ಹೀರೊ ಕರಿಜ್ಮಾ, ಝಡ್‌ಎಂಆರ್ ಅನಾವರಣ; ಬುಕ್ಕಿಂಗ್ ಆರಂಭ
ಬಹುನಿರೀಕ್ಷಿತ ಹೀರೊ ಕರಿಜ್ಮಾ ಹಾಗೂ ಕರಿಜ್ಮಾ ಝಡ್‌ಎಂಆರ್ ಮಾದರಿಗಳು ಸದ್ಯದಲ್ಲೇ ರಸ್ತೆ ಪ್ರವೇಶಿಸಲಿದೆ. ಇದರಂತೆ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಆನ್ ರೋಡ್ ದರ ಮಾಹಿತಿ ಇಂತಿದೆ:
2014 ಹೀರೊ ಕರಿಜ್ಮಾ ಆರ್ - 91,320 ರು. (ದೆಹಲಿ)
2014 ಹೀರೊ ಕರಿಜ್ಮಾ ಆರ್ - 93,119 (ಮುಂಬೈ)
2014 ಹೀರೊ ಕರಿಜ್ಮಾ ಝಡ್‌ಎಂಆರ್ - 114,210 ರು. (ದೆಹಲಿ)
2014 ಹೀರೊ ಕರಿಜ್ಮಾ ಝಡ್‌ಎಂಆರ್ - 116,630 (ಮುಂಬೈ)

ನೂತನ ಕರಿಜ್ಮಾ ಸಿಂಗಲ್ ಸಿಲಿಂಡರ್ 223 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 19 ಅಶ್ವಶಕ್ತಿ, 19.35 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಅದೇ ಹೊತ್ತಿಗೆ ಝಡ್‌ಎಂಆರ್ 20 ಅಶ್ವಶಕ್ತಿ (19.35 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ನಿಮ್ಮ ಮಾಹಿತಿಗಾಗಿ ಹಿಂದಿನ ಕರಿಜ್ಮಾ ಆವೃತ್ತಿಯು ಇದಕ್ಕೆ ಸಮಾನವಾದ 223 ಸಿಸಿ ಎಂಜಿನ್ ಪಡೆದುಕೊಂಡಿದ್ದರೂ 17.35 ಅಶ್ವಶಕ್ತಿ (18.35 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.
ಈ ಫೇರ್ಡ್ ಕರಿಜ್ಮಾ ಝಡ್‌ಎಂಆರ್, ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಹ ಪಡೆಯಲಿದೆ. ಹಾಗೆಯೇ ಕೇವಲ 3.6 ಸೆಕೆಂಡುಗಳಲ್ಲೇ 0-60 ಕೀ.ಮೀ. ಅಂತೆಯೇ ಗರಿಷ್ಠ ಗಂಟೆಗೆ 135-140 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.
ಅಂದ ಹಾಗೆ ಹೀರೊ ಕರಿಜ್ಮಾ ಝಡ್ ಹಾಗೂ ಝಡ್‌ಎಂಆರ್ ಮಾದರಿಗಳು ಅನುಕ್ರಮವಾಗಿ ಪಲ್ಸರ್ 220 ಹಾಗೂ ಪಲ್ಸರ್ 200 ಎನ್‌ಎಸ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.


Click it and Unblock the Notifications








