ಹಬ್ಬದ ಆವೃತ್ತಿಗೂ ಮೊದಲೇ ಹೀರೊ ಶೈನಿಂಗ್

By Nagaraja

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಮಾರಾಟದಲ್ಲಿ ಮಗದೊಂದು ದಾಖಲೆ ಸಾಧಿಸಿದೆ. ಈ ಮೂಲಕ ಹಬ್ಬದ ಆವೃತ್ತಿಗೂ ಮೊದಲೇ ಅತಿ ಹೆಚ್ಚು ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ಸನ್ನು ಕಂಡಿದೆ.

2014 ಮೇ ತಿಂಗಳಲ್ಲಿ 6,02,481 ಯುನಿಟ್‌ಗಳ ಮಾರಾಟ ದಾಖಲಿಸಿರುವ ಹೀರೊ ಮೊಟೊಕಾರ್ಪ್, ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಇದಕ್ಕೂ ಮೊದಲು ಎಪ್ರಿಲ್ ತಿಂಗಳಲ್ಲೂ 5,71,054 ಯುನಿಟ್‌ಗಳ ಮಾರಾಟ ದಾಖಲಿಸಿತ್ತು.

Hero MotoCorp

ಕಳೆದ ವರ್ಷ ಮೇ ತಿಂಗಳಲ್ಲಿ ಸಂಸ್ಥೆಯು 5,57,890 ಯುನಿಟ್‌ಗಳ ಮಾರಾಟ ದಾಖಲಿಸಿತ್ತು. ಈ ಮೂಲಕ ಶೇಕಡಾ ಎಂಟರಷ್ಟು ವೃದ್ಧಿ ದಾಖಲಿಸಿದೆ.

ಹಾಗೆಯೇ ಎರಡನೇ ಬಾರಿಗೆ ತಿಂಗಳೊಂದರಲ್ಲಿ ಆರು ಲಕ್ಷ ಮಾರಾಟ ಸಂಖ್ಯೆಯನ್ನು ದಾಟಿದ ಸಾಧನೆ ಮಾಡಿದೆ. ಈ ಹಿಂದೆ ಕಳೆದ ವರ್ಷ ಅಕ್ಟೋಬರ್ ತಿಂಗಳ ಹಬ್ಬದ ಆವೃತ್ತಿಯಲ್ಲಿ 6,25,420 ಯುನಿಟ್‌ಗಳ ಮಾರಾಟ ದಾಖಲಿಸಿಕೊಂಡಿತ್ತು.

More from DriveSpark

Article Published On: Monday, June 2, 2014, 16:42 [IST]
English summary
Hero MotoCorp, the world's largest two wheeler company in terms of sales, has shown once again why it's managed to hold on to that position for so long.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+