ದೇಶದಲ್ಲಿ ತನ್ನ ಬಲ ವೃದ್ಧಿಸಿದ ಕವಾಸಕಿ; ಝಡ್800 ಲಾಂಚ್

Written By:

ಭಾರತದಲ್ಲಿ ಕವಾಸಕಿ ತನ್ನ ಸಾನಿಧ್ಯವನ್ನು ಇನ್ನಷ್ಟು ವೃದ್ಧಿಸಿದೆ. ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ನೂತನ ಝಡ್800 ಮಾದರಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.

ನೂತನ ಕವಾಸಕಿ ಝಡ್800 ಮಾದರಿಯ ದೆಹಲಿ ಎಕ್ಸ್ ಶೋ ರೂಂ ದರ 8.05 ರು.ಗಳಾಗಿರಲಿದೆ. ಅಂತೆಯೇ 2014ರಲ್ಲಿ 400ರಷ್ಟು ಯುನಿಟ್‌ಗಳನ್ನು ಮಾರಾಟ ಮಾಡುವುದು ಕಂಪನಿ ಇರಾದೆಯಾಗಿದೆ.

Kawasaki Z800

ಈ 806ಸಿಸಿ ಗಾಡಿ ಕವಾಸಕಿಯಿಂದ ಆಗಮನವಾಗುತ್ತಿರುವ ಐದನೇ ಕಂಪ್ಲೀಟ್ ಬಿಲ್ಟ್ ಯುನಿಟ್ ಮಾದರಿಯಾಗಿರಲಿದೆ. ಅಂದರೆ 14ಆರ್, 10ಆರ್, ಝಡ್1000 ಮತ್ತು ನಿಂಜಾ 1000 ಸಾಲಿಗೆ ನೂತನ ಝಡ್800 ಸೇರ್ಪಡೆಯಾಗಲಿದೆ.

ಕಳೆದ ವರ್ಷಾಂತ್ಯದಲ್ಲಿ ಕವಾಸಕಿ ಝಡ್1000 ಮತ್ತು ನಿಂಜಾ 1000 ಲಾಂಚ್ ಆಗಿದ್ದವು. ಅಷ್ಟೇ ಅಲ್ಲದೆ ನಿಂಜಾ ಝಡ್‌ಎಕ್ಸ್-14ಆರ್ ಮತ್ತು ಝಡ್‌ಎಕ್ಸ್-10ಆರ್ ಕೂಡಾ ಆಗಮನವಾಗಿದ್ದವು.

English summary
Kawasaki has added to its range of motorcycles the Z800 model in India. The Japanese naked street racer will come with a price tag of Rs 8.05 lakh ex-showroom Delhi.
Story first published: Friday, January 24, 2014, 14:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark