ಹಳ್ಳಿಗಾಡು ಪ್ರದೇಶಗಳಿಗೆ 'ಹೋಂಡಾ ಸರ್ವೀಸ್ ಆನ್ ವೀಲ್ಸ್' ಸೇವೆ
ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ಸಂಪರ್ಕ ರಹಿತ ದೂರದ ಪ್ರದೇಶಗಳಿಗೆ ನೂತನ 'ಸರ್ವೀಸ್ ಆನ್ ವೀಲ್ಸ್ ಸೇವೆ' ಆರಂಭಿಸಿದೆ. ಇದು ಹಳ್ಳಿಗಳಲ್ಲಿ ವಾಸಿಸುವ ಹೋಂಡಾ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಿದೆ.
ಈ ಮೂಲಕ ಸಾಮಾನ್ಯ ಸರ್ವೀಸ್ ಸ್ಟೇಷನ್ ಹೊರತಾಗಿಯೂ ಹಳ್ಳಿ ಪ್ರದೇಶಗಳಲ್ಲೂ ತನ್ನ ಸೇವೆಯನ್ನು ಇನ್ನಷ್ಟು ಸಮಪರ್ಕವಾಗಿಸಲು ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಗುರಿಯಾಗಿರಿಸಿಕೊಂಡಿದೆ.

ಅದೇ ಹೊತ್ತಿಗೆ ಮಾರ್ಚ್ ಮಾಸಂತ್ಯದ ವೇಳೆಯಾಗುವಾಗ 782 ಹೋಂಡಾ ಡೀಲರುಶಿಪ್‌ಗಳಿಗೆ ಆಕ್ಟಿವಾ ಆಟೋಮ್ಯಾಟಿಕ್ ಸ್ಕೂಟರುಗಳನ್ನು ಒಪ್ಪಿಸಲಾಗುವುದು. ಇದು ಗ್ರಾಹಕರಿರುವ ಸ್ಥಳದಲ್ಲೇ ಸರ್ವೀಸ್ ಮಾಡಲು ನೆರವಾಗಲಿದೆ. ಈ ಮೂಲಕ ಗ್ರಾಹಕರು ಸರ್ವೀಸ್‌ಗಾಗಿ ತುಂಬಾ ದೂರದಲ್ಲಿರುವ ಪಟ್ಟಣಕ್ಕೆ ಬರುವುದನ್ನು ತಪ್ಪಿಸಬಹುದಾಗಿದೆ.
ಹೋಂಡಾ ಸರ್ವೀಸ್ ಆನ್ ವೀಲ್ಸ್, ನುರಿತ ತರಬೇತಿ ಪಡೆದ ವೃತ್ತಿನಿರತರು ಕಾರ್ಯ ನಿರ್ವಹಿಸಲಿದ್ದಾರೆ. ಹಾಗೆಯೇ ಸರ್ವೀಸ್ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ಹೋಂಡಾ ಸಂಸ್ಥೆ ತಿಳಿಸಿದೆ.


Click it and Unblock the Notifications








