ಕವಾಸಕಿ ವೆರ್ಸಸ್ 1000 ಭಾರತದಲ್ಲಿ ಬಿಡುಗಡೆ

Written By:

ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಕವಾಸಕಿ ಮೋಟಾರ್ಸ್ ಭಾರತದಲ್ಲಿ ಹೊಸತಾದ ಕವಾಸಕಿ ವೆರ್ಸಸ್ 1000 ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದು ಕವಾಸಕಿ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆ ಹೊಂದಿದೆ.

ಸಮತಲವಾದ ಹೆಡ್ ಲೈಟ್ ಜೊತೆಗೆ ಏರ್ ವೆಂಟ್‌ಗಳಂತಹ ಹೊಸ ವಿಶಿಷ್ಟತೆಗಳನ್ನು ಸುಜುಕಿ ವಿ ಸ್ಟ್ರೋಮ್‌ಗಳಂತಹ ಬೈಕ್‌ಗಳ ಸ್ಪರ್ಧೆ ಎದುರಿಸಲು ಕವಾಸಕಿ ವೆರ್ಸಸ್ ಮಾದರಿಗೆ ನೆರವಾಗಲಿದೆ.

ಕವಾಸಕಿ ವೆರ್ಸಸ್ 1000 ಮಾದರಿಯು 1043 ಸಿಸಿ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಇನ್ ಲೈನ್ ಫೋರ್ ಸಿಲಿಂಡರ್ ಮತ್ತು ಫ್ಯೂಯಲ್ ಇಂಜೆಕ್ಟಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಗರಿಷ್ಟ ಗ್ರೌಂಡ್ ಕ್ಲಿಯರನ್ಸ್ ಕೂಡಾ ಹೊಂದಿರುವ ಕವಾಸಕಿ ವೆರ್ಸಸ್, ಡಿಒಎಚ್‌ಸಿ ಮತ್ತು ಪ್ರತಿ ಸಿಲಿಂಡರ್‌ಗೆ ನಾಲ್ಕು ವಾಲ್ವ್ ಹೊಂದಿರುತ್ತದೆ. ಎಬಿಎಸ್ ತಂತ್ರಗಾರಿಕೆಯನ್ನು ಹೊಂದಿರುವ ವೆರ್ಸಸ್ 1000, ಮುಂದುಗಡೆ ಟ್ವಿನ್ ಪೆಡಾಲ್ ಡಿಸ್ಕ್ ಬ್ರೇಕ್ ಮತ್ತು ಹಿಂದುಗಡೆ ಸಿಂಗಲ್ ಡಿಸ್ಕ್ ಬ್ರೇಕ್ ಹೊಂದಿರಲಿದೆ.

ಅಂದ ಹಾಗೆ ಕವಾಸಕಿ ವೆರ್ಸಸ್ 1000 ಪುಣೆ ಎಕ್ಸ್ ಶೋ ರೂಂ ಬೆಲೆ 12,90,000 ರು.ಗಳಾಗಿರಲಿದೆ.

Kawasaki Versys 1000
English summary
Kawasaki has just launched its biggest adventure touring bike the Versys 1000 in India. The Kawasaki Versys 1000 is powered by a 1043cc, four-stroke, liquid-cooled, in-line four cylinder and fuel-injected engine and priced at Rs 12.90 lakhs (ex-showroom, Pune).
Story first published: Tuesday, November 25, 2014, 11:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark