KTM ಕನಸು ಕಾಣುವ ಯುವಕರಿಗೆ ಗುಡ್ ನ್ಯೂಸ್: ತೀರಾ ಕಮ್ಮಿ ಬೆಲೆಗೆ RC 160 ಬಿಡುಗಡೆ

ಜಾಗತಿಕ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಕೆಟಿಎಂ (KTM), ಇಂದು ತನ್ನ RC ಪೋರ್ಟ್‌ಫೋಲಿಯೊವನ್ನು ವಿಸ್ತರಿಸುವ ಮೂಲಕ ಹೊಸ ಕೆಟಿಎಂ ಆರ್‌ಸಿ 160 (KTM RC 160) ಬಿಡುಗಡೆ ಮಾಡಿದೆ. ಇದರ ಪರಿಚಯದೊಂದಿಗೆ, ಕೆಟಿಎಂ ತನ್ನ ಫ್ಯಾಕ್ಟರಿ ರೇಸಿಂಗ್ ಡಿಎನ್‌ಎಯನ್ನು ಎಲ್ಲಾ ಗ್ರಾಹಕರಿಗೆ ಸಿಗುವಂತೆ ಮಾಡಿದೆ. ಟ್ರ್ಯಾಕ್ - ಕೇಂದ್ರಿತ ಪರ್ಫಾಮೆನ್ಸ್ ಹೊಂದಿರುವ ಈ ಬೈಕ್ ಎಲ್ಲರಿಗೂ ಕೈಗೆಟುಕವ ಬೆಲೆಯಲ್ಲಿ ಸಿಗುತ್ತಿದೆ. ಕೆಟಿಎಂ RC 160 ದೇಶಾದ್ಯಂತ ಕೆಟಿಎಂ ಡೀಲರ್‌ಶಿಪ್‌ಗಳಲ್ಲಿ ಈಗ ರೂ. 1,85,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಯುವ ಸವಾರರಿಗಾಗಿ ವಿನ್ಯಾಸಗೊಳಿಸಲಾದ ಕೆಟಿಎಂ ಆರ್‌ಸಿ 160, ಆಕ್ರಮಣಕಾರಿ ಸ್ಟೈಲಿಂಗ್, ಮುಂದಿನ ಪೀಳಿಗೆಯ ವಿನ್ಯಾಸ ಮತ್ತು ರೇಸ್-ಸಿದ್ಧ ಡೈನಾಮಿಕ್ಸ್ ಅನ್ನು ಹೊಂದಿದೆ. ನಿಖರ ನಿರ್ವಹಣೆ, ಉನ್ನತ ಏರೋಡೈನಮಿಕ್ ಮತ್ತು ಪರ್ಫಾಮೆನ್ಸ್ - ಟ್ಯೂನ್ ಮಾಡಲಾದ ಘಟಕಗಳೊಂದಿಗೆ, ಆರ್‌ಸಿ 160 ಪ್ರತಿಯೊಂದು ವಿವರದಲ್ಲೂ ರೇಸ್ ಡಿಎನ್‌ಎಯನ್ನು ಹೊಂದಿದೆ.

ktm-launched-all-new-rc-160-in-india-at-rs-185000

ಕೆಟಿಎಂ ಆರ್‌ಸಿ 160 ವಿಶೇಷತೆಗಳು

ಹೊಚ್ಚ ಹೊಸ ಕೆಟಿಎಂ ಆರ್‌ಸಿ 160 ಫುಲ್ಲಿ - ಫೇರ್ಡ್ ಸ್ಪೋರ್ಟಿ ವಿನ್ಯಾಸದೊಂದಿಗೆ ಟ್ರೆಲ್ಲಿಸ್ ಫ್ರೇಮ್, ತಲೆಕೆಳಗಾದ 37mm ಮುಂಭಾಗದ ಫೋರ್ಕ್‌ಗಳು ಮತ್ತು ಮೊನೊಶಾಕ್ ಹಿಂಭಾಗದ ಸಸ್ಪೆನ್ಷನ್, ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ 17 ಇಂಚಿನ ಅಲಾಯ್ ವೀಲ್‌ಗಳು (110/70-17 ಮುಂಭಾಗ, 140/60 R17 ಹಿಂಭಾಗ), ದೊಡ್ಡ 320 mm ಮುಂಭಾಗ ಮತ್ತು 230 mm ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಡ್ಯುಯಲ್ - ಚಾನೆಲ್ ABS, 13.75 ಲೀಟರ್ ಮೆಟಲ್ ಫ್ಯೂಲ್ ಟ್ಯಾಂಕ್, LED ಹೆಡ್‌ಲ್ಯಾಂಪ್, ಟೈಲ್ - ಲ್ಯಾಂಪ್ ಮತ್ತು ಇಂಡಿಕೇಟರ್‌ಗಳು, ಸ್ಪೋರ್ಟಿ ಸ್ಪ್ಲಿಟ್ ಹ್ಯಾಂಡಲ್‌ಬಾರ್ ಮತ್ತು LCD ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ. ಇದರಲ್ಲಿನ ವರ್ಗ - ಪ್ರಮುಖ ಅತ್ಯಾಧುನಿಕ ತಂತ್ರಜ್ಞಾನವು ಸೂಪರ್‌ಮೊಟೊ ಮೋಡ್‌ನೊಂದಿಗೆ ಡ್ಯುಯಲ್ - ಚಾನೆಲ್ ABS ಹಾಗೂ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಹೊಂದಿದೆ.

ktm-launched-all-new-rc-160-in-india-at-rs-185000

CAN - ಸಕ್ರಿಯಗೊಳಿಸಿದ ಎಲೆಕ್ಟ್ರಾನಿಕ್ ಸಿಸ್ಟಮ್, ನ್ಯಾವಿಗೇಷನ್ ಸಪೋರ್ಟ್ (TA ವೇರಿಯೆಂಟ್‌ನಲ್ಲಿ ಮಾತ್ರ), ಆಲ್ - LED ಲೈಟ್ ಸಿಸ್ಟಮ್, ಎಲೆಕ್ಟ್ರಾನಿಕ್ ಫ್ಯೂಲ್ ಇಂಜೆಕ್ಷನ್ ಒಳಗೊಂಡಿದೆ. ಹಾಗೆಯೇ ಥ್ರಿಲ್ಲಿಂಗ್ ಪರ್ಫಾಮೆನ್ಸ್‌ನೊಂದಿಗೆ ಹೊಸ ಆರ್‌ಸಿ 160 ಯುವ ಪ್ರತಿಭೆಗಳನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ. ಎಲ್ಲಾ ಉತ್ಸಾಹಿಗಳಿಗೆ ಹೆಚ್ಚು ಸಾಧಿಸಬಹುದಾದಂತೆ ಮಾಡುವ ಕೆಟಿಎಂನ ಬದ್ಧತೆಗೆ ಈ ಬೈಕ್ ಸಾಕ್ಷಿಯಾಗಿದೆ ಎಂದು ಕಂಪನಿ ಹೇಳಿದೆ.

ಎಂಜಿನ್ ಬಗ್ಗೆ ಹೇಳುವುದಾದರೆ, ಇದರ 164.2 cc, ಲಿಕ್ವಿಡ್-ಕೂಲ್ಡ್ SOHC ಎಂಜಿನ್, 9500 rpm ನಲ್ಲಿ 19 PS ಪವರ್ ಮತ್ತು 7500 rpm ನಲ್ಲಿ 15.5 Nm ಟಾರ್ಕ್ ಹೊರಹಾಕುತ್ತದೆ. 10,200 rpm ರೆಡ್‌ಲೈನ್‌ನೊಂದಿಗೆ ಹೈ-ರಿವಿಂಗ್ ಪರ್ಫಾಮೆನ್ಸ್ ಹಾಗೂ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 6 - ಸ್ಪೀಡ್ ಗೇರ್‌ಬಾಕ್ಸ್ ಒಳಗೊಂಡಿದ್ದು, 118 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ktm-launched-all-new-rc-160-in-india-at-rs-185000

ಕೆಟಿಎಂ ಆರ್‌ಸಿ 160 ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‌ನ ಪ್ರೋಬೈಕಿಂಗ್ ಅಧ್ಯಕ್ಷ ಮಾಣಿಕ್ ನಂಗಿಯಾ, "ಹೊಸ ಆರ್‌ಸಿ 160 ನೊಂದಿಗೆ, ನಾವು ಅದೇ ಟ್ರ್ಯಾಕ್ - ಬ್ರೀಡ್ ಪಾತ್ರವನ್ನು ವ್ಯಾಪಕ ಪ್ರೇಕ್ಷಕರಿಗೆ ತರುತ್ತಿದ್ದೇವೆ. ಇದು ಫ್ಯಾಕ್ಟರಿ ರೇಸಿಂಗ್‌ನ ರೋಮಾಂಚನವನ್ನು ಸೆರೆಹಿಡಿಯುವ ಮೋಟಾರ್‌ಸೈಕಲ್ ಆಗಿದ್ದು, ಎರಡು ಚಕ್ರಗಳಲ್ಲಿ ವೇಗ, ನಿಯಂತ್ರಣ ಮತ್ತು ಆತ್ಮವಿಶ್ವಾಸದ ಕನಸು ಕಾಣುವ ಪ್ರತಿಯೊಬ್ಬ ಯುವ ಸವಾರರಿಗೂ ಇದನ್ನು ಖರೀದಿಸಬಹುದಾಗಿದೆ ಎಂದರು.

ಒಟ್ಟಾರೆ ಕೆಟಿಎಂ ಎಂದರೆ ದುಬಾರಿ ಬೈಕ್ ಎಂದು ಖರೀದಿಸಲು ಹಿಂದೇಟು ಹಾಕುತ್ತಿದ್ದವರಿಗೆ ಕೈಗಟುಕುವ ಬೆಲೆಯಲ್ಲಿ 160ಸಿಸಿ ಎಂಜಿನ್‌ನೊಂದಿಗೆ ಹೈ-ಪರ್ಫಾಮೆನ್ಸ್ ನೀಡುವ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ. ಕೇವಲ ರೂ. 1,85,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಈಗ ಅಂತರಾಷ್ಟ್ರೀಯ ಬ್ರಾಂಡ್ ಕೆಟಿಎಂ ಬೈಕ್ ಅನ್ನು ಖರೀದಿಸುವ ಕನಸಿರುವ ಯುವಕರು ನನಸು ಮಾಡಿಕೊಳ್ಳಬಹುದು.

More from DriveSpark

Article Published On: Thursday, January 8, 2026, 12:23 [IST]
English summary
Ktm launched all new rc 160 in india at rs 185000
Read more on ktm new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+