ಹೋಂಡಾ ಡ್ರೀಮ್ ಸಿರೀಸ್‌ನಲ್ಲಿ 3ನೇ ಎಂಟ್ರಿ ನಿರೀಕ್ಷಿಸಿ

By Nagaraja

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ), ತನ್ನ ಜನಪ್ರಿಯ ಡ್ರೀಮ್ ಸರಣಿಯ ಮೂರನೇ ಬೈಕ್ ಪ್ರಸಕ್ತ ಸಾಲಿನಲ್ಲೇ ಪರಿಚಯಿಸಲಿದೆ. ಪ್ರಸ್ತುತ ನಂ.1 ಸ್ಥಾನದಲ್ಲಿರುವ ಹೀರೊ ಮೊಟೊಕಾರ್ಪ್ ಓವರ್‌ಟೇಕ್ ಮಾಡುವ ಬೃಹತ್ ಯೋಜನೆ ಹೊಂದಿರುವ ಹೋಂಡಾ ಡ್ರೀಮ್ ಸಿರೀಸ್ ಪ್ರಯಾಣಿಕ ಬೈಕ್‌ನೊಂದಿಗೆ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡುವ ಗುರಿ ಹೊಂದಿದೆ.

ವರದಿಗಳ ಪ್ರಕಾರ, ಹೋಂಡಾ ನೂತನ ಪ್ರಯಾಣಿಕ ಬೈಕ್ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗಲಿದೆ. ಇದು ಡ್ರೀಮ್ ಸರಣಿಯ ಮೂರನೇ ಮಾದರಿಯಾಗಿರಲಿದೆ.

Honda Dream

ಈಗಾಗಲೇ ಡ್ರೀಮ್ ನಿಯೋ ಮತ್ತು ಡ್ರೀಮ್ ಯುಗಾ ಪರಿಚಯಿಸಿರುವ ಹೋಂಡಾ ಇದೀಗ ಈ ಎರಡು ಆವೃತ್ತಿಗಿಂತಲೂ ಮೇಲ್ದರ್ಜೆಯಲ್ಲಿ ನೂತನ ಬೈಕ್ ಪರಿಚಯಿಸಲಿದೆ. ಇದರ ಪ್ರಮುಖ ವೈಶಿಷ್ಟ್ಯತೆ ಏನೆಂದರೆ ಮಹೀಂದ್ರ ಸೆಂಚುರೊದಲ್ಲಿರುವಂತೆಯೇ ಹಲವಾರು ನಾವೀನ್ಯತೆಯ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಅಂತೆಯೇ ನೂತನ ಬೈಕ್ 109 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, 4 ಸ್ಟ್ರೋಕ್ ಎಸ್‌ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದ್ದು, 8.25 ಪಿಎಸ್ ಪವರ್ (8.64 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದು 50ರಿಂದ 55 ಸಾವಿರಗಳಷ್ಟು (ದೆಹಲಿ ಎಕ್ಸ್ ಶೋ ರೂ0) ದುಬಾರಿಯೆನಿಸಲಿದೆ.

Article Published On: Thursday, February 27, 2014, 12:38 [IST]
English summary
A report published by Zigwheels claims Honda Motorcycle will bring out a new commuter motorcycle by the middle of this year. The new bike will belong to the company's Dream series that made up of the Dream Neo and Dream Yuga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+