ಲೋಹಿಯಾ ಸಹಭಾಗಿತ್ವದಲ್ಲಿ ಭಾರತಕ್ಕೆ ಬರುತ್ತಿದೆ ಯುಎಂ ಬೈಕ್ಸ್

By Nagaraja

ವಿಸ್ತಾರವಾಗಿ ಹರಡಿರುವ ಭಾರತೀಯ ವಾಹನ ಮಾರುಕಟ್ಟೆಗೆ ಮಗದೊಂದು ವಾಹನ ತಯಾರಕ ಸಂಸ್ಥೆಯ ಪ್ರವೇಶವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಲೋಹಿಯಾ ಆಟೋ ಸಹಭಾಗಿತ್ವದಲ್ಲಿ ನಿಕಟ ಭವಿಷ್ಯದ್ಲಲ್ಲೇ ಯುಎಂ ಬೈಕ್‌ಗಳು ದೇಶದ ರಸ್ತೆಗಿಳಿಯಲಿದೆ.

ಅಮೆರಿಕದ ಆಧುನಿಕ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವ ಯುಎಂ ಮೋಟಾರ್‌ಸೈಕಲ್ಸ್ 1992ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿತ್ತು. ಒಕ್ಟವಿಯೊ ವಿಲ್ಲೆಗಾಸ್ ಲ್ಯಾನೋ ಎಂಬವರಿಂದ ಸ್ಥಾಪನೆಯಾಗಿರುವ ಪ್ರಸ್ತುತ ಸಂಸ್ಥೆಯು ಇದೀಗ ಭಾರತದಂತಹ ಬೆಳೆದು ಬರುತ್ತಿರುವ ದೇಶದಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸುವ ಇರಾದೆಯಲ್ಲಿದೆ.


ಭಾರತದಲ್ಲಿ ಹೂಡಿಕೆ ಮಾಡಿದ್ದಲ್ಲಿ ಯಶಸ್ಸು ಸಿಗುವುದು ಖಚಿತ ಎಂಬುದು ಮನಗಂಡಿರುವ ಯುಎಂ ಮೋಟಾರ್‌ಸೈಕಲ್ಸ್, ದೇಶದಲ್ಲಿ ಎಲೆಕ್ಟ್ರಿಕ್ ಬೈಕ್ ತಯಾರಕ ಸಂಸ್ಥೆಯಾಗಿರುವ ಲೋಹಿಯಾ ಆಟೋ ಜೊತೆ ಕೈಜೋಡಿಸಿಕೊಂಡಿದೆ.

ಉತ್ತರಾಖಂಡದಲ್ಲಿ ಸ್ಥಿತಗೊಂಡಿರುವ ಲೋಹಿಯಾ ಆಟೋ ಘಟಕದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದೀಗ ಲೋಹಿಯಾ ಆಟೋ ಸಹಭಾಗಿತ್ವ ಸಂಪೂರ್ಣ ಹೊಸತಾದ ಬೈಕ್‌ಗಳನ್ನು ಯುಎಂ ಮೋಟಾರ್‌ಸೈಕಲ್ಸ್ ನಿರ್ಮಿಸಲಿದೆ.

UM Motorcycles

ಈ ಹಿಂದೆ ತನ್ನ ಕೆಲವೊಂದು ಗಮನಾರ್ಹ ಮಾದರಿಗಳನ್ನು 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದ ಯುಎಂ ಮೋಟಾರ್‌ಸೈಕಲ್ಸ್, ಲೋಹಿಯಾ ಆಟೋ ಜೊತೆ ಜಂಟಿಯಾಗಿ 50-50 ಶೇರು ಹಂಚಿಕೊಳ್ಳಲಿದೆ. ಅಲ್ಲದೆ ಕ್ರೀಡಾ ಹಾಗೂ ಟೂರಿಂಗ್ ಸೇರಿದಂತೆ ಎಲ್ಲ ವಿಭಾಗದಲ್ಲೂ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡುವುದು ಸಂಸ್ಥೆಯ ಗುರಿಯಾಗಿದೆ.

More from DriveSpark

Article Published On: Saturday, September 27, 2014, 12:55 [IST]
English summary
UM Motorcycles has opted to enter the Indian market with two wheeler electric bike maker Lohia Auto.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+