16 ವರ್ಷದ ಶಾಲಾ ಮಕ್ಕಳಿಗೆ ಗೇರ್ ರಹಿತ ಸ್ಕೂಟರ್ ಲೈಸನ್ಸ್
ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳಲು ಕನಿಷ್ಠ ಪ್ರಾಯ ಪರಿಧಿ 18 ತುಂಬಿರಬೇಕು. ಇದರಿಂದ 16 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಅತ್ಯುತ್ತಮ ಚಾಲನೆಯನ್ನು ಕರಗತ ಮಾಡಿಕೊಂಡಿರುವ ಹೊರತಾಗಿಯೂ ಡ್ರೈವಿಂಗ್ ಲೈಸನ್ಸ್ ಪಡೆಯುವ ಹಕ್ಕಿನಿಂದ ವಂಚಿತರಾಗುತ್ತಾರೆ.
ಆದರೆ ಇಂತಹದೊಂದು ಆಲೋಚನೆಗೆ ಮುಂದಾಗಿರುವ ಟ್ರಾಫಿಕ್ ಪೊಲೀಸ್ ವಿಭಾಗವು, 16 ವರ್ಷ ಮೇಲ್ಪಟ್ಟ ಶಾಲಾ ಮಕ್ಕಳಿಗೆ ಗೇರ್ ರಹಿತ ದ್ವಿಚಕ್ರ ವಾಹನ ಚಾಲನಾ ಪರವಾನಗಿ ನೀಡುವ ಕುರಿತಂತೆ ಗಂಭೀರ ಚಿಂತನೆ ನಡೆಸುತ್ತಿದೆ.

ಇಂಧೋರ್‌ನಲ್ಲಿ ಇತ್ತೀಚೆಗಷ್ಟೇ ನಡೆದ ವಿಶೇಷ ವಿಚಾರಗೋಷ್ಠಿಯಲ್ಲಿ ಶಾಲಾ ಪ್ರತಿನಿಧಿಗಳು ಇಂತಹದೊಂದು ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆಯೂ ಮಾತುಕತೆ ನಡೆಸಲಾಗಿದೆ.
ಶಿಕ್ಷಕರು, ಹೆತ್ತವರು ಸಾರಿಗೆಯ ಬಗ್ಗೆ ಮಕ್ಕಳಿಗೆ ಸುರಕ್ಷತಾ ಮಾರ್ಗಸೂಚಿಗಳ ಬಗ್ಗೆ ಹೇಳಿಕೊಡುವುದು ಮುಖ್ಯವಾಗಿದೆ. ಈ ಸಂದರ್ಭದಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯುವ ಆಟೋ ಚಾಲಕರಿಗೂ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸುವಂತೆಯೂ ಸಲಹೆ ಮಾಡಲಾಗಿದೆ.


Click it and Unblock the Notifications








