ಗುರ್ಗಾಂವ್‌ನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಮೊದಲ ಶೋ ರೂಂ
ಇಂಡಿಯನ್ ಮೋಟಾರ್‌ಸೈಕಲ್ ಪ್ರಪ್ರಥಮ ಶೋ ರೂಂ ಗುರ್ಗಾಂವ್‌ನಲ್ಲಿ ತಲೆಯಿತ್ತಿದೆ. ಪೊಲರಿಸ್ ಅಧೀನತೆಯಲ್ಲಿರುವ ಇಂಡಿಯನ್ ಮೋಟಾರ್‌ಸೈಕಲ್‌ನ ಗುರ್ಗಾಂವ್ ಘಟಕ ಮೇ 7ರಂದು ಉದ್ಘಾಟನೆಗೊಂಡಿತ್ತು.
ಜಾಗತಿಕ ದರ್ಜೆಯ ಶೋ ರೂಂನಲ್ಲಿ ಐಕಾನಿಕ್ ಇಂಡಿಯನ್ ಮೋಟಾರುಸೈಕಲ್ ಮಾದರಿಗಳು ಮಾರಾಟವಾಗಲಿದೆ. ಇದು ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡಲಿದೆ.

ಪ್ರಸಕ್ತ ಸಾಲಿನ ಅಂತ್ಯದ ವೇಳೆಯಾಗುವಾಗ ಇನ್ನೆರಡು ಶೋ ರೂಂ ತೆರೆದುಕೊಳ್ಳುವ ಯೋಜನೆಯನ್ನು ಅಮೆರಿಕ ಮೂಲದ ವಾಹನ ತಯಾರಿಕ ಹೊಂದಿದೆ. ಪ್ರಸ್ತುತ ಗುರ್ಗಾಂವ್‌ನಲ್ಲಿರುವ ಘಟಕದಲ್ಲಿ ಏಕಕಾಲಕ್ಕೆ ಒಂಬತ್ತು ಬೈಕ್‌ಗಳ ಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದೆ.
2011ರಲ್ಲಿ ಪೊಲರಿಸ್ ತೆಕ್ಕೆಗೆ ಇಂಡಿಯನ್ ಮೋಟಾರ್‌ಸೈಕಲ್ ಸೇರಿಕೊಂಡಿತ್ತು. ಇದರಂತೆ ಜಾಗತಿಕ ಗತಕಾಲದ ವೈಭವ ಮರಕಳಿಸುವ ಪ್ರಯತ್ನದಲ್ಲಿದೆ.



Click it and Unblock the Notifications








