ಕೆಟಿಎಂ 390 ಡ್ಯೂಕ್ ಮಾಲಿಕರಿಗಾಗಿ ಟ್ರ್ಯಾಕ್ ಡೇ

Written By:

ಭಾರತದಲ್ಲಿ ಕೆಟಿಎಂ ಡ್ಯೂಕ್ ಬೈಕ್‌ಗಳು ಹೆಚ್ಚೆ ಜನಪ್ರಿಯಗೊಳ್ಳುತ್ತಿದೆ. ಇತ್ತೀಚೆಗಷ್ಟೇ ಕೆಟಿಎಂ ಸಂಸ್ಥೆಯು 390 ಡ್ಯೂಕ್ ಮಾಲಿಕರಿಗಾಗಿ ಅತಿ ವಿಶೇಷ, ಟ್ರ್ಯಾಕ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಚೆನ್ನೈನ ಇರುಘಾಟ್‌ಕೋಟೈನಲ್ಲಿ ಸ್ಥಿತಗೊಂಡಿರುವ ಮದ್ರಾಸ್ ಮೋಟಾರು ಸ್ಪೋರ್ಟ್ಸ್ ಕ್ಲಬ್ ಟ್ರ್ಯಾಕ್‌ನಲ್ಲಿ ಇದನ್ನು ಏರ್ಪಡಿಸಲಾಗಿತ್ತು.

ಹಾಗೊಂದು ವೇಳೆ ಇದನ್ನೇ ಅದ್ಬುತ ಡ್ರೈವಿಂಗ್ ಎಂದು ಅಂದುಕೊಂಡರೆ ತಪ್ಪಾದಿತು. ಯಾಕೆಂದರೆ ಆಸ್ಟ್ರಿಯಾ ಮೂಲದ ಈ ಸಂಸ್ಥೆಯು ಇದಕ್ಕಿಂತಲೂ ಆದ್ದೂರಿಯಾದ ರೇಸಿಂಗ್ ಏರ್ಪಡಿಸುತ್ತಿದೆ. ಹೌದು, ದೇಶದ ನಂ.1 ಫಾರ್ಮುಲಾ ಒನ್ ರೇಸಿಂಗ್ ಟ್ರ್ಯಾಕ್ ಆಗಿರುವ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಕೆಟಿಎಂ 390 ಡ್ಯೂಕ್ ಮಾಲಿಕರಿಗಾಗಿ ಅತಿ ವಿಶೇಷ ಟ್ರ್ಯಾಕ್ ಡೇ ಹಮ್ಮಿಕೊಳ್ಳುತ್ತಿದೆ.

To Follow DriveSpark On Facebook, Click The Like Button

ಸುರಕ್ಷಿತ ಮತ್ತು ನಿಯಂತ್ರಿತ ಪ್ರದೇಶದಲ್ಲಿ ಚಾಲಕರ ಡ್ರೈವಿಂಗ್ ಕೌಶಲ್ಯವನ್ನು ಪರೀಕ್ಷಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಪರಿಣಿತರು ಚಾಲಕರಿಗೆ ತಮ್ಮ ರೈಡಿಂಗ್ ಕೌಶಲ್ಯ ಸುಧಾರಿಸಿಕೊಳ್ಳಲು ಮಾರ್ಗದರ್ಶನ ನೀಡಲಿದ್ದಾರೆ.

ಕೆಟಿಎಂ ಟ್ರ್ಯಾಕ್ ಡೇ 2014 ಮಾರ್ಚ್ 15ರಂದು ಆಯೋಜನೆಯಾಗಲಿದೆ. ಆಸಕ್ತ ಕೆಟಿಎಂ ಗ್ರಾಹಕರು ತಮ್ಮ ಹೆಸರನ್ನು ಬೆಳಗ್ಗೆ 7ರಿಂದ 8.30ರೊಳಗೆ ನೊಂದಾಯಿಸಿಕೊಳ್ಳಬಹುದಾಗಿದೆ. ಹಾಗೆಯೇ ಚಾಲನಾ ಪರವಾನಗಿ, ವೈಯಕ್ತಿಕ ಹಾಗೂ ವಾಹನ ವಿಮೆ ತಮ್ಮ ಜತೆ ಇಟ್ಟುಕೊಳ್ಳಬೇಕಾಗಿದೆ. ಅಷ್ಟೇ ಅಲ್ಲದೆ ರೈಡಿಂಗ್ ಜಾಕೆಟ್, ಶೂ, ಗ್ಲೋವ್ಸ್ ಮತ್ತು ಹೆಲ್ಮೆಟ್ ಕೂಡಾ ಅಗತ್ಯವಿರುತ್ತದೆ.

KTM Track Day
English summary
KTM will organise their Track Day on 15th of March, 2014. Registrations will begin at 07:00am up to 08:30am, KTM owners will have to carry their valid license, insurance both vehicle and personal, along with riding gear.
Story first published: Tuesday, March 4, 2014, 12:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark