ಸುಜುಕಿ ಬೈಕ್‌ಗಳ ಸವಾರಿ; ಮಾರಾಟ ಏರಿಕೆ

By Nagaraja

ಇದೀಗಷ್ಟೇ ಜಿಕ್ಸರ್ 150 ಸಿಸಿ ವಿಭಾಗದ ಬೈಕ್ ಬಿಡುಗಡೆ ಮಾಡಿರುವ ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು, 2014 ಸೆಪ್ಟೆಂಬರ್ ತಿಂಗಳ ಮಾರಾಟದಲ್ಲೂ ಶೇಕಡಾ 7.35ರಷ್ಟು ಏರಿಕೆ ದಾಖಲಿಸಿದೆ.

ಸುಜುಕಿ ಮೋಟಾರು ಕಾರ್ಪೋರೇಷನ್ ಭಾಗವಾಗಿರುವ ಸುಜುಕಿ ದ್ವಿಚಕ್ರ ವಿಭಾಗವು 2014 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 44,873 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 41,799 ಯುನಿಟ್ ಮಾರಾಟ ಮಾತ್ರ ದಾಖಲಿಸಿತ್ತು.

suzuki gixxer

ಈ ಮೂಲಕ ಕಳೆದೆರಡು ವರ್ಷಗಳಲ್ಲಿ ಸ್ಥಿರವಾಗಿ ಏರುಗತಿ ಕಾಯ್ದುಕೊಳ್ಳಲು ಸುಜುಕಿ ಸಂಸ್ಥೆಯು ಯಶ ಕಂಡಿದೆ. ಇದೀಗ ಹಬ್ಬದ ಆವೃತ್ತಿ ಆರಂಭವಾಗಿರುವಂತೆಯೇ ಜಿಕ್ಸರ್ ಮುಖಾಂತರ ಇನ್ನಷ್ಟು ಮಾರಾಟವನ್ನು ಸಂಸ್ಥೆ ಗುರಿಯಿರಿಸಿಕೊಂಡಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಅತುಲ್ ಗುಪ್ತಾ, "ಮಾರುಕಟ್ಟೆಯಲ್ಲಿ ನಮ್ಮೆಲ್ಲ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದೇವೆ. ಗ್ರಾಹಕರ ಸಂತೃಪ್ತಿ ವೃದ್ಧಿಯಾಗುತ್ತಿರುವುದು ಮಾರುಕಟ್ಟೆಯಲ್ಲಿ ಉತ್ತಮವಾಗಿ ಪ್ರತಿಫಲಿಸುತ್ತಿದೆ. ಇದೀಗ ಬಿಡುಗಡೆಯಾಗಿರುವ ಜಿಕ್ಸರ್ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ" ಎಂದಿದ್ದಾರೆ.

More from DriveSpark

Article Published On: Saturday, October 4, 2014, 10:32 [IST]
English summary
Suzuki Motorcycle India Pvt. Ltd., a subsidiary of one of the world’s leading two-wheeler manufacturer Suzuki Motor Corporation, registered a 7.35% increase in their September 2014 sales figures as compared to September 2013. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+