ಪ್ರಸಕ್ತ ಸಾಲಿನಲ್ಲೇ ಮಹೀಂದ್ರದಿಂದ 3 ಹೊಸ ಮಾದರಿ ಲಾಂಚ್
ಸದ್ಯ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ದ್ವಿಚಕ್ರ ಬ್ರಾಂಡ್ ಆಗಿರುವ ಮಹೀಂದ್ರ ಟು ವೀಲರ್ಸ್, ಪ್ರಸಕ್ತ ಸಾಲಿನಲ್ಲಿ ಮೂರು ನೂತನ ಬೈಕ್‌ಗಳನ್ನು ಲಾಂಚ್ ಮಾಡುವ ಇರಾದೆ ಹೊಂದಿದೆ.
ಈ ಮೂಲಕ ತಿಂಗಳಲ್ಲಿ 30,000 ಯುನಿಟ್‌ಗಳಿಂದ 35,000 ಯುನಿಟ್ ಮಾರಾಟ ಮಾಡುವ ಗುರಿ ಹೊಂದಿರುವುದಾಗಿ ಮಹೀಂದ್ರ ಟು ವೀಲರ್ಸ್ ಅಧ್ಯಕ್ಷ ಡಾ. ಪವನ್ ಗೋನ್ಖಾ ತಿಳಿಸಿದ್ದಾರೆ.

ಅಂದ ಹಾಗೆ ಮಹೀಂದ್ರದ ನೂತನ ಮಾದರಿಗಳು ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಹಾಗೆಯೇ ರಫ್ತು ಸೇರಿದಂತೆ ವಾರ್ಷಿಕವಾಗಿ ದಶಲಕ್ಷ ಯುನಿಟ್‌ಗಳ ಮಾರಾಟವನ್ನು ಗುರಿಯನ್ನಿರಿಸಿಕೊಂಡಿದೆ.
ಮಹೀಂದ್ರ ನೂತನ ಮಾದರಿಗಳಲ್ಲಿ 300ಸಿಸಿ ಮೊಜೊ ಜೊತೆಗೆ ಸ್ಕೂಟರ್ ಕೂಡಾ ಸೇರಿಕೊಂಡಿರಲಿದೆ. ಇದು ಆಕ್ಟಿವಾ 110ಸಿಸಿ ಪ್ರತಿಸ್ಪರ್ಧಿಯಾಗಿರಲಿದ್ದು, 40,000 ರು.ಗಳಿಂದ 50,000 ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗಲಿದೆ.
ಮಹೀಂದ್ರ ಸೆಂಚುರೊದಲ್ಲಿ ಆಳವಡಿಸಲಾಗಿರುವ ಕಾರಿನಲ್ಲಿರುವಂತಹ ಆಧುನಿಕ ತಂತ್ರಜ್ಞಾನವು ಯಶಸ್ಸಿಗೆ ಹೇತುವಾಗಿತ್ತು. ಈ ಸಾಲಿಗೆ ಮಗದೊಂದು ಬೈಕ್ ಪರಿಚಯಿಸುವ ಯೋಜನೆಯನ್ನು ಮಹೀಂದ್ರ ಹೊಂದಿದೆ.


Click it and Unblock the Notifications








