ಮಹೀಂದ್ರ ತೆಕ್ಕೆಗೆ ಐಕಾನಿಕ್ ಪ್ಯೂಜೊ ಸ್ಕೂಟರ್?

By Nagaraja

ದೇಶದ ನಂ.1 ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಮತ್ತು ಅಗ್ರಗಣ್ಯ ವಿದ್ಯುತ್ ಚಾಲಿತ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಬಹುತೇಕ ಎಲ್ಲ ವಿಭಾಗದ ವಾಹನ ಮಾರುಕಟ್ಟೆಯಲ್ಲೂ ತನ್ನ ಸಾನಿಧ್ಯ ಸ್ಥಾಪಿಸಿದೆ.

ಮಹೀಂದ್ರ ಸ್ಕೂಟರ್‌ಗಳಿಗೆ ದೇಶದಲ್ಲಿ ತನ್ನದೇ ಆದ ಮಾರಾಟ ವಲಯವಿದೆ. ಇತರ ಪ್ರತಿಸ್ಪರ್ಧಿಗಳಿಗೆ ಗಮನಿಸಿದಾಗ ಈ ಪ್ರಭಾವ ವಲಯ ಸ್ವಲ್ಪ ಕಡಿಮೆ ಎನಿಸಿದರೂ ಗಮನಾರ್ಹ ಮಾರಾಟ ಸಾಧಿಸುವಲ್ಲಿ ಮಹೀಂದ್ರ ಟು ವೀಲರ್ ವಿಭಾಗ ಯಶ ಕಂಡಿದೆ.


ಉಪಯುಕ್ತ ವಾಹನಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಮಹೀಂದ್ರ, ಫ್ರಾನ್ಸ್‌ನ ಐಕಾನಿಕ್ ಸಂಸ್ಥೆಯಾಗಿರುವ ಪ್ಯೂಜೊ ದ್ವಿಚಕ್ರ ವಿಭಾಗ ಖರೀದಿಸುವ ಯೋಜನೆ ಹೊಂದಿದೆ.

ಇದು ದೇಶದಲ್ಲಿ ಇನ್ನಷ್ಟು ಆಕರ್ಷಕ ಮಾದರಿಗಳನ್ನು ಪರಿಚಯಿಸಲು ಸಂಸ್ಥೆಗೆ ನೆರವಾಗಲಿದೆ. ವರದಿಗಳ ಪ್ರಕಾರ ಪ್ಯೂಜೊ ಸ್ಕೂಟರ್ ವಿಭಾಗ ಖರೀದಿಸಲಿರುವ ಮಹೀಂದ್ರ, ಜಾಗತಿಕವಾಗಿ ತನ್ನ ಮಾರಾಟವನ್ನು ವೃದ್ಧಿಸಿಕೊಳ್ಳಲಿದೆ.

Peugeot Scooter

ಸ್ಟೈಲಿಷ್ ಸ್ಕೂಟರ್ ನಿರ್ಮಿಸುವುದಲ್ಲಿ ಹೆಸರು ವಾಸಿಯಾಗಿರುವ ಪ್ಯೂಜೊ ಮಹೀಂದ್ರ ಈ ವಿಭಾಗದಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸಲು ನೆರವಾಗಲಿದೆ. ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ಇನ್ನಷ್ಟು ಬರಬೇಕಾಗಿದೆ.

More from DriveSpark

Article Published On: Friday, September 19, 2014, 8:05 [IST]
English summary
Mahindra & Mahindra is India's largest manufacturer and seller of utility vehicles. They also sell tractors, trucks and also two wheelers. The Indian manufacturer has an array of motorcycles and scooters on offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+