2015 ಹೋಂಡಾ ಸಿಬಿಆರ್150ಆರ್ ಇಂಡೋನೇಷ್ಯಾದಲ್ಲಿ ಬಿಡುಗಡೆ
ಇನ್ನೇನು ಕೆಲವೇ ತಿಂಗಳೊಳಗೆ ಪ್ರವೇಶಿಸಲಿರುವ ಹೊಸ 2015 ಹೋಂಡಾ ಸಿಬಿಆರ್150ಆರ್ ಭಾರತಕ್ಕೂ ಮುಂಚಿತವಾಗಿ ಇಂಡೋನೇಷ್ಯಾ ಮಾರುಕಟ್ಟೆಯನ್ನು ತಲುಪಿದೆ.
ಭಾರತದಲ್ಲಿ ಬಿಡುಗಡೆಯಾಗಿದ್ದ ಹೋಂಡಾ ಸಿಬಿಆರ್150ಆರ್ ನಿರೀಕ್ಷಿದಷ್ಟು ಯಶ ಸಾಧಿಸಿರಲಿಲ್ಲ. ಇದರ ವಿನ್ಯಾಸ ಭಾರತೀಯ ಗ್ರಾಹಕರ ಮನ ಮುಟ್ಟುವಲ್ಲಿ ವಿಫಲವಾಗಿರುವುದೇ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿತ್ತು.

ಇದೀಗ ಪರಿಷ್ಕೃತ ಸಿಬಿಆರ್150ಆರ್ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗಿದ್ದು, ಇದು ಸಿಬಿಆರ್300ಆರ್ ಮಾದರಿಯಿಂದ ವಿನ್ಯಾಸ ತಂತ್ರವನ್ನು ಅನುಸರಿಸಿದೆ. ಇದೇ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆ ಸಂದರ್ಭದಲ್ಲಿ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.
2015 ಹೋಂಡಾ ಸಿಬಿಆರ್150ಆರ್ ಮಾದರಿಯಲ್ಲಿ ಅನೇಕ ಬದಲಾವಣೆಗಳು ಕಂಡುಬರಲಿದೆ. ಇದು 149.4 ಸಿಸಿ ಸಿಂಗಲ್ ಸಿಲಿಂಡರ್ 4 ವಾಲ್ವ್ ಲಿಕ್ವಿಡ್ ಕೂಲಿಂಗ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 17.1 ಪಿಎಸ್ ಪವರ್ (12.66 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.
ಹೊಸ ಸಿಬಿಆರ್150ಆರ್ ಮುಂಭಾಗದಲ್ಲಿ ಟ್ವಿನ್ ಹೆಡ್‌ಲ್ಯಾಂಪ್ ಮತ್ತು ಒ2 ಸೆನ್ಸಾರ್ ಹೊಂದಿರುವ ಪರಿಷ್ಕೃತ ಎಕ್ಸಾಸ್ಟ್ ಸಿಸ್ಟಂ ಪಡೆಯಲಿದೆ. ಇದು ಪ್ರಮುಖವಾಗಿಯೂ ಯಮಹಾ ವೈಝಡ್‌ಎಫ್-ಆರ್15 ಮಾದರಿಗೆ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications