ಹೋಂಡಾ ಡ್ರೀಮ್ ಶ್ರೇಣಿಯ ಬೈಕ್‌ಗಳಲ್ಲಿ ಅಕ್ಷಯ್ ಜಾದೂ
ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಎಸ್‌ಐ) ತನ್ನ ಡ್ರೀಮ್ ಶ್ರೇಣಿಯ ಬೈಕ್‌ಗಳ ಮಾರಾಟ ಉತ್ತೇಜನಕ್ಕಾಗಿ ಹೊಸ ಜಾಹೀರಾತುವೊಂದನ್ನು ಬಿಡುಗಡೆಗೊಳಿಸಿದೆ.
ವಿಶೇಷವೆಂದರೆ ಡ್ರೀಮ್ ಹೊಸ ಜಾಹೀರಾತಿನಲ್ಲಿ ಬಾಲಿವುಡ್ ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ಕೈಚಳಕ ತೋರಿದ್ದಾರೆ. ಅಲ್ಲದೆ ಈ 45 ಸೆಕೆಂಡುಗಳ ಟಿ.ವಿ ಜಾಹೀರಾತಿನಲ್ಲಿ ಡ್ರೀಮ್ ಸಿರೀಸ್ ಬೈಕ್‌ಗಳನ್ನು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅಕ್ಷಯ್ ಪ್ರಚಾರ ಮಾಡುತ್ತಾರೆ.

ಅಪ್ಪ ಹಾಗೂ ಮೂರು ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಕ್ಷಯ್, ಡ್ರೀಮ್ ಯುಗಾ, ಡ್ರೀಮ್ ನಿಯೋ ಮತ್ತು ಸಿಡಿ 110 ಡ್ರೀಮ್ ಬೈಕ್‌ಗಳ ಮಹಿಮೆಯ ಬಗ್ಗೆ ಹೇಳುತ್ತಾರೆ. ಪ್ರಸ್ತುತ ಡ್ರೀಮ್ ಶ್ರೇಣಿಯ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನಲೆಯಲ್ಲಿ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ನಿಮ್ಮ ದೈನಂದಿನ ಬಳಕೆ, ಕಚೇರಿ ಕಲಾಪ ಹಾಗೂ ಕುಟುಂಬ ವರ್ಗದ ಪಯಣಕ್ಕೆ ಡ್ರೀಮ್ ಶ್ರೇಣಿಯ ಬೈಕ್‌ಗಳು ಹೆಚ್ಚು ಸೂಕ್ತವೆನಿಸಲಿದೆ. ಇದು ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ 20ರಿಂದ 40 ವರ್ಷ ಪ್ರಾಯ ಪರಿಧಿಯ ಗ್ರಾಹಕರನ್ನು ಗುರಿಯಿರಿಸಿಕೊಂಡಿದೆ.


Click it and Unblock the Notifications








