ಅಂತಿಮ ಹಂತ ತಲುಪಿದ ರಾಷ್ಟ್ರೀಯ ಸುರಕ್ಷತಾ ಚಾಲನೆ

By Nagaraja

ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ ಅಂಗವಾಗಿ ನಡೆಯುತ್ತಿರುವ 'ರಾಷ್ಟ್ರೀಯ ಸುರಕ್ಷತಾ ಚಾಲನೆ' ದೇಶದೆಲ್ಲೆಡೆ ಸುತ್ತಾಡುತ್ತಾ ತನ್ನ ಅಂತಿಮ ಹಂತವನ್ನು ತಲುಪಿದೆ. ದೇಶದ 20 ನಗರಗಳಲ್ಲಾಗಿ 5500ರಷ್ಟು ಕೀ.ಮೀ. ಕ್ರಮಿಸಿರುವ ನ್ಯಾಷನಲ್ ಸೇಫ್ಟಿ ರೈಡ್ ಇದೀಗ ಕೊಲ್ಕತ್ತಾ ನಗರ ಪ್ರವೇಶ ಪಡೆದಿದೆ.

ದಕ್ಷಿಣ ಏಷ್ಯಾದ ಅತಿ ದೊಡ್ಡ ಬೈಕ್ ಹಬ್ಬ ಎಂದು ಪರಿಗಣಿಸಲ್ಪಟ್ಟಿರುವ ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ, ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಮತ್ತು ಈವೆಂಟ್ ಕ್ಯಾಪಿಟಲ್ ಸಹಯೋಗದಲ್ಲಿ ಆಯೋಜನೆಯಾಗುತ್ತಿದೆ.

national safety ride

ಆಗಸ್ಟ್ 31ರಂದು ಇಂಡಿಯಾ ಬೈಕ್ ಫೇಸ್ಟಿವಲ್ ಅಂಗವಾಗಿ ನ್ಯಾಷನಲ್ ಸೇಫ್ಟಿ ರೈಡ್‌ಗೆ ಭಾರತೀಯ ಕ್ರಿಕೆಟಿಗ ಇಶಾಂತ್ ಶರ್ಮಾ ಚಾಲನೆ ನೀಡಿದ್ದರು. ಇದು ಈಗಾಗಲೇ ದೆಹಲಿ, ಜೈಪುರ, ಅಜ್ಮೆರ್, ಉದಯ್‌ಪುರ್, ಅಹಮಾದಾಬಾದ್, ಸೂರತ್, ವಂಪಿ, ಮುಂಬೈ, ಪುಣೆ, ಬೆಂಗಳೂರು, ಊಟಿ, ಕೊಚ್ಚಿ, ಚೆನ್ನೈ, ರಾಜಮುಂಡ್ರೆ, ಬರ್ಮಪುರ ಮತ್ತು ಭದ್ರಕ್ ಮಾರ್ಗವಾಗಿ ಕೋಲ್ಕತ್ತಾ ತಲುಪಿದೆ.

ಈ ಸಂದರ್ಭದಲ್ಲಿ ಬೈಕ್ ಉತ್ಸಾಹಿಗಳೊದಿಗೆ ಬೆರೆಯುವ ಅವಕಾಶವನ್ನು ಸವಾರಿಗಳು ಪಡೆದಿದ್ದರು. ಅಲ್ಲದೆ ಸುರಕ್ಷಿತ ಚಾಲನೆ ಮತ್ತು ಹೆಲ್ಮೆಟ್ ಧರಿಸುವುದರ ಬಗ್ಗೆ ಅರಿವು ಮೂಡಿಸಲಾಯಿತು. ಇದೀಗ ಕೋಲ್ಕತ್ತಾದಿಂದ ಧಾನ್‌ಬಂದ್, ವಾರಣಾಸಿ, ಕಾನ್ಪರು, ನೋಯ್ಡಾ, ಚಂಡೀಗಡ ಮಾರ್ಗವಾಗಿ ಸೆಪ್ಟೆಂಬರ್ 29ರಂದು ದೆಹಲಿಯನ್ನು ತಲುಪಲಿದೆ. ಈ ಮೂಲಕ ಒಟ್ಟು 8170 ಕೀ.ಮೀ. ಕ್ರಮಿಸಲಿದೆ.

ಪ್ರಮುಖವಾಗಿಯೂ ಟ್ರಯಂಪ್ ಬೈಕ್‌ಗಳನ್ನು ರಾಷ್ಟ್ರೀಯ ಸುರಕ್ಷತಾ ಚಾಲನೆಗಾಗಿ ಬಳಕೆ ಮಾಡಲಾಗುತ್ತಿದೆ. ಅಂತೆಯೇ ಇಂಡಿಯಾ ಬೈಕ್ ಫೇಸ್ಟಿವರ್ ಅಕ್ಟೋಬರ್ 4 ಹಾಗೂ 5ರಂದು ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನೆರವೇರಲಿದೆ.

More from DriveSpark

Article Published On: Tuesday, September 23, 2014, 12:36 [IST]
English summary
The "Bike Festival of India - National Safety Ride" - a cross-country expedition to promote responsible and safe biking as well as the use of helmets, today reached its final leg after covering 5500 kms and 20 Indian cities and villages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+