ಇಂದೇ ಖರೀದಿಸಿ; ಅಗ್ಗವಾಯ್ತು ಹೀರೊ, ಹೋಂಡಾ ಬೈಕ್‌

By Nagaraja

ವಿತ್ತ ಸಚಿವ ಪಿ. ಚಿದಂಬರಂ ಮಧ್ಯಂತರ ಬಜೆಟ್ ಮಂಡಿಸಿರುವ ಬೆನ್ನಲ್ಲೇ ದೇಶದ ಅಗ್ರಪಂಕ್ತಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಾಗಿರುವ ಹೀರೊ ಮೊಟೊಕಾರ್ಪ್ ಹಾಗೂ ಹೋಂಡಾ ಮೋಟಾರುಸೈಕಲ್ ಬೈಕ್ ದರಗಳನ್ನು ಕಡಿತಗೊಳಿಸಿದೆ.

ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ಕಾರು ಸೇರಿದಂತೆ ಬೈಕ್ ಮೇಲಿನ ಅಬಕಾರಿ ಸುಂಕಗಳನ್ನು ಕಡಿತಗೊಳಿಸಿತ್ತು. ಇದರ ಫಲವೆಂಬಂತೆ ಬೈಕ್ ದರಗಳಲ್ಲಿ ಇಳಿಕೆ ಕಂಡುಬಂದಿದೆ. ಇದರಂತೆ ಹೋಂಡಾ ಮೋಟಾರುಸೈಕಲ್ ಸ್ಕೂಟರ್ ಇಂಡಿಯಾ ಸಂಸ್ಥೆಯು 7,600 ರು. ವರೆಗೂ ಮತ್ತು ಹೀರೊ ಮೊಟೊಕಾರ್ಪ್ ರು. 4,500 ವರೆಗೂ ದರ ಇಳಿಕೆಗೊಳಿಸಿದೆ.


ಅಬಕಾರಿ ಸುಂಕ ಕಡಿತದ ಗರಿಷ್ಠ ಪ್ರಯೋಜನವನ್ನು ಗ್ರಾಹಕರಿಗೆ ವಿತರಿಸಲು ಪ್ರಯತ್ನಿಸುತ್ತಿದ್ದೇವೆ. ಇದರಂತೆ ಬೈಕ್‌ಗಳ ದರಗಳನ್ನು ಶೇಕಡಾ 2ರಿಂದ 5ರಷ್ಟು ಕಡಿತಗೊಳಿಸಲಾಗುತ್ತಿದೆ ಎಂದು ಹೀರೊ ಮೊಟೊಕಾರ್ಪ್ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಹೀರೊ ಕರಿಜ್ಮಾ ಝಡ್‌ಎಂಆರ್, ಇಂಪಲ್ಸ್, ಸ್ಲ್ಪೆಂಡರ್ ಮತ್ತು ಗ್ಲಾಮರ್ ದರಗಳಲ್ಲಿ ಕಡಿತವುಂಟಾಗಲಿದೆ.

ಇನ್ನೊಂದೆಡೆ ಹೋಂಡಾ ಡ್ರೀಮ್ ಯುಗಾ ದರಗಳಲ್ಲಿ ರು. 1600ರಷ್ಟು ಇಳಿಕೆ ಕಂಡುಬಂದಿದೆ. ಅಲ್ಲದೆ ಸಿಬಿ ಸ್ಟನ್ನರ್, ಸಿಬಿ ಯೂನಿಕಾರ್ನ್ ಹಾಗೂ ಸಿಬಿ ಟ್ವಿಸ್ಟರ್‌ಗಳಂತಹ ಬೈಕ್ ದರಗಳಲ್ಲೂ ಇಳಿಕೆಯುಂಟಾಗಲಿದೆ.

hero

ಲೋಕಸಭೆಯಲ್ಲಿ ಮಂಡಿಸಿರುವ 2014-15ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಸಣ್ಣ ಕಾರು, ಬೈಕ್, ಸ್ಕೂಟರ್ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯನ್ನು ಶೇಕಡಾ 12ರಿಂದ 8ರ ವರೆಗೆ ಇಳಿಕೆಗೊಳಿಸಲಾಗಿತ್ತು. ಹಾಗೆಯೇ ಎಸ್‌ಯುವಿ ಕಾರುಗಳ ಮೇಲಿನ ತೆರಿಗೆಯನ್ನು ಶೇಕಡಾ 30ರಿಂದ 24ಕ್ಕೆ ಕಡಿತಗೊಳಿಸಿತ್ತು. ಇದು ಜೂನ್ ತಿಂಗಳ ವರೆಗೆ ಚಾಲ್ತಿಯಲ್ಲಿರಲಿದೆ.

More from DriveSpark

Article Published On: Wednesday, February 19, 2014, 11:04 [IST]
English summary
Honda Motorcycle & Scooter India (HMSI) and Hero MotoCorp slashed product prices after the excise duty reduction announced in the Interim Budget 2014-15.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+