ಇಂಡಿಯನ್‌ನಿಂದ ಸ್ಕೌಟ್ ಬೈಕ್ ಅನಾವರಣ, ಬುಕ್ಕಿಂಗ್ ಆರಂಭ
ಹೇಗೆ ಐಷಾರಾಮಿ ಕಾರು ಬ್ರಾಂಡ್‌ಗಳು ನಿಧಾನವಾಗಿ ಭಾರತ ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸುತ್ತಿದೆಯೋ ಅದೇ ರೀತಿ ಐಷಾರಾಮಿ ದ್ವಿಚಕ್ರ ವಾಹನಗಳು ಸಹ ಕಳೆದ ಕೆಲವು ಸಮಯಗಳಿಂದ ದೇಶದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದೆ.
ಹಾಗಿರುವಾಗ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಅಮೆರಿಕ ಮೂಲದ ಐಕಾನಿಕ್ ದ್ವಿಚಕ್ರ ಬ್ರಾಂಡ್ ಆಗಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ತನ್ನ ಕ್ರೂಸರ್ ರೇಂಜ್ ಬೈಕ್‌ಗಳೊಂದಿಗೆ ಗಮನ ಸೆಳೆದಿದೆ.

ಆಫ್ ರೋಡ್ ದೈತ್ಯ ಪೊಲರಿಸ್ ಸಹಭಾಗಿತ್ವದಲ್ಲಿ ಭಾರತ ಪ್ರವೇಶ ಪಡೆದಿರುವ ಇಂಡಿಯನ್ ಮೋಟಾರ್‌ಸೈಕಲ್ ಹೊಸತಾದ ಸ್ಕೌಟ್ ಬೈಕ್ ಅನಾವರಣಗೊಳಿಸಿದ್ದು, ಬುಕ್ಕಿಂಗ್ ಪ್ರಕ್ರಿಯೆ ಸಹ ಆರಂಭಿಸಿದೆ. ಈ ಸಂದರ್ಭದಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೇ ಚೀಫ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿರುವುದನ್ನು ನೆನಪಿಕೊಳ್ಳಬಹುದು.
ಬರೋಬ್ಬರಿ 1131 ಸಿಸಿ ಲಿಕ್ವಿಡ್ ಕೂಲ್ಡ್ ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸ್ಕೌಟ್ ಕ್ರೂಸರ್ ಬೈಕ್ 244 ಕೆ.ಜಿ ತೂಕವನ್ನು ಹೊಂದಿದೆ. ಇದು ಗರಿಷ್ಠ 100 ಅಶ್ವಶಕ್ತಿ (97.7 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂದ ಹಾಗೆ ಸ್ಕೌಟ್ ಬೈಕ್‌ನ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ದರ 11,99,000 ರು.ಗಳಾಗಿರಲಿದೆ. ಅಲ್ಲದೆ ವಿತರಣೆಯು ಸದ್ಯದಲ್ಲೇ ಆರಂಭವಾಗಲಿದೆ.


Click it and Unblock the Notifications








