 ಬಿಎಚ್‌ಪಿ @ 7500 ಆರ್‌ಪಿಎಂ

ವಿನ್ಯಾಸ ಮತ್ತು ಶೈಲಿ

ವಿನ್ಯಾಸ ಮತ್ತು ಶೈಲಿ

ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹೋಂಡಾ ಡಿಯೊ ವಿನ್ಯಾಸ ರೂಪಿಸಲಾಗಿದೆ. ಇದರ ಹೆಡ್ ಲೈಟ್ ಹಾಗೂ ಅದಕ್ಕೆ ಹೊಂದಿಕೊಂಡಿರುವ ಇಂಡಿಕೇಟರ್ ಪ್ರಮುಖ ಆಕರ್ಷಣೆಯಾಗಿದೆ.

ಹೋಂಡಾ ಡಿಯೊ

ಹಾಗೊಂದು ವೇಳೆ ನೀವು ಬಜೆಟ್ ಸ್ಕೂಟರ್ ಖರೀದಿಸಲು ಇಚ್ಛಿಸುವುದಲ್ಲಿ ಹಾಗೆಯೇ 50,000 ರು.ಗಳಷ್ಟು ಖರ್ಚು ಮಾಡಲು ತಯಾರಾಗಿದ್ದಲ್ಲಿ ನಿಮಗೆ ಡಿಯೊ ಉತ್ತಮ ಆಯ್ಕೆಯೆನಿಸಲಿದೆ.

ಹೀರೊ ಮ್ಯಾಸ್ಟ್ರೊ

ತನ್ನ ದೀರ್ಘಕಾಲದ ಜತೆಗಾರ ಹೋಂಡಾ ಜತೆಗಿನ ಪಾಲುದಾರಿಕೆಯನ್ನು ಕಡಿದುಕೊಂಡ ಬಳಿಕ ಹೀರೊ ಮೊಟೊಕಾರ್ಪ್ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸುವ ಪ್ರಯತ್ನದಲ್ಲಿ ತೊಡಗಿತ್ತು. ಈ ನಿಟ್ಟಿನಲ್ಲಿ ಹೋಂಡಾ ಆಕ್ಟಿವಾ ತಲಹದಿ ಆಧಾರವಾಗಿಟ್ಟುಕೊಂಡು ಹೀರೊ ಮ್ಯಾಸ್ಟ್ರೊ ರೂಪಿತವಾಗಿತ್ತು.

ಎಕ್ಸ್ ಶೋ ರೂಂ ದರ (ದೆಹಲಿ): ರು. 46,900

ಮೈಲೇಜ್

ಮೈಲೇಜ್

ಮೈಲೇಜ್ ವಿಚಾರದಲ್ಲಿ ಮ್ಯಾಸ್ಟ್ರೊ ಗ್ರಾಹಕರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿತ್ತು. ಯಾಕೆಂದರೆ ನೈಜ ಪರಿಸ್ಥಿತಿಯಲ್ಲಿ ಹೋಂಡಾ ಮ್ಯಾಸ್ಟ್ರೊ ಪ್ರತಿ ಲೀಟರ್‌ಗೆ 35ರಿಂದ 40 ಕೀ.ಮೀ. ಮಾತ್ರ ಮೈಲೇಜ್ ನೀಡುವಲ್ಲಿ ಶಕ್ತವಾಗಿತ್ತು.

ನಿರ್ವಹಣೆ

ನಿರ್ವಹಣೆ

ಮ್ಯಾಸ್ಟ್ರೊ, ಸ್ಕೂಟರುಗಳಿಗೆ ವಿಶೇಷವಾಗಿ ನಿರ್ಮಿಸಲಾದ ಲೇಟೆಸ್ಟ್ ಜನರೇಷನ್ ಹೋಂಡಾ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಪವರ್: 8 ಬಿಎಚ್‌ಪಿ

ವಿನ್ಯಾಸ ಹಾಗೂ ಶೈಲಿ

ವಿನ್ಯಾಸ ಹಾಗೂ ಶೈಲಿ

ಹೋಂಡಾ ಡಿಯೊ ಹಾಗೂ ಯಮಹಾ ರೇ ಝಡ್‌ಗೆ ಹೋಲಿಸಿದರೆ ಮ್ಯಾಸ್ಟ್ರೊ ವಿನ್ಯಾಸದಲ್ಲಿ ಸ್ವಲ್ಪ ಹಿನ್ನಡೆಯನ್ನು ಅನುಭವಿಸುತ್ತಿದೆ. ಹಾಗಿದ್ದರೂ ಆರಾಮದಾಯಕ ಸಿಟ್ಟಿಂಗ್ ವ್ಯವಸ್ಥೆ ಕೊಡುವಲ್ಲಿ ಯಶಸ್ವಿಯಾಗಿದೆ. ಇದು ದೀರ್ಘಪಯಣದಲ್ಲಿ ಹಿಂದುಗಡೆ ಪ್ರಯಾಣಿಕರಿಗೂ ಆರಾಮದಾಯಕ ಪಯಣ ಒದಗಿಸುತ್ತಿದೆ.

ಹೀರೊ ಮ್ಯಾಸ್ಟ್ರೊ

ನೀವು ಸಂಪ್ರದಾಯವಾದಿ ಗಟ್ಟಿಮುಟ್ಟಾದ ನಗರ ಪ್ರಯಾಣಿಕ ಸ್ಕೂಟರನ್ನು ಖರೀದಿಸಲು ಇಷ್ಟಪಡುವುದಾದ್ದಲ್ಲಿ ಹೀರೊ ಮ್ಯಾಸ್ಟ್ರೊ ಉತ್ತಮ ಆಯ್ಕೆಯಾಗಿರಲಿದೆ. ನೆನಪಿರಲಿ ಹಲವು ವಿಚಾರಗಳಲ್ಲಿ ಮ್ಯಾಸ್ಟ್ರೊ, ಹೋಂಡಾ ಆಕ್ವಿವಾವನ್ನು ಹೋಲುತ್ತದೆ.

ಯಮಹಾ ಝಡ್ ರೇ

ಪ್ರಮುಖವಾಗಿಯೂ ಮಹಿಳಾ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಯಮಹಾ ರೇ ಝಡ್ ತಯಾರಿಸಲಾಗಿತ್ತು. ಆದರೆ ಇದೀಗ ಸ್ತ್ರಿ ಪುರುಷ ಭೇದಭಾವವಿಲ್ಲದೆ ಎಲ್ಲರೂ ಸ್ಕೂಟರುಗಳನ್ನು ಖರೀದಿಸುತ್ತಿದ್ದಾರೆ. ಅಂದ ಹಾಗೆ ಹೋಂಡಾ ಡಿಯೊಗೆ ಸಮಾನವಾದ ಪ್ರವೃತ್ತಿಯನ್ನು ಯಮಹಾ ರೇ ಝಡ್ ಹೊಂದಿದೆ.

ವಿನ್ಯಾಸ ಮತ್ತು ಶೈಲಿ

ವಿನ್ಯಾಸ ಮತ್ತು ಶೈಲಿ

ಆರಂಭದಲ್ಲಿ ಮಹಿಳಾ ಗ್ರಾಹಕರನ್ನು ಗುರಿಯಾರಿಸಿತ್ತಾದರೂ ತಕ್ಷಣ ನಿಲುವು ಬದಲಾಯಿಸಿಕೊಂಡಿದ್ದ ಯಮಹಾ ನೂತನ 'ರೇ ಝಡ್' ಮುಖಾಂತರ ಪುರುಷ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ಸನ್ನು ಕಂಡಿತ್ತು.

ಕರ್ಬ್ ವೇಟ್ ಯಮಹಾ ರೇ ಝಡ್: 104 ಕೆ.ಜಿ

ಕರ್ಬ್ ವೇಟ್ ಹೋಂಡಾ ಡಿಯೊ: 110 ಕೆ.ಜಿ

ಕರ್ಬ್ ವೇಟ್ ಹೊರೊ ಮ್ಯಾಸ್ಟ್ರೊ: 110 ಕೆ.ಜಿ

ಮೈಲೇಜ್

ಮೈಲೇಜ್

ಕಂಪನಿಯ ಪ್ರಕಾರ ಯಮಹಾ ರೇ ಪ್ರತಿ ಲೀಟರ್‌ಗೆ 53 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ಸಾಮಾನ್ಯ ರೋಡ್ ಪರಿಸ್ಥಿತಿಯಲ್ಲಿ ಇದು 40ರಿಂದ 45 ಕೀ.ಮೀ. ಮೈಲೇಜ್ ನೀಡಲು ಸಕ್ಷಮವಾಗಿಲಿದೆ. ಹಾಗೆಯೇ ಸ್ಟೈಲ್ ಹಾಗೂ ನಿರ್ವಹಣೆ ಬಯಸುವ ಯುವ ಗ್ರಾಹಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಇಂಧನ ಟ್ಯಾಂಕ್ ಸಾಮರ್ಥ್ಯ: 5 ಲೀಟರ್

ನಿರ್ವಹಣೆ

ನಿರ್ವಹಣೆ

ಯಮಹಾ ರೇ ಝಡ್ 113ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಎಂಜಿನ್ ನಿಯಂತ್ರಿಸಲ್ಪಡುತ್ತದೆ.

ಪವರ್: 7 ಬಿಎಚ್‌ಪಿ @ 7000 ಆರ್‌ಪಿಎಂ

ಯಮಹಾ ಝಡ್ ರೇ

ನೀವು 50,000 ರು.ಗಳ ಅಸುಪಾಸಿನಲ್ಲಿ ಆಟೋಮ್ಯಾಟಿಕ್ ಸ್ಕೂಟರ್ ಬಯಸುವುದಾದ್ದಲ್ಲಿ ರೇ ಝಡ್ ಉತ್ತಮ ಆಯ್ಕೆಯಾಗಿರಲಿದೆ. ಹಾಗಿದ್ದರೂ ಗರಿಷ್ಠ ನಿರ್ವಹಣೆ ಹಾಗೂ ಇಂಧನ ಕ್ಷಮತೆಯನ್ನು ನಿರೀಕ್ಷೆ ಮಾಡದಿರಿ. ಅಂತೂ ಯುವ ಗ್ರಾಹಕರು ಬಯಸುವ ವಿನ್ಯಾಸ, ವೈಶಿಷ್ಟ್ಯಗಳನ್ನು ನೀಡುವಲ್ಲಿ ಯಮಹಾ ಯಶಸ್ಸನ್ನು ಕಂಡಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಅಂತಿಮದಲ್ಲಿ ದೇಶಕ್ಕೆ ಸ್ಕೂಟರ್ ಸೆಗ್ಮೆಂಟ್ ಪರಿಚಯಿಸಿದ್ದ ಹೋಂಡಾ ಡಿಯೊ ಇತರೆಡು ಮಾದರಿಗಿಂತ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಜೆಟ್ ಸ್ಕೂಟರ್‌ನಿಂತ ಆರಂಭಿಸಿ, ವೈಶಿಷ್ಟ್ಯ ಹಾಗೂ ನಿರ್ವಹಣೆಯಲ್ಲಿ ಡಿಯೊ ಮುನ್ನಡೆ ಸಾಧಿಸಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಸ್ಥಿರತೆಯ ವ್ಯಾಪಾರ ಕಾಯ್ದುಕೊಳ್ಳುವಲ್ಲಿ ಡಿಯೊ ಯಶಸ್ವಿಯಾಗಿದೆ.

Most Read Articles

Kannada
English summary
Drivespark does a quick comparison to learn who is the ultimate winner in this war ~ Honda Dio vs Hero Maestro vs Yamaha Ray Z
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X