ನಿಮ್ಮೂರಿಗೂ ಬರುತ್ತೆ ಹೋಂಡಾ 'ಮೊಬೈಲ್ ಸರ್ವಿಸ್ ವ್ಯಾನ್'
ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲೂ ಸಮರ್ಥವಾದ ಸರ್ವೀಸ್ ಒದಗಿಸುವ ನಿಟ್ಟಿನಲ್ಲಿ ಹೊಸತಾದ 'ಮೊಬೈಲ್ ಸರ್ವಿಸ್ ವ್ಯಾನ್' ಸೇವೆಯನ್ನು ಪ್ರಾರಂಭಿಸಿದೆ.
ಇದರ ಸಂಪೂರ್ಣ ಪ್ರಯೋಜನವನ್ನು ಗ್ರಾಮೀಣ ಪ್ರದೇಶದಲ್ಲಿರುವ ಗ್ರಾಹಕರು ಗಿಟ್ಟಿಸಿಕೊಳ್ಳಬಹುದಾಗಿದೆ. ಹೋಂಡಾ 2.0 ಬ್ಲೂ ಪ್ರಿಂಟ್ ನೀತಿಯ ಭಾಗವಾಗಿ ಯೂನಿಕ್ ಆದ ಮೊಬೈಲ್ ಸರ್ವೀಸ್ ವ್ಯಾನ್ ಸೇವೆಯನ್ನು ಆರಂಭಿಸಲಾಗಿದೆ.

ಹೋಂಡಾ ಹೊಸ ಸರ್ವೀಸ್ ವ್ಯಾನ್‌ನಲ್ಲಿ 3ಎಸ್ ಮಾರಾಟ ಸೌಲಭ್ಯ, ಸರ್ವಿಸ್ ಹಾಗೂ ಬಿಡಿಭಾಗಗಳಿರಲಿದೆ. ಈ ಮೂಲಕ ದೂರದ ಗ್ರಾಮ ಪ್ರದೇಶದ ಗ್ರಾಹಕರನ್ನು ಸೆಳೆಯುವ ಇರಾದೆಯನ್ನಿಟ್ಟುಕೊಂಡಿದೆ.
ದೇಶದ್ಯಾಂತ ಪ್ರಸಕ್ತ ವರ್ಷಾಂತ್ಯಕ್ಕೆ ಇಂತಹ 11 ಮೊಬೈಲ್ ಸರ್ವೀಸ್ ವ್ಯಾನ್ ಸೇವೆಗೆ ಮುಕ್ತಗೊಳಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇದರಲ್ಲಿ ಗ್ರಾಹಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯು ಇರಲಿದೆ. ಅಲ್ಲದೆ ತನ್ನದೇ ಆದ ಖಾಸಗಿ ವಿಳಾಸವನ್ನು ಹೊಂದಿರಲಿದೆ.
ಈ ಮೊಬೈಲ್ ಸರ್ವೀಸ್ ವ್ಯಾನ್‌ನಲ್ಲಿ ಒಂದೇ ಸಮಯಕ್ಕೆ ಎರಡು ದ್ವಿಚಕ್ರ ವಾಹನಗಳನ್ನು ಸರ್ವೀಸ್ ಮಾಡಬಹುದಾಗಿದೆ. ಈ ಮೂಲಕ ಗರಿಷ್ಠ ಮಾಲಿಕತ್ವ ಅನುಭವವನ್ನು ಕಾಯ್ದುಕೊಳ್ಳಲಾಗುವುದು.


Click it and Unblock the Notifications








