ಹೋಂಡಾ ಬೈಕ್, ಸ್ಕೂಟರ್ ಮಾರಾಟ ಹೆಚ್ಚಳ
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು 2014 ಮೇ ತಿಂಗಳ ಮಾರಾಟದಲ್ಲಿ ಶೇಕಡಾ 55ರಷ್ಟು ವೃದ್ಧಿ ದಾಖಲಿಸಿದೆ.
ಈ ಅವಧಿಯಲ್ಲಿ ಹೋಂಡಾ ಒಟ್ಟು 3,55,726 ಯುನಿಟ್ ವಾಹನಗಳನ್ನು ಮಾರಾಟ ಮಾಡಿವೆ. 2013 ಮೇ ತಿಂಗಳ ಇದೇ ಅವಧಿಯಲ್ಲಿ ಈ ಸಂಖ್ಯೆಯು 2,29,143 ಲಕ್ಷ ಯುನಿಟ್‌ಗಳಾಗಿದ್ದವು.

ಭಾರತದಲ್ಲಿ ಯೂನಿಕಾರ್ನ್, ಸಿಬಿ ಡಾಜ್ಲರ್, ಟ್ವಿಸ್ಟರ್, ಸಿಬಿಆರ್250ಆರ್, ಸಿಬಿಎಆರ್150ಆರ್, ಸಿಬಿ ಶೈನ್, ಸಿಬಿಎಫ್ ಸ್ಟನ್ನರ್, ಡ್ರೀಮ್ ಯುಗಾ, ಡ್ರೀಮ್ ನಿಯೋ, ಆಕ್ಟಿವಾ ಐ, ಆಕ್ಟಿವಾ 125, ಆವಿಯೇಟರ್ ಹಾಗೂ ಡಿಯೊ ಮಾದರಿಗಳನ್ನು ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಮಾರಾಟ ಮಾಡುತ್ತಿದೆ.
ಇದೇ ಸಂದರ್ಭದಲ್ಲಿ 2014 ಮೇ ತಿಂಗಳಲ್ಲಿ ಹೋಂಡಾ ಸಂಸ್ಥೆಯು 1,95,431 ಸ್ಕೂಟರುಗಳನ್ನು ಮಾರಾಟ ಮಾಡಿವೆ. ಕಳೆದ ಬಾರಿಯಿದು 1,37,863 ಯುನಿಟ್‌ಗಳಾಗಿದ್ದು ಶೇಕಡಾ 42ರಷ್ಟು ವೃದ್ಧಿ ದಾಖಲಿಸಿದೆ.
ಇನ್ನು ಬೈಕ್ ವಿಭಾಗವನ್ನು ಪರಿಗಣಿಸಿದ್ದಲ್ಲಿ 2014 ಮೇ ತಿಂಗಳ ಅವಧಿಯಲ್ಲಿ 1,60,295 ಮಾರಾಟ ಕಂಡುಕೊಂಡಿವೆ. ಈ ಮೂಲಕ ಭರ್ಜರಿ ಶೇಕಡಾ 76ರಷ್ಟು ಏರಿಕೆ ದಾಖಲಿಸಿದೆ. ಕಳೆದ ಬಾರಿಯಿದು 91,280 ಯುನಿಟ್‌ಗಳಾಗಿದ್ದವು.


Click it and Unblock the Notifications








