ಬೆಂಗಳೂರಿಗೆ ಎಂಟ್ರಿ ಕೊಟ್ಟ ವಿಶ್ವದ ಅತಿ ವೇಗದ ಸೈಕಲ್
ವಿಶ್ವದ ಅತಿ ವೇಗದ ಸೈಕಲ್ ಇದೀಗ ಬೆಂಗಳೂರಿನಲ್ಲೂ ಲಭ್ಯ. ಹೌದು, ಭಾರತೀಯರಿಗಾಗಿ ಬೆಂಗಳೂರಿನ ಇಂಧಿರಾನಗರದಲ್ಲಿರುವ ಸ್ಟಾರ್‌ಕೆನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ವಿಶ್ವದ ಅತ್ಯಂತ ವೇಗದ ಜೈಂಟ್ ಸೈಕಲನ್ನು ಪರಿಚಯಿಸಿದೆ.
ಇದರೊಂದಿಗೆ ತೈವಾನ್‌ನ ಪ್ರಸಿದ್ಧ ಸೈಕಲ್ ಬ್ರಾಂಡ್ ಆಗಿರುವ ಜೈಂಟ್ ಬೈಸಿಕಲ್ಸ್ ಭಾರತಕ್ಕೆ ಅಧಿಕೃತ ಎಂಟ್ರಿ ಕೊಟ್ಟಿದೆ. ಅಂದ ಹಾಗೆ ಇದರ ಬೆಲೆ ಎಷ್ಟು ಗೊತ್ತೇ? ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ..

ಹೌದು, ಭಾರತ ಪ್ರವೇಶ ಪಡೆದಿರುವ ಜೈಂಟ್ ಬೈಸಿಕಲ್ಸ್‌ನ ಮುಂದುವರಿದ ಎಸ್‌ಎಲ್ 0 ಸೈಕಲ್, ಬರೋಬ್ಬರಿ 10.59 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಬೆಂಗಳೂರಿನಲ್ಲಿರುವ ಜೈಂಕ್ ಸ್ಟಾರ್‌ಕೆನ್ ಸೈಕ್ಲಿಂಗ್ ವಲ್ಡ್‌ನಲ್ಲಿ ಇದು ಲಭ್ಯವಾಗಲಿದೆ. 3,200 ಚರದ ಅಡಿ ವರೆಗೂ ವಿಸ್ತರಿಸಿರುವ ಇಲ್ಲಿನ ಶೋ ರೂಂನಲ್ಲಿ ಬೈಕ್ ಸಿಮ್ಯುಲೇಟರ್, ಬೈಕ್ ಸ್ಪಾ, ಬೈಕ್ ಕಿಟ್, ಬೈಕ್ ಲೈಬ್ರರಿ, ಬೈಕ್ ಕೆಫೆ ಮತ್ತು ಬೈಕ್ ಪ್ರದರ್ಶನ ಮಳಿಗೆಯಿರಲಿದೆ.

ನಿಮ್ಮ ಮಾಹಿತಿಗಾಗಿ ಚಾಂಪಿಯನ್ ಸೈಕಲ್ ರೇಸರ್ ಮಾರ್ಸೆಲ್ ಕೆಟೆಲ್ ಇದೇ ಸೈಕಲ್‌ನಲ್ಲಿ ತಾವು ಭಾಗವಹಿಸಿದ ಎಂಟು ಸ್ಪರ್ಧೆಗಳಲ್ಲಿ ಮೂರು ಬಾರಿ ವಿಜಯ ಪತಾಕೆ ಹಾರಿಸಿದ್ದರು.

ಅಲ್ಲದೆ ಸೈಕಲ್ ಭಾರವನ್ನು ಕಡಿಮೆಗೊಳಿಸಲು ಹಗುರ ಭಾರದ ಉಪಕರಣಗಳನ್ನು ಬಳಕೆ ಮಾಡಲಾಗಿದೆ. ಹಾಗೆಯೇ ಏರೋಡೈನಾಮಿಕ್ ವಿನ್ಯಾಸಕ್ಕೆ ಹೆಚ್ಚು ಒತ್ತುಕೊಡಲಾಗಿದೆ.

ಸ್ಟಾರ್‌ಕೆನ್ ಸ್ಪೋರ್ಟ್ಸ್ ಪ್ರಕಾರ, ಈ ಪ್ರೀಮೀಯಂ ಸೈಕಲ್‌ಗಳು 18,500 ರು.ಗಳಿಂದ ಆರಂಭವಾಗಿ ಗರಿಷ್ಟ 10.59 ಲಕ್ಷ ರು.ಗಳ ವರೆಗಿನ ರೇಂಜ್‌ನಲ್ಲಿ ಲಭ್ಯಾವಗಲಿದೆ. ಇದರಲ್ಲಿ ಆಫ್ ರೋಡ್, ಎಕ್ಸ್ ರೋಡ್, ಮಡಚಬಹುದಾದ ಬೈಕ್, ಸಿಟಿ ಬೈಕ್, ಪುರುಷರಿಗಾಗಿ ಆಫ್ ರೋಡ್ ಹಾಗೂ ಮಹಿಳೆ ಮತ್ತು ಮಕ್ಕಳಿಗಾಗಿ ವಿಶೇಷ ಬೈಕ್‌ಗಳು ಸೇರಿರಲಿದೆ.


Click it and Unblock the Notifications








