Jawa 350 Review: ಯುವಕರ ಪ್ರೀತಿಯ ಜಾವಾ 350 ವಿಮರ್ಶೆ, ರಾನ್ ಆಫ್ ಕಚ್‌ನಲ್ಲಿ ಅದ್ಭುತ ರೈಡ್

ಪ್ರಸಿದ್ಧ ಜೆಕ್ ರಿಪಬ್ಲಿಕ್ (Czech Republic) ಮೋಟಾರ್‌ಸೈಕಲ್ ಕಂಪನಿಯಾಗಿ ಜಾವಾ (Jawa) ಗುರುತಿಸಿಕೊಂಡಿದೆ. ಇತ್ತೀಚೆಗೆ, ಯುವಕರ ಹಾಟ್ ಫೆವರೇಟ್ ಕ್ಲಾಸಿಕ್ ಬೈಕ್‌ಗಳನ್ನು (Classic Bikes) ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಿದೆ. ಅದರ ಭಾಗವಾಗಿ ಹೊಚ್ಚ ಹೊಸ ಜಾವಾ 350 (Jawa 350) ಹೊರಬಂದಿದೆ.

ಕೆಲವು ದಿನಗಳ ಹಿಂದೆ, ಜಾವಾ ಕಂಪನಿಯು ನಮ್ಮ 'ಡ್ರೈವ್ ಸ್ಪಾರ್ಕ್' ತಂಡಕ್ಕೆ ಗುಜರಾತ್ ರಾಜ್ಯದಲ್ಲಿ ಈ '350' ಮೋಟಾರ್‌ಸೈಕಲ್ ರೈಡ್ (ಸವಾರಿ) ಮಾಡಲು ಆಹ್ವಾನಿಸಿತ್ತು. ವೈವಿಧ್ಯಮಯ ಭೂಪ್ರದೇಶವಾಗಿರುವ ರಾನ್ ಆಫ್ ಕಚ್‌ನಲ್ಲಿ ಜಾವಾ 350 ಓಡಿಸಿದ್ದು, ಅದ್ಭುತ ಅನುಭವವಾಗಿತ್ತು. ಅಲ್ಲಿನ ರಸ್ತೆಯಲ್ಲಿ ಈ ಬೈಕ್, ಹೇಗೆ ಕಾರ್ಯನಿರ್ವಹಿಸಿತು. ವಿನ್ಯಾಸ, ವೈಶಿಷ್ಟ್ಯ ಹಾಗೂ ಎಂಜಿನ್ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

Jawa 350

ಜಾವಾ 350 ವಿನ್ಯಾಸ, ವೈಶಿಷ್ಟ್ಯಗಳು: ಈ ನೂತನ ಬೈಕ್ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ಇದು ಹಿಂದಿನ ಕ್ಲಾಸಿಕ್ ಮೋಟಾರ್‌ಸೈಕಲ್‌ಗೆ ನವೀನವಾದ ಆಧುನಿಕ ಸ್ಪರ್ಶವನ್ನು ನೀಡಿದಂತೆ ಭಾಸವಾಗುತ್ತದೆ. ರೆಟ್ರೋ (ಹಳೆಯ) ಶೈಲಿಯಲ್ಲಿರುವ ಹೆಡ್‌ಲೈಟ್, ಎಕ್ಸಾಸ್ಟ್ ಪೈಪ್ಸ್ ಮತ್ತು ಎಂಜಿನ್ ಕೇಸಿಂಗ್ ಎಲ್ಲರನ್ನು ಮಂತ್ರಮುಗ್ದಗೊಳಿಸಿಬಿಡುತ್ತವೆ. ಡ್ಯುಯಲ್-ಟೋನ್ ಟಿಯರ್‌ಡ್ರಾಪ್ ಟ್ಯಾಂಕ್ ಫ್ಯುಯೆಲ್ ಕ್ಯಾಪ್‌ನಲ್ಲಿ '1929' ಲಾಂಛನ (ಲೋಗೋ) ಜಾವಾ ಪರಂಪರೆಯನ್ನು ನೆನಪಿಸುತ್ತದೆ.

ಜಾವಾ 350 ಮೋಟಾರ್‌ಸೈಕಲ್‍‍ನ ವೃತ್ತಾಕಾರದ ಸೂಚಕಗಳು (ಸರ್ಕಲರ್ ಇಂಡಿಕೇಟರ್ಸ್ - Circular Indicators), ಮರುವಿನ್ಯಾಸಗೊಳಿಸಲಾದ ಸೋಲೋ ಸೀಟ್ (Solo Seat), ಅದರ ವಿಂಟೇಜ್ ಲುಕ್ ಅನ್ನು ಹೆಚ್ಚಿಸುತ್ತದೆ. ಕೊಂಚ ಉದ್ದವಿರುವ (Longer) ಮಡ್‌ಗಾರ್ಡ್ ಮತ್ತು ಅಗಲವಿರುವ (Wider) ಟೈಯರ್ಸ್ ಹೆಚ್ಚು ಸ್ಥಿರವಾಗಿದ್ದು, ಚಾಲನೆಗೂ ಸೂಕ್ತವಾಗಿವೆ. ಈ ಬೈಕ್, ಮಿಸ್ಟಿಕ್ ಆರೆಂಜ್ ಪೇಂಟ್ ಸ್ಕೀಮ್ ಹೊಂದಿದ್ದು, ಸವಾರಿ ವೇಳೆ ರಸ್ತೆಯಲ್ಲಿ ಜನರ ಗಮನ ಸೆಳೆಯಿತು.

Jawa 350

ಸವಾರನಿಗೆ ಉತ್ತಮ ಅನುಭವವನ್ನು ಒದಗಿಸಲು ಜಾವಾ 350 ಬೈಕ್, ಹೊಸದಾದ ಚಾಸಿಸ್, ದೊಡ್ಡದಾದ ಎಂಜಿನ್, ಪರಿಷ್ಕೃತ ಸಸ್ಪೆನ್ಷನ್ (Suspension) ಸೆಟಪ್ ಹೊಂದಿದೆ. ಜೊತೆಯಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಎತ್ತರ ಹೆಚ್ಚಿದ್ದು, ಒರಟಾದ ಭೂಪ್ರದೇಶಗಳಲ್ಲಿ ನೆರವಾಗುತ್ತದೆ. ಅಗಲವಾದ (Wider) ಟೈಯರ್ಸ್ ಇದ್ದು, ರಸ್ತೆ ಮೇಲೆ ಗಟ್ಟಿಯಾದ ಹಿಡಿತ ಪಡೆಯಲು ಸಹಕಾರಿಯಾಗಿದೆ.

ಮರುವಿನ್ಯಾಸಗೊಳಿಸಲಾದ (Redesigned) ಸೀಟ್ ಹಾಗೂ ಸ್ಲಿಪ್ ಕ್ಲಚ್‌ ಒಳಗೊಂಡಿದ್ದು, ಸವಾರರಿಗೆ ಸುದೀರ್ಘ ಪ್ರಯಾಣವನ್ನು ಆನಂದಿಸುವಂತೆ ಮಾಡುತ್ತದೆ. ರೇಡಿಯೇಟರ್‌ ಸಣ್ಣದಾಗಿದ್ದು, ಹೊಸದಾಗಿರುವ ಕೂಲಿಂಗ್ ಸಿಸ್ಟಮ್ ಪರಿಣಾಮಕಾರಿಯಾಗಿ ತಾಪಮಾನವನ್ನು (Temperature) ನಿರ್ವಹಣೆ ಮಾಡುತ್ತದೆ. ಇದರಿಂದ ನಿಮ್ಮ ಕಾಲುಗಳಿಗೆ ಅಷ್ಟಾಗಿ ಬಿಸಿ ತಾಕುವುದಿಲ್ಲ. ಇದು ಖಂಡಿತ ಬೈಕ್ ಪ್ರೇಮಿಗಳಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

Jawa 350

ಕಾರ್ಯಕ್ಷಮತೆ, ಸುತ್ತಳತೆ: ಜಾವಾ 350 ಬೈಕ್, ಹಳೆಯ 294ಸಿಸಿ ಎಂಜಿನ್ ಬದಲಿಗೆ ನೂತನ 334ಸಿಸಿ ಸಿಂಗಲ್ ಸಿಲಿಂಡರ್ ಹೊಂದಿದೆ. ಇರಲ್ಲಿರುವ ಡಿಒಹೆಚ್‌ಸಿ (DOHC) ಮೋಟಾರ್ 22.1 bhp ಗರಿಷ್ಠ ಪವರ್, 28.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಸ್ಲಿಪ್ & ಅಸಿಸ್ಟ್ ಕ್ಲಚ್‌ನೊಂದಿಗೆ 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, ಹಿಂದಿನ ಚಕ್ರಕ್ಕೆ (ರೇರ್ ವೀಲ್) ಪವರ್ ವರ್ಗಾಯಿಸುತ್ತದೆ.

ಸಸ್ಪೆನ್ಷನ್ ಸೆಟಪ್‌ ಬಗ್ಗೆ ಹೇಳುವುದಾದರೆ, ಫ್ರಂಟ್ (ಮುಂಭಾಗ) ಟೆಲಿಸ್ಕೋಪಿಕ್ ಫೋರ್ಕ್ಸ್ ರಸ್ತೆಯ ತಿರುವುಗಳಲ್ಲಿ ಮೋಟಾರ್‌ಸೈಕಲ್ ಚಲಾಯಿಸುವಾಗ ಸವಾರರರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ರೇರ್ (ಹಿಂಭಾಗ) ಟ್ವಿನ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ ಇದೆ. ಮುಂಭಾಗ, ಹಿಂಭಾಗವಿರುವ ಸ್ಪೋಕ್ ವೀಲ್‌, ಎಂಆರ್‌ಎಫ್‌ (MRF) ಝಾಪರ್‌ ಟೈಯಾರ್ಸ್ ಹೆಚ್ಚು ಬಲಾಡ್ಯವಾಗಿದ್ದು, ರಸ್ತೆಯ ಮೇಲೆ ಬಿಗಿಯಾದ ಪಟ್ಟನ್ನು ನೀಡುತ್ತದೆ.

Jawa 350

ವೀಲ್‌ಬೇಸ್ (1,449 ಎಂಎಂ) ವಿಸ್ತೃತವಾಗಿದ್ದು, ಈ ಬೈಕ್‌ನ ಧನಾತ್ಮಕ ಅಂಶವಾಗಿದೆ. ಗ್ರೌಂಡ್ ಕ್ಲಿಯರೆನ್ಸ್ 178 ಎಂಎಂ, ಸೀಟ್ ಹೈಟ್ (ಆಸನ ಎತ್ತರ) 802 ಎಂಎಂ ಇದ್ದು, ಉಬ್ಬು-ತಗ್ಗುವಿರುವ ರಸ್ತೆಯಲ್ಲಿ ಹೆಚ್ಚು ನೆರವಾಗುತ್ತದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಫ್ರಂಟ್ 280 ಎಂಎಂ, ರೇರ್ 240 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಸಹ ಪಡೆದಿದೆ.

ಸವಾರಿಯ ಅನುಭವ: ಗುಜರಾತ್ ರಾಜ್ಯದ ವೈವಿಧ್ಯಮಯ ಭೂಪ್ರದೇಶವಾಗಿರುವ ರಾನ್ ಆಫ್ ಕಚ್‌ನಲ್ಲಿ ಜಾವಾ 350 ಬೈಕ್ ಓಡಿಸಿದ್ದು, ಒಂದು ಸಾಹಸಮಯ ಅನುಭವವನ್ನು ನೀಡಿತು. ಹಳ್ಳ - ದಿಣ್ಣೆಯ ರಸ್ತೆಗಳಲ್ಲಿ ಸುಲಭವಾಗಿ ಚಲಿಸಿತು. ಯಾವುದೇ ಆಯಾಸವಿಲ್ಲದೆ, ಗಂಟೆಗಟ್ಟಲೇ ಈ ಬೈಕ್ ಓಡಿಸಬಹುದು. ಆಸನಗಳು ಆರಾಮದಾಯವಾಗಿದ್ದು, ತಿರುಗುಗಳಲ್ಲಿ ಸಸ್ಪೆನ್ಷನ್ ಸೆಟಪ್‌ ಉತ್ತಮವೆನಿಸಿತು. ಬ್ರೇಕ್ ಗಳು ಅದ್ಬುತವಾಗಿ ಕಾರ್ಯನಿರ್ವಹಿಸಿದವು.

Jawa 350

ಹೆದ್ದಾರಿಯಲ್ಲಿ ಜಾವಾ 350 ಬೈಕ್ ಗರಿಷ್ಠ ವೇಗದಲ್ಲಿ ಸುಲಭವಾಗಿ ಚಲಿಸಿತು. ಗಂಟೆಗೆ 100 ಕಿ.ಮೀ ವೇಗದಲ್ಲಿಯೂ ಆರಾಮವಾಗಿ ಪ್ರಯಾಣಿಸಬಹುದು. ಆದಾಗ್ಯೂ, ಗಂಟೆಗೆ 80-90 ವೇಗವನ್ನು ಪಡೆಯುವಾಗ ಮೋಟಾರ್‌ಸೈಕಲ್ ನ ಹ್ಯಾಂಡಲ್‌ಬಾರ್, ಫುಟ್‌ಪೆಗ್‌ ಮೇಲೆ ಸಣ್ಣ ಕಂಪನದ (Vibrations) ಅನುಭವವಾಯಿತು. ಆಶ್ಚರ್ಯವೆಂಬಂತೆ 110 ಕಿಮೀ /ಗಂಟೆ ವೇಗದಲ್ಲಿ ಅದು ಇಳಿಮುಖದತ್ತ ಸಾಗಿತು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಜಾವಾ 350 ಬೈಕ್ ಆಕರ್ಷಕ ನೋಟವನ್ನು ಹೊಂದಿದ್ದು, ಎಂತಹ ರಸ್ತೆಯಲ್ಲಿ ಬೇಕಾದರೂ ಸುಲಭವಾಗಿ ಚಲಿಸುತ್ತದೆ. ಈ ಬೈಕ್ ರೂ. 2.15 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದ್ದು, ರೆಟ್ರೋ ಶೈಲಿಯಲ್ಲಿ ಮೋಟಾರ್‌ಸೈಕಲ್ ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, January 20, 2024, 11:00 [IST]
English summary
Jawa 350 bike review specs reading impress features images details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+