ದಾಖಲೆ ಸಂಖ್ಯೆ ಮಾರಾಟ ದಾಖಲಿಸಿದ ಹೀರೊ

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಅಂತಿಮ ತ್ರೈಮಾಸಿಕ ಅವಧಿಯಲ್ಲಿ ದಾಖಲೆ ಸಂಖ್ಯೆಯ ಮಾರಾಟ ದಾಖಲಿಸಿದೆ.

ಕಳೆದ ವರ್ಷದ ನಿಧಾನಗತಿಯ ಏರುಗತಿ ದಾಖಲಿಸಿದ್ದ ಹೀರೊ, ಪ್ರಸಕ್ತ ಸಾಲಿನ ಆರಂಭದಿಂದಲೇ ಉತ್ತಮ ಮಾರಾಟ ದಾಖಲಿಸಿದೆ. ಅಲ್ಲದೆ 2014ನೇ ಆರ್ಥಿಕ ಸಾಲಿನಲ್ಲಿ 6.52 ಮಿಲಿಯನ್ ಯುನಿಟ್‌ಗಳ ಮಾರಾಟ ದಾಖಲಿಸಿಕೊಂಡಿತ್ತು.

Hero MotoCorp

ಈ ಪೈಕಿ ನಾಲ್ಕನೇ ಹಾಗೂ ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಗರಿಷ್ಠ ಮಾರಾಟ ದಾಖಲಿಸಿದೆ. ಈ ಅವಧಿಯಲ್ಲಿ 15,89,462 ಯುನಿಟ್ ಮಾರಾಟ ಕಂಡುಕೊಂಡಿರುವ ಹೀರೊ ಒಟ್ಟು 6512.96 ಕೋಟಿ ರು.ಗಳ ವಹಿವಾಟು ದಾಖಲಿಸುವ ಮೂಲಕ ಶೇಕಡಾ 6ರಷ್ಟು ವೃದ್ಧಿ ದಾಖಲಿಸಿದೆ. ಕಳೆದ ಬಾರಿಯಿದು ಒಟ್ಟು ವಹಿವಾಟು 6145.75 ಕೋಟಿ ರು.ಗಳಾಗಿತ್ತು.

ಫಲಿತಾಂಶ ಇಂತಿದೆ
4ನೇ ತ್ರೈಮಾಸಿಕ ಅವಧಿ (ಜನವರಿ-ಮಾರ್ಚ್ 2014)
ಮಾರಾಟ ಸಂಖ್ಯೆ 15,89,462 ಯುನಿಟ್
ಒಟ್ಟು ವಹಿವಾಟು 6512.96 ಕೋಟಿ ರು.
ನಿವ್ವಳ ಲಾಭ 554.43 ಕೋಟಿ ರು.

2014ನೇ ಆರ್ಥಿಕ ಸಾಲು
62,45,960 ಯುನಿಟ್ ಮಾರಾಟ
ಒಟ್ಟು ವಹಿವಾಟು 25,275.47 ಕೋಟಿ ರು.
ನಿವ್ವಳ ಲಾಭ 2109.08 ಕೋಟಿ ರು.

More from DriveSpark

Article Published On: Saturday, May 31, 2014, 11:23 [IST]
English summary
Last year was a tough one for the automotive industry, with slow growth and low sales. A few two wheeler manufacturers like Bajaj and TVS found their sales affected.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+