Husqvarna Svartpilen 401 Review: ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 ವಿಮರ್ಶೆ, ರಸ್ತೆಯಲ್ಲಿ ಬಲಭೀಮ!

ಕೆಟಿಎಂ (KTM) ಮಾಲಿಕತ್ವದ ಸ್ವೀಡಿಷ್ (Swedish) ಮೋಟಾರ್‌ಸೈಕಲ್‌ ತಯಾರಕ ಹಸ್ಕ್‌ವರ್ನಾ (Husqvarna), ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನಗಾಗಿ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ. ಕಂಪನಿಯ ಬೈಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ಸೆಳೆಯುತ್ತಿವೆ. ರಸ್ತೆಯಲ್ಲಿ ಬಲಭೀಮನಂತೆ ಕಾಣಿಸಲಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ.

ಹಸ್ಕ್‌ವರ್ನಾ ಕಂಪನಿಯು 2020ರಲ್ಲಿ ಭಾರತವನ್ನು ಪ್ರವೇಶಿಸಿತ್ತು. ಇದರ ನಿಯೋ - ರೆಟ್ರೊ ವಿನ್ಯಾಸದ ಮೋಟಾರ್‌ಸೈಕಲ್‌ಗಳು ಕೆಲವೇ ದಿನಗಳಲ್ಲಿ ಜನಮನ್ನಣೆ ಗಳಿಸಿದವು. ನಮ್ಮ 'ಡ್ರೈವ್ ಸ್ಪಾರ್ಕ್' ತಂಡಕ್ಕೆ ಹಸ್ಕ್‌ವರ್ನಾ, ಪುಣೆಯಲ್ಲಿ ತನ್ನ ಹೊಸ ಸ್ವಾರ್ಟ್ಪಿಲೆನ್ 401 ಬೈಕ್ ಟೆಸ್ಟ್ ಡ್ರೈವ್ ನಡೆಸಲು ಆಹ್ವಾನಿಸಿತು. ಈ ಮೋಟಾರ್‌ಸೈಕಲ್‌ನ ವಿನ್ಯಾಸ, ವೈಶಿಷ್ಟ್ಯ ಹಾಗೂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

Husqvarna Svartpilen 401 Review

ವಿನ್ಯಾಸ & ವೈಶಿಷ್ಟ್ಯಗಳು: ನೂತನ ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 (Husqvarna Svartpilen 401) ಮೋಟಾರ್‌ಸೈಕಲ್‌ ಭರ್ಜರಿ ವಿನ್ಯಾಸವನ್ನು ಹೊಂದಿದ್ದು, ನೋಡಿದ ಕೊಡಲೇ ಯಾರೇ ಆಗಲಿ ಅದರತ್ತ ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ಈ ಬೈಕ್ ಬೃಹತ್ ಗಾತ್ರದ ಫೇರಿಂಗ್‌ಗಳನ್ನು ಪಡೆದಿದ್ದು, ಸಾಮಾನ್ಯ ಅಥವಾ ಬೆಟ್ಟ - ಗುಟ್ಟದ ರಸ್ತೆಯೇ ಇರಲಿ ಸುಲಭವಾಗಿ ಚಲಿಸುವ ಟೈರ್‌ಗಳನ್ನು ಒಳಗೊಂಡಿದೆ.

ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 ಬೈಕ್, ವೃತ್ತಾಕಾರದ ಎಲ್‌ಇಡಿ ಹೆಡ್‌ಲೈಟ್ (Circular LED Headlight) ಪಡೆದಿದ್ದು, ಮೊದಲ ನೋಟದಲ್ಲಿ ಪ್ರತಿಯೊಬ್ಬರನ್ನು ಮಂತ್ರಮುಗ್ದಗೊಳಿಸುತ್ತದೆ. ಸಿಂಗಲ್ ರೌಂಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹೆಚ್ಚು ಅತ್ಯಾಧುನಿಕವಾಗಿದ್ದು, ಅಂಡರ್‌ಬೆಲ್ಲಿ ಎಕ್ಸಾಸ್ಟ್ & ನಾಬಿ ಟೈರ್‌ಗಳು ಅತ್ಯುತ್ತಮವಾಗಿದೆ. ಸ್ಲೀಕ್ ಇಂಡಿಕೇಟರ್ ಮತ್ತು ಆಕರ್ಷಕ ವಿಂಡ್‌ಶೀಲ್ಡ್ ಅನ್ನು ಹೊಂದಿದೆ.

Husqvarna Svartpilen 401 Review

ಫ್ಯುಯೆಲ್ ಟ್ಯಾಂಕ್ ಮೇಲೆ ಯೆಲ್ಲೋ ಸ್ಟ್ರಿಪ್ ಒಳಗೊಂಡಿದ್ದು, ಅದರ ಪಕ್ಕದಲ್ಲಿಯೇ 401 ಬ್ಯಾಡ್ಜಿಂಗ್ ಇದೆ. ಈ ಸ್ವಾರ್ಟ್ಪಿಲೆನ್ ಮೋಟಾರ್‌ಸೈಕಲ್‌ ಆಸನ (ಸೀಟ್) ಹೆಚ್ಚು ಉದ್ದವಾಗಿದೆ. ಹಿಂಭಾಗ (ರೇರ್) ಸುಸಜ್ಜಿತ ಗ್ರ್ಯಾಬ್ ರೈಲ್ ಅನ್ನು ಹೊಂದಿದೆ. ಇದನ್ನು ಗಮನಿಸಿದಾಗ ಈ ಬೈಕ್, ಅತ್ಯಾಧುನಿಕ ವಿನ್ಯಾಸವನ್ನು ಪಡೆದಿದೆ ಎಂದು ಸುಲಭವಾಗಿ ಹೇಳಬಹುದು.

ಎಂಜಿನ್ ಕಾರ್ಯಕ್ಷಮತೆ, ಸುತ್ತಳತೆ: ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 ಬೈಕ್, ಕೆಟಿಎಂ ಡ್ಯೂಕ್ 390 (KTM Duke 390) ಮೋಟಾರ್‌ಸೈಕಲ್‌ನಂತೆ 399 ಸಿಸಿ, ಸಿಂಗಲ್ - ಸಿಲಿಂಡರ್ ಡಿಒಹೆಚ್‌ಸಿ ಎಂಜಿನ್ ಹೊಂದಿದ್ದು, 45.6 bhp ಗರಿಷ್ಠ ಪವರ್, 39 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.

Husqvarna Svartpilen 401 Review

ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 (Husqvarna Svartpilen 401) ಮೋಟಾರ್‌ಸೈಕಲ್‌ ಬರೋಬ್ಬರಿ 171 ಕೆಜಿ ತೂಕವಿದ್ದು, ಕೊಂಚ ಅಧಿವೇ ಭಾರವಿದೆ. ಜೊತೆಗೆ ರೇಜರ್-ಶಾರ್ಪ್ ಹ್ಯಾಂಡ್ಲಿಂಗ್ ಅನ್ನು ಪಡೆದಿದೆ. 17 - ಇಂಚಿನ ವೀಲ್ಸ್ ಒಳಗೊಂಡ ಪಿರೆಲ್ಲಿ ಸ್ಕಾರ್ಪಿಯನ್ ರ್‍ಯಾಲಿ ಎಸ್‌ಟಿಆರ್‌ ಟೈರ್‌ಗಳನ್ನು ಹೊಂದಿದೆ. ಇದು ಯಾವುದೇ ರಸ್ತೆಯಲ್ಲಿ ಸವಾರರು ಸಮತೋಲನ ಕಾಯ್ದುಕೊಳ್ಳಲು ಸಹಾಯಕವಾಗಿದೆ.

ಈ ಬೈಕಿನ ಆಸನದ (ಸೀಟ್) ಎತ್ತರ 820 ಎಂಎಂ ಇದ್ದು, ಆರಾಮದಾಯಕವಾಗಿ ಪ್ರಯಾಣಿಸಲು ನೆರವಾಗುತ್ತದೆ. 1,354 ಎಂಎಂ ಅಳತೆಯ ವೀಲ್‌ ಬೇಸ್‌ನೊಂದಿಗೆ ಅತ್ಯುತ್ತಮ ಚಾಸಿಸ್ ಅನ್ನು ಪಡೆದಿದೆ. ಬೆಟ್ಟ - ಗುಡ್ಡ ಸೇರಿದಂತೆ ಎಲ್ಲಿ ಬೇಕಾದರೂ ಓಡಿಸಲು ಸಾಧ್ಯವಾಗುವಂತೆ 177 ಎಂಎಂ ಗ್ರೌಂಡ್ ಕ್ಲಿಯರೆನ್ಸ್ (Ground Clearance) ಹೊಂದಿದೆ.

Husqvarna Svartpilen 401 Review

ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 ಮೋಟಾರ್‌ಸೈಕಲ್‌ ಮುಂಭಾಗ (ಫ್ರಂಟ್) 110/70 ಮತ್ತು ಹಿಂಭಾಗ (ರೇರ್) 150/60 ಅಳತೆಯ ಟೈರ್‌ನ್ನು ಒಳಗೊಂಡಿದೆ. ಇದಕ್ಕೆ ಸಹಾಯವಾಗಿ 17- ಇಂಚಿನ ವೀಲ್ಸ್ ಇದೆ. 13.5 - ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಅನ್ನು ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಮುಂಭಾಗ 320 ಎಂಎಂ, ಹಿಂಭಾಗ 240 ಎಂಎಂ ಅಳತೆಯ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ರೈಡಿಂಗ್ ಇಂಪ್ರೆಷನ್: ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 ಬೈಕ್ ಚಾಲನೆ ವೇಳೆಯಲ್ಲಿ ಸವಾರರಿಗೆ ಅತ್ಯುತ್ತಮ ಅನುಭವವನ್ನು ನೀಡುತ್ತದೆ. ಇದರ ಎಂಜಿನ್ ಶಬ್ದ ರಸ್ತೆಯಲ್ಲಿ ನೋಡುಗರನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ಚಾಸಿಸ್ ತುಂಬಾ ಹಗುರವಾಗಿದ್ದು, ನೀವು ಹೇಗೆ ಬೇಕಾದರೂ ಮೋಟಾರ್‌ಸೈಕಲ್‌ ಓಡಿಸಲು ನೆರವಾಗುತ್ತದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತಾನಾಡುವುದಾದರೆ, ರಸ್ತೆ ತಿರುವು ಹಾಗೂ ಉಬ್ಬು - ತಗ್ಗು ಇರುವ ರಸ್ತೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.

Husqvarna Svartpilen 401 Review

ಈ ಬೈಕ್ ಬ್ರೇಕ್‌ಗಳು ಹೆಚ್ಚು ಅತ್ಯಾಧುನಿಕವಾಗಿದ್ದು, ಬೇಗನೇ ಹಾಗೂ ಸುಲಭವಾಗಿ ಗಾಡಿಯನ್ನು ನಿಲ್ಲುವಂತೆ ಮಾಡುತ್ತದೆ. ಸ್ಲಿಪ್ಪರ್ ಕ್ಲಚ್ ಉತ್ತಮ ರೀತಿಯಲ್ಲಿದ್ದು, ಡೌನ್‌ಶಿಫ್ಟ್‌ ಸಮಯದಲ್ಲಿ ಅದ್ಬುತವಾಗಿ ಕಾರ್ಯನಿರ್ವಹಿಸುತ್ತದೆ. ಹಿಂಬದಿ ವೀಲ್ (ಚಕ್ರ) ಲಾಕ್‌ಅಪ್ ಅನ್ನು ತಪ್ಪಿಸುತ್ತದೆ. ಒಟ್ಟಾರೆ ಹೇಳಬೇಕಾದರೆ, ಆಫ್ - ರೋಡ್ ಸೇರಿದಂತೆ ಎಂತಹ ಸನಿವೇಶದಲ್ಲಿಯೂ ಈ ಬೈಕ್ ಸುಲಭವಾಗಿ ಚಲಿಸುವ ಮೂಲಕ ಚಾಲಕನಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಪ್ರೀಮಿಯಂ ಬೈಕ್ ಹುಡುಕುವವರಿಗೆ ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 (Husqvarna Svartpilen 401) ನಿಜವಾಗಿಯೂ ಉತ್ತಮ ಆಯ್ಕೆಯಾಗುತ್ತದೆ. ವಿನ್ಯಾಸದ ದೃಷ್ಟಿಯಿಂದ ಹೆಚ್ಚು ಅತ್ಯಾಧುನಿಕವಾಗಿದ್ದು, ಎಂತಹವರಿಗೂ ಒಮ್ಮೆಲೇ ತನ್ನತ್ತ ಸೆಳೆಯುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಈ ಬೈಕ್‍ನ್ನು ಅದರ ಉತ್ಸಾಹಿಗಳು ಇಷ್ಟಪಟ್ಟು ಖರೀದಿಸಬಹುದು. ಆದರೆ, ಬೆಲೆ ಕೊಂಚ ಹೆಚ್ಚಿರುವುದರಿಂದ ಬಜೆಟ್ ಬೆಲೆಯಲ್ಲಿ ಮೋಟಾರ್‌ಸೈಕಲ್‌ ಎದುರು ನೋಡುತ್ತಿರುವವರೂ ದೂರ ಉಳಿಯಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 29, 2024, 10:00 [IST]
English summary
Husqvarna svartpilen 401 review specs riding impressions design features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+