Husqvarna Svartpilen 401: ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 ಬೈಕ್ ರಿವ್ಯೂ ವಿಡಿಯೋ, ಹೇಗಿದೆ ಗೊತ್ತಾ?
ಸ್ವೀಡಿಷ್ ಮೋಟಾರ್‌ಸೈಕಲ್ ತಯಾರಕ ಹಸ್ಕ್‌ವರ್ನಾ (Husqvarna) ಕಂಪನಿಯು, 2020ರಲ್ಲಿ ಭಾರತವನ್ನು ಪ್ರವೇಶಿಸಿತ್ತು. ನಮ್ಮ 'ಡ್ರೈವ್ ಸ್ಪಾರ್ಕ್' ತಂಡಕ್ಕೆ ಹಸ್ಕ್‌ವರ್ನಾ, ಪುಣೆಯಲ್ಲಿ ತನ್ನ ನೂತನ ಸ್ವಾರ್ಟ್ಪಿಲೆನ್ 401 ಬೈಕ್ ಟೆಸ್ಟ್ ಡ್ರೈವ್ ನಡೆಸಲು ಆಹ್ವಾನಿಸಿತು. ಈ ಮೋಟಾರ್‌ಸೈಕಲ್‌ನ ವಿನ್ಯಾಸ, ವೈಶಿಷ್ಟ್ಯ, ಕಾರ್ಯಕ್ಷಮತೆ ಹೇಗಿದೆ ಎಂಬುದರ ಬಗ್ಗೆ ವಿಡಿಯೋ ರಿವ್ಯೂ ಇಲ್ಲಿದೆ.
ಹೊಸ ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 (Husqvarna Svartpilen 401) ಮೋಟಾರ್‌ಸೈಕಲ್ ಭರ್ಜರಿ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತದೆ. ಇದು ವೃತ್ತಾಕಾರದ (Circular) ಎಲ್‌ಇಡಿ ಹೆಡ್‌ಲೈಟ್, ಸಿಂಗಲ್ ರೌಂಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಲೀಕ್ ಇಂಡಿಕೇಟರ್, ಆಕರ್ಷಕ ವಿಂಡ್‌ಶೀಲ್ಡ್ ಅನ್ನು ಪಡೆದಿದೆ.
ಈ ಹಸ್ಕ್‌ವರ್ನಾ ಸ್ವಾರ್ಟ್ಪಿಲೆನ್ 401 ಬೈಕ್, ಕೆಟಿಎಂ ಡ್ಯೂಕ್ 390 ಮೋಟಾರ್‌ಸೈಕಲ್‌ನಂತೆ 399 ಸಿಸಿ, ಸಿಂಗಲ್ - ಸಿಲಿಂಡರ್ ಡಿಒಹೆಚ್‌ಸಿ ಎಂಜಿನ್ ಹೊಂದಿದ್ದು, 45.6 bhp ಗರಿಷ್ಠ ಪವರ್, 39 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಈ ಬೈಕಿನ ಆಸನದ ಎತ್ತರ 820 ಎಂಎಂ ಇದ್ದು, ಸವಾರರು ಆರಾಮದಾಯಕವಾಗಿ ಪ್ರಯಾಣಿಸಲು ನೆರವಾಗುತ್ತದೆ. 1,354 ಎಂಎಂ ಅಳತೆಯ ವೀಲ್ ಬೇಸ್‌ನೊಂದಿಗೆ ಅತ್ಯುತ್ತಮ ಚಾಸಿಸ್ ಅನ್ನು ಪಡೆದಿದ್ದು, 177 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಮುಂಭಾಗ (ಫ್ರಂಟ್) 110/70 ಮತ್ತು ಹಿಂಭಾಗ (ರೇರ್) 150/60 ಅಳತೆಯ ಟೈರ್‌ನ್ನು ಒಳಗೊಂಡಿದೆ.

ಸ್ವಾರ್ಟ್ಪಿಲೆನ್ 401 ಮೋಟಾರ್‌ಸೈಕಲ್, ಬರೋಬ್ಬರಿ 171 ಕೆಜಿ ತೂಕವಿದೆ. 17 - ಇಂಚಿನ ವೀಲ್ಸ್, ಪಿರೆಲ್ಲಿ ಸ್ಕಾರ್ಪಿಯನ್ ರ್‍ಯಾಲಿ ಎಸ್‌ಟಿಆರ್ ಟೈರ್‌ಗಳನ್ನು ಹೊಂದಿದೆ. ಜೊತೆಗೆ 13.5 - ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಅನ್ನು ಒಳಗೊಂಡಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಮುಂಭಾಗ 320 ಎಂಎಂ, ಹಿಂಭಾಗ 240 ಎಂಎಂ ಅಳತೆಯ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








