ಸೆಪ್ಟೆಂಬರ್ ಮೊದಲಾರ್ಧದಲ್ಲೇ ಕೆಟಿಎಂ ಆರ್‌ಸಿ390 ಬಿಡುಗಡೆ
ದೇಶದ ಮಾರುಕಟ್ಟೆಗೆ ಕ್ರೀಡಾ ರೇಂಜ್ ಬೈಕ್‌ಗಳನ್ನು ಪರಿಚಯಿಸಿರುವ ಕೆಟಿಎಂ ಸಂಸ್ಥೆಯು ಮಗದೊಂದು ಅತ್ಯಂತ ಆಕರ್ಷಕ ಆರ್‌ಸಿ390 ಬೈಕನ್ನು ಸೆಪ್ಟೆಂಬರ್ ಮೊದಲಾರ್ಧದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಬಲ್ಲ ಮೂಲಗಳ ಪ್ರಕಾರ ಕೆಟಿಎಂ ಆರ್‌ಸಿ390 ಸೆಪ್ಟೆಂಬರ್ 9ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಬಳಿಕವಷ್ಟೇ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಆರ್
ಸಿ390 ಬಿಡುಗಡೆ ಬೆನ್ನಲ್ಲೇ ಆರ್‌ಸಿ200 ಲಾಂಚ್ ಮಾಡುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ಅಂದ ಹಾಗೆ ಆರ್‌ಸಿ390 ಬೈಕ್ 373.3 ಸಿಸಿ ಲಿಕ್ವಿಡ್ ಸೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 42.9 ಅಶ್ವಶಕ್ತಿ (35 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ 6 ಸ್ಪೀಡ್ ಗೇರ್‌ಬಾಕ್ಸ್ ಸಹ ಇರಲಿದೆ.
ಮಗದೊಂದು ವೈಶಿಷ್ಟ್ಯವೆಂದರೆ ಆರ್‌ಸಿ390 ಆವೃತ್ತಿಯಲ್ಲಿ ಎಬಿಎಸ್ ಸ್ಟಾಂಡರ್ಡ್ ಆಗಿ ದೊರಕಲಿದೆ. ಇದು ಹೋಂಡಾ ಸಿಬಿಆರ್300ಆರ್ ಮತ್ತು ಯಮಹಾ ಆರ್25 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.
ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಆರ್‌ಸಿ390, ಎರಡು ಲಕ್ಷ ರು.ಗಳ (ಎಕ್ಸ್ ಶೋ ರೂಂ ದರ) ಅಸುಪಾಸಿನಲ್ಲಿ ಆಗಮನವಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಹೆಚ್ಚಿನ ಮಾಹಿತಿಗಳು ಬಿಡುಗಡೆ ವೇಳೆಯಷ್ಟೇ ಲಭಿಸಲಿದೆ.


Click it and Unblock the Notifications








