ಅಮೆರಿಕ, ಬ್ರಿಟನ್ ಟಾರ್ಗೆಟ್ ಮಾಡಲಿರುವ ಎನ್‌ಫೀಲ್ಡ್
ಕ್ಲಾಸಿಕ್ ಮೋಟಾರುಸೈಕಲ್ ಎಂದೇ ಪ್ರಖ್ಯಾತಿ ಗಿಟ್ಟಿಸಿಕೊಂಡಿರುವ ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಬರ ಬರುತ್ತಾ ಕಳೆಗುಂದುತ್ತಿದೆ ಎಂಬ ಆತಂಕ ಮಡುಗಟ್ಟಿರುವ ನಡುವೆವೇ ಪುಟಿದೆದ್ದಿರುವ ಈ ದೈತ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ನೂತನ 250ಸಿಸಿಯಿಂದ ಆರಂಭವಾಗಿ 750 ಸಿಸಿ ರೇಂಜ್ ವರೆಗಿನ ಬೈಕ್‌ಗಳನ್ನು ಉತ್ಪಾದಿಸುವುದಾಗಿ ತಿಳಿಸಿದೆ.
ಈ ದಶಕದ ಅಂತ್ಯದ ವರೆಗೂ ಮಿಡ್-ಸೈಜ್ ಮೋಟಾರುಸೈಕಲ್‌ಗಳತ್ತ ಹೆಚ್ಚು ಗಮನ ಕೇಂದ್ರಿಕರಿಸುವುದಾಗಿ ಸ್ಪಷ್ಟಪಡಿಸಿರುವ ರಾಯಲ್ ಎನ್‌ಫೀಲ್ಡ್ ಮಾತೃಸಂಸ್ಥೆಯಾಗಿರುವ ಐಚರ್, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷದೊಳಗೆ 600 ಕೋಟಿ ರುಪಾಯಿಗಳ ಬೃಹತ್ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಇದು ಎನ್‌ಫೀಲ್ಡ್ ಬೈಕ್‌ಗಳ ಅಧ್ಯಯನ ಹಾಗೂ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

ಹಾಗಿದ್ದರೂ ಭಾರತೀಯರಿಗೆ ಕಹಿ ಸುದ್ದಿಯೆಂಬಂತೆ ಸಂಸ್ಥೆಯ ಪ್ರಾಥಮಿಕ ಟಾರ್ಗೆಟ್ ಅಮೆರಿಕ ಹಾಗೂ ಬ್ರಿಟನ್ ದೇಶಗಳಾಗಿರಲಿದೆ. ರಾಯಲ್ ಎನ್‌ಫೀಲ್ಡ್ ಇಂತಹ ದೇಶಗಳ ಗ್ರಾಹಕರು ಮಿಡ್ ರೇಂಜ್ ಬೈಕ್‌ಗಳನ್ನು ಖರೀದಸಲು ಹೆಚ್ಚು ಉತ್ಸಾಹಿತರಾಗಿದ್ದಾರೆ ಎಂದಿದೆ.
ಅಂದ ಮಾತ್ರಕ್ಕೆ ಮಿಡ್ ರೇಂಜ್ ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದಿಲ್ಲ ಎಂದರ್ಥವಲ್ಲ. ನಿಕಟ ಭವಿಷ್ಯದಲ್ಲಿ ಭಾರತದಲ್ಲೂ ಹೆಚ್ಚು ಪವರ್‌ಪುಲ್ ಬೈಕ್‌ಗಳು ಪರಿಚಯವಾಗಲಿದೆ.


Click it and Unblock the Notifications








