2015ರಲ್ಲಿ ಅಮೆರಿಕದ ಐಕಾನಿಕ್ ಕ್ರೂಸರ್ ಬೈಕ್ ಭಾರತಕ್ಕೆ ಎಂಟ್ರಿ
ಅಮೆರಿಕದ ಕ್ಲಾಸ್ ಕ್ರೂಸರ್ ಬೈಕ್ ನಿರ್ಮಾಣ ಸಂಸ್ಥೆಯಾಗಿರುವ ಯುಎಂ ಮೋಟಾರ್‌ಸೈಕಲ್ ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದ್ದು, ತನ್ನ ಶ್ರೀಮಂತ ಮಾದರಿಗಳನ್ನು ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪರಿಚಯಸಲಿದೆ.
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಕ್ರೂಸರ್ ಬೈಕ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ವರ್ಧಿಸುತ್ತಲೇ ಇದೆ. ಇದೀಗ ಭಾರತ ಮೂಲದ ಲೋಹಿಯಾ ಆಟೋ ಜೊತೆ 50:50 ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿರುವ ಅಮೆರಿಕದ ಯುಎಂ ಮೋಟಾರ್‌ಸೈಕಲ್ ತನ್ನ ಮಹತ್ವಕಾಂಕ್ಷೆಯ ಬೈಕ್‌ಗಳನ್ನು ದೇಶಕ್ಕೆ ಪರಿಚಯಿಸಲಿದೆ.

ಒಪ್ಪಂದದ ಪ್ರಕಾರ ಭಾರತೀಯ ಮಾರುಕಟ್ಟೆಗೆ ವಿಶೇಷ ವಿನ್ಯಾಸಿದ ಶ್ರೇಣಿಯ ಬೈಕ್‌ಗಳನ್ನು ಯುಎಂ ಮೋಟಾರ್‌ಸೈಕಲ್ ತಯಾರಿ ಮಾಡಲಿದ್ದು, 2015 ಮಧ್ಯಂತರ ಅವಧಿಯಲ್ಲಿ ಬಿಡುಗಡೆ ಮಾಡಲಿದೆ. ಇದು ಸಂಪೂರ್ಣವಾಗಿಯೂ ಹೊಸ ಶ್ರೇಣಿಯ 300ರಿಂದ 500 ಸಿಸಿ ವರೆಗಿನ ಕ್ರೂಸರ್ ಮೋಟಾರ್‌ಸೈಕಲ್ ಆಗಿರಲಿದೆ.

ಆರಂಭದಲ್ಲಿ ಕ್ರೂಸರ್ ಬೈಕ್ ಪರಿಚಯಿಸುವುದು ಸಂಸ್ಥೆಯ ಯೋಜನೆಯಾಗಿದ್ದು, ಭವಿಷ್ಯದಲ್ಲಿ ಇತರ ಸೆಗ್ಮೆಂಟ್ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ. ಇದನ್ನು ಲೋಹಿಯಾ ಸಂಸ್ಥೆಯ ಉತ್ತರಾಖಂಡದ ಕಾಶೀಪುರದಲ್ಲಿ ಸ್ಥಿತಗೊಂಡಿರುವ ಘಟಕದಲ್ಲಿ ನಿರ್ಮಾಣ ಮಾಡಲಿದೆ. ಇಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಯುನಿಟ್‌ಗಳಷ್ಟು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.
ದೇಶದ ಯುವ ಗ್ರಾಹಕರನ್ನು ತನ್ನತ್ತ ಸೆಳೆಯುವುದು ಯುಎಂ ಸಂಸ್ಥೆಯ ಗಿರಿಯಾಗಿರಲಿದ್ದು, ಎರಡು ಲಕ್ಷಕ್ಕೂ ಕಡಿಮೆ ದರ ವ್ಯಾಪ್ತಿಯಲ್ಲಿ ಬೈಕ್ ಬಿಡುಗಡೆ ಮಾಡಲಿದೆ.

ಅಂದ ಹಾಗೆ ಎರಡು ಸಂಸ್ಥೆಗಳು ಒಟ್ಟಾಗಿ ಬರೋಬ್ಬರಿ 120 ಕೋಟಿ ರು.ಗಳನ್ನು ಹೂಡಿಕೆ ಮಾಡಲಿದೆ. ಅಂತೆಯೇ ಸ್ಮರ್ಧಾತ್ಮಕ ದರ ಕಾಪಾಡುವ ಮೂಲಕ ಬಹುಬೇಗನೇ ಗ್ರಾಹಕರನ್ನು ತಲುಪುವ ನಿರೀಕ್ಷೆ ಹೊಂದಿದೆ. ಮಿಯಾಮಿ ತಳಹದಿಯ ಯುಎಂ ಇಂಟರ್‌ನ್ಯಾಷನಲ್ ಕ್ರೂಸರ್ ಬೈಕ್ ಅಲ್ಲದೆ, ಸ್ಟ್ರೀಟ್ ಬೈಕ್, ಡ್ಯುಯಲ್ ಸ್ಪೋರ್ಟ್ ಬೈಕ್ ಉತ್ಪಾದನೆಯನ್ನು ಹೆಸರು ಮಾಡಿದೆ.


Click it and Unblock the Notifications








