ಬುಲೆಟ್ ರಾಜ ರಾಯಲ್ ಎನ್‌ಫೀಲ್ಡ್ ಸರ್ವಕಾಲಿಕ ದಾಖಲೆ
ಇತ್ತೀಚೆಗಷ್ಟೇ ದೇಶದ ಅತಿ ಬೇಡಿಕೆಯ ಬುಲೆಟ್ ತಯಾರಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್, ಹೊಸ ಲಾಂಛನ, ಬಣ್ಣಗಳ ಆಯ್ಕೆಗಳನ್ನು ಹೊರತಂದಿತ್ತು. ಇದರ ಬೆನ್ನಲ್ಲೇ 2014 ಜೂನ್ ತಿಂಗಳ ಮಾರಾಟದಲ್ಲೂ ಸರ್ವಕಾಲಿಕ ಸಾಧನೆ ಮಾಡಿದೆ.
ಚೆನ್ನೈ ಮೂಲದ ಈ ಸಂಸ್ಥೆಯು ದೇಶೀಯ ಹಾಗೂ ರಫ್ತು ಸೇರಿದಂತೆ 25,303 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಶೇಕಡಾ 83ರಷ್ಟು ಭರ್ಜರಿ ಏರಿಕೆ ಸಾಧಿಸಿದೆ.

ಕಳೆದ ವರ್ಷ ಅಂದರೆ 2013 ಜೂನ್ ತಿಂಗಳ ಇದೇ ಅವಧಿಯಲ್ಲಿ 13,806 ಯುನಿಟ್ ಮಾತ್ರ ಮಾರಾಟವಾಗಿದ್ದವು. ಈ ಎಲ್ಲ ಶ್ರೇಯ ಐಚೆರ್ ಮೋಟಾರ್ಸ್ ಅಧೀನತೆಯಲ್ಲಿರುವ ಓರಗಡಂ ಘಟಕಕ್ಕೆ ಸಲ್ಲುತ್ತದೆ.
ಪ್ರಸ್ತುತ ಘಟಕದಲ್ಲೀಗ ಪ್ರತಿ ತಿಂಗಳು 10,000 ಯುನಿಟ್‌ಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದೆ. ಇದು ದೇಶಿಯ ಜೊತೆಗೆ ರಫ್ತು ಬೇಡಿಕೆಯನ್ನು ಪೂರೈಸುವಲ್ಲಿ ನೆರವಾಗಿದೆ. ರಾಯಲ್ ಎನ್‌ಫೀಲ್ಡ್‌ನ 350 ಹಾಗೂ 500 ಸಿಸಿ ಬೈಕ್‌ಗಳು ಯುವ ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ.


Click it and Unblock the Notifications