ಮಹೀಂದ್ರ ಜಾಗತಿಕ ಸ್ಕೂಟರ್ 'ಗಸ್ಟೊ' ಬಿಡುಗಡೆಗೆ ರೆಡಿ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ ಟು ವೀಲರ್ಸ್ ಸಂಸ್ಥೆಯು ಅತಿ ನೂತನ 'ಗಸ್ಟೊ' ಸ್ಕೂಟರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಇದು ಕೇವಲ ಭಾರತೀಯ ಮಾರುಕಟ್ಟೆಯನ್ನಷ್ಟೇ ಅಲ್ಲದೆ ವಿದೇಶಗಳಲ್ಲೂ ಬಿಡುಗಡೆ ಕಾಣಲಿದೆ.

ಮಹೀಂದ್ರದ ಬಹು ನಿರೀಕ್ಷಿತ ಜಾಗತಿಕ ಸ್ಕೂಟರ್ ಜಿ101 ಎಂಬ ಕೋಡ್ ಹೆಸರು ಪಡೆದುಕೊಂಡಿತ್ತು. ಇದು ಎಂ-ಟೆಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು ಇದರ ಮುಂದುವರಿದ ಎಂಜಿನಿಯರಿಂಗ ವೈಶಿಷ್ಟ್ಯಗಳು ಇಟಲಿ ಶೈಲಿಯನ್ನು ಹೊಂದಿದೆ.

mahindra gusto

ಹೊಸ ಗಸ್ಟೊ ಸ್ಕೂಟರ್ ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಸೆಪ್ಟೆಂಬರ್ 29ರಂದು ಬಿಡುಗಡೆಯಾಗಲಿದೆ. ತದಾ ಬಳಿಕ ಶೇಷ ಭಾರತ, ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾ ಖಂಡಗಳನ್ನು ಮುಂದಿನ ಕೆಲವೇ ತಿಂಗಳೊಳಗೆ ಪ್ರವೇಶಿಸಲಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮಹೀಂದ್ರ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿರುವ ರಾಜೇಶ್ ಜೆಜುರಿಕರ್, ನಾವು ಜಾಗತಿಕ ಸ್ಕೂಟರ್ ಗಸ್ಟೊ ಬಿಡುಗಡೆ ಮಾಡಲು ತಯಾರಾಗಿದ್ದು, ಇದನ್ನು ಪುಣೆಯ ಆರ್ ಆಂಡ್ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಗಸ್ಟೊ ಎಂಬ ಪದವು ಸ್ವಾತಂತ್ರ್ಯ ಸ್ಪೂರ್ತಿಯನ್ನು ಸಂಕೇತಿಸುತ್ತಿದೆ ಎಂದಿದ್ದಾರೆ.

mahindra gusto

More from DriveSpark

Article Published On: Wednesday, September 24, 2014, 12:30 [IST]
English summary
Mahindra Two Wheelers Limited, a part of the US $16.5 billion Mahindra Group, announced that its much awaited global scooter, code named G101, will be called ‘GUSTO’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+