ಹೊಸ ವರ್ಣದಲ್ಲಿ ಇನ್ನಷ್ಟು ಸುಂದರ ಹೋಂಡಾ ಡ್ರೀಮ್ ನಿಯೋ

By Nagaraja

ಹೀರೊ ಬೈಕ್‌ಗಳಿಗೆ ಅತ್ಯಂತ ನಿಕಟ ಪೈಪೋಟಿ ಒಡ್ಡುತ್ತಿರುವ ದೇಶದ ಎರಡನೇ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್ ಸಂಸ್ಥೆಯು ತನ್ನ ಜನಪ್ರಿಯ ಡ್ರೀಮ್ ನಿಯೋ ಆವೃತ್ತಿಯನ್ನು ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ.

ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಹಬ್ಬದ ಆವೃತ್ತಿಯನ್ನು ಗಮನದಲ್ಲಿಟ್ಟಕೊಂಡು ಹೋಂಡಾ ಸಂಸ್ಥೆಯು ಹೊಸತಾದ ಪಿಯರ್ಲ್ ಅಮೇಜಿಂಗ್ ವೈಟ್ ಸ್ಕೀಮ್ ಬಣ್ಣವನ್ನು ಪರಿಚಯಿಸಿದೆ. ಇದು ಅತ್ಯಾಕರ್ಷಕ ಕಪ್ಪು ಹಾಗೂ ಕೆಂಪು ವರ್ಣಗಳ ಬಾಡಿ ಗ್ರಾಫಿಕ್ಸ್ ಸಹ ಹೊಂದಿರಲಿದೆ.

ಹೋಂಡಾದ ಎಲ್ಲ ಡೀಲರುಶಿಪ್‌ಗಳಲ್ಲಿ ಹೊಸ ಡ್ರೀಮ್ ನಿಯೋ ಬಣ್ಣಗಳ ಆಯ್ಕೆಯು ತಲುಪಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 42,237 ರು.ಗಳಾಗಿರಲಿದೆ. ಪ್ರಸ್ತುತ ಹೋಂಡಾ ಡ್ರೀಮ್ ನಿಯೋ ಬೈಕ್, ಮಾನ್ಸೂನ್ ಗ್ರೇ ಮೆಟ್ಯಾಲಿಕ್, ಬ್ಲ್ಯಾಕ್ ಜೊತೆ ರೆಡ್ ಸ್ಟ್ರಿಪ್, ಬ್ಲ್ಯಾಕ್ ಜೊತೆ ವೈಲಟ್ ಸ್ಟ್ರಿಪ್ ಮತ್ತು ಅಲ್ಫ ರೆಡ್ ಮೆಟ್ಯಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ. ಇದಕ್ಕೀಗ ಪಿಯರ್ಲ್ ಅಮೇಜಿಂಗ್ ವೈಟ್ ಬಣ್ಣ ಸೇರ್ಪಡೆಯಾಗಿದೆ.

honda dream neo

ಎಂಜಿನ್
ಹೋಂಡಾ ಡ್ರೀಮ್ ನಿಯೋ ಪ್ರಯಾಣಿಕ ಬೈಕ್ 109 ಸಿಸಿ ಏರ್ ಕೂಲ್ಡ್ ಎಸ್‌ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 8.25 ಬಿಎಚ್‌ಪಿ (8.63 ಎನ್‌ಎಂ ಪೀಕ್ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕಾರ್ಬ್ಯೂರೇಟರ್ ಇಂಧನ ವಿತರಣಾ ವ್ಯವಸ್ಥೆ ಹೊಂದಿರುವ ಇದು ಕಿಕ್/ಸೆಲ್ಫ್ ಸ್ಟಾರ್ಟ್ ಸಹ ಹೊಂದಿದೆ. ಅಲ್ಲದೆ 4 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.

ಸಂಸ್ಥೆಯ ಪ್ರಕಾರ ಡ್ರೀಮ್ ನಿಯೋ, ಪ್ರತಿ ಲೀಟರ್‌ಗೆ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದೀಗ ಹೊಸ ಬಣ್ಣದ ಆಯ್ಕೆಯೊಂದಿಗೆ ಮಾರಾಟ ಉತ್ತೇಜಿಸುವ ನಿರೀಕ್ಷೆಯನ್ನು ಹೊಂದಿದೆ.

Article Published On: Friday, September 5, 2014, 12:20 [IST]
English summary
Honda India is one of the largest two wheeler manufacturer and seller in India. The Japanese automobile giant has not introduced any new product this festive season. However, they have given their top commuter motorcycle an all new and attractive paint scheme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+