ಹೀರೊದಿಂದ ಸ್ಪೋರ್ಟ್ಸ್ ಬೈಕ್ ನಿರೀಕ್ಷಿಸಿ
ಬಹುನಿರೀಕ್ಷಿತ ಆಟೋ ಎಕ್ಸ್ ಪೋ ಆರಂಭವಾಗುತ್ತಿರುವಂತೆಯೇ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಬೆನ್ನು ಬೆನ್ನಿಗೆ ನೂತನ ಮಾದರಿಗಳನ್ನು ಪ್ರದರ್ಶಿಸುವುದರಲ್ಲಿ ತಲ್ಲೀನವಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಐದು ನೂತನ ಮಾದರಿಗಳನ್ನು ಹೀರೊ ಪ್ರದರ್ಶಿಸಿತ್ತು. ಇಲ್ಲಿಗೆ ಹೀರೊ ಯಶಸ್ಸಿನ ಹಾದಿ ಕೊನೆಗೊಂಡಿಲ್ಲ. ಇದೀಗ 2014 ಆಟೋ ಎಕ್ಸ್ ಪೋದಲ್ಲಿ ಮಗದೊಂದು ಸ್ಪೋರ್ಟ್ಸ್ ಬೈಕ್ ಅನಾವರಣಗೊಳಿಸಲು ತಯಾರಾಗಿ ನಿಂತಿದೆ.

ಮೂಲಗಳ ಪ್ರಕಾರ, ಹೀರೊ ಮೊಟೊಕಾರ್ಪ್ ಆಟೋ ಎಕ್ಸ್ ಪೋದಲ್ಲಿ ನೂತನ ಹಸ್ತೂರ್ 600ಸಿಸಿ ನೇಕ್ಡ್ ಮೋಟಾರು ಸೈಕಲ್ ಅನಾವರಣಗೊಳಿಸಲಿದೆ. ಇದು ಕೆಟಿಎಂ ಡ್ಯೂಕ್ ಬೈಕ್‌ನಿಂದ ಸ್ಫೂರ್ತಿ ಪಡೆದು ರಚಿಸಿದಂತಿದೆ. ಒಟ್ಟಿನಲ್ಲಿ ಆಕ್ರಮಣಕಾರಿ ಸ್ಟ್ರೀಟ್ ಫೈಟರ್ ಲುಕ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರ ದೊಡ್ಡದಾದ ಚಕ್ರ, ನಿರ್ವಹಣೆ ಮತ್ತು ಹಳದಿ ಮಿಶ್ರಿತ ಮೆಟ್ಯಾಲ್ ಫ್ರೇಮ್ ಟ್ಯೂಬ್ ಹೆಚ್ಚು ಪವರ್‌ಫುಲ್ ವಿನ್ಯಾಸಕ್ಕೆ ಎಡೆ ಮಾಡಿಕೊಟ್ಟಿದೆ.
ಹಾಗೆಯೇ ಹೀರೊದ ಅಮೆರಿಕ ತಂತ್ರಗಾರಿಕೆ ಜತೆಗಾರ ಎರಿಕ್ ಬ್ಯುಯೆಲ್ ರೇಸಿಂಗ್‌ನಿಂದಲೂ ಪ್ರೇರಣೆ ಪಡೆದಿದೆ. ಜಾಗತಿಕ ಮಾರುಕಟ್ಟೆಗೆ ಕಾಲಿಡಲಿರುವ ಹೀರೊ ಹಸ್ತೂರ್ ಮುಂದಿನ ದಿನಗಳಲ್ಲಿ ಭಾರತ ಮಾರುಕಟ್ಟೆಗೂ ಪ್ರವೇಶಿಸಲಿದೆ.


Click it and Unblock the Notifications