ಅತಿ ಶೀಘ್ರದಲ್ಲಿ ಮಹೀಂದ್ರ ಮೊಜೊ ಲಾಂಚ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ, ಸದ್ಯದಲ್ಲೇ ಎಲ್ಲ ಹೊಸತನದಿಂದ ಕೂಡಿದ ಮೊಜೊ ಬೈಕನ್ನು ಲಾಂಚ್ ಮಾಡಲಿದೆ.

ಈ ಹಿಂದೆ 2010ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಮೊಜೊ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರ ಮನ ಗೆಲ್ಲುವಲ್ಲಿ ವಿಫಲವಾಗಿತ್ತು. ಇದರಂತೆ ನೋಟ ಹಾಗೂ ವೈಶಿಷ್ಟ್ಯಗಳಲ್ಲಿ ಹಲವಾರು ಬದಲಾವಣೆಗಳ ಬಳಿಕ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಮಾಡಲಾಗಿತ್ತು.

Mahindra Mojo

ಪ್ರಸ್ತುತ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣಿಗೆ ಸೆರೆ ಸಿಕ್ಕಿರುವ ಮೊಜೊ ಸದ್ಯದಲ್ಲೇ ದೇಶದ ರಸ್ತೆಯನ್ನು ಪ್ರವೇಶಿಸಲಿದೆ. ವರದಿಗಳ ಪ್ರಕಾರ ಮಹೀಂದ್ರದ ಅತ್ಯಂತ ಶಕ್ತಿಶಾಲಿ ಬೈಕ್ ಎಂದೆನಿಸಿಕೊಂಡಿರುವ ಮೊಜೊ 300 ಸಿಸಿ ಬೈಕ್ ಮುಂಬರುವ ಜೂನ್ ವೇಳೆಯಾಗುವಾಗ ಬಿಡುಗಡೆಯಾಗಲಿದೆ.

ಹೊಸ ಬೈಕ್‌ನಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಹೆಡ್ ಲೈಟ್ ಜತೆಗೆ ಎಲ್ಲ ಹೊಸತನದ ಡಿಜಿಟಲ್ ಇನ್ಸ್ಟ್ರಮೆಂಟ್ ಹಾಗೂ ಅನಾಲಾಗ್ ಟ್ಯಾಕೋಮೀಟರ್ ಜೋಡಣೆಯಾಗಲಿದೆ. ಇದರಲ್ಲಿ ಮುಂದಗಡೆ ಅಪ್‌ಸೈಡ್ ಡೌನ್ (ಯುಎಸ್‌ಡಿ) ಫ್ರಂಟ್ ಫಾರ್ಕ್ ಹಾಗೂ ಹಿಂದುಗಡೆ ಮೊನೊಶಾಕ್ ಲಭ್ಯವಾಗಲಿದೆ. ಹಾಗೆಯೇ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ.

ಅಂದ ಹಾಗೆ ಮಹಿಂದ್ರ ಮೊಜೊ, 295 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 28 ಅಶ್ವಶಕ್ತಿ (25 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂತಿಮವಾಗಿ ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

More from DriveSpark

Article Published On: Tuesday, May 20, 2014, 14:59 [IST]
English summary
Now a little birdie tells us that Mahindra expected to launch their most powerful bike Mojo in India by mid-June.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+