ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಸ್ಥಗಿತಗೊಳಿಸಿದ ಯು‍ಎಂ ಮೋಟಾರ್‍‍ಸೈಕಲ್ಸ್

ಯು‍ಎಂ ಮೋಟಾರ್‍‍‍ಸೈಕಲ್ಸ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬೈಕುಗಳ ಮಾರಾಟವನ್ನು ಸ್ಥಗಿತಗೊಳಿಸಿದೆ. ಕಂಪನಿಯು ಮಾರಾಟ ಮಾಡುತ್ತಿದ್ದ ರೆನೆಗ್ರೇಡ್ ಕ್ರೂಸರ್ ಬೈಕಿನ ಮಾರಾಟವನ್ನು ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಬೈಕಿನ ಮಾರಾಟವು ಎಷ್ಟು ಕಳಪೆಯಾಗಿತ್ತೆಂದರೆ 2019ರ ಮಾರ್ಚ್ ತಿಂಗಳಿನಲ್ಲಿ ಈ ಬೈಕಿನ ಕೇವಲ 12 ಯೂನಿಟ್‍‍ಗಳನ್ನು ಮಾತ್ರ ಮಾರಾಟ ಮಾಡಲಾಗಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಸ್ಥಗಿತಗೊಳಿಸಿದ ಯು‍ಎಂ ಮೋಟಾರ್‍‍ಸೈಕಲ್ಸ್

ಅಮೇರಿಕಾ ಮೂಲದ ಬೈಕ್ ತಯಾರಕ ಕಂಪನಿಯು ಈ ಬೈಕಿನಲ್ಲಿ ಎ‍‍‍ಬಿ‍ಎಸ್ ಅನ್ನು ಅಳವಡಿಸಿರದೇ ಇರುವುದೇ, ಈ ಬೈಕಿನ ಮಾರಾಟದಲ್ಲಿ ಕುಸಿತ ಉಂಟಾಗಲು ಮುಖ್ಯ ಕಾರಣವಾಗಿತ್ತು. ಹೊಸ ಸುರಕ್ಷಾ ನಿಯಮಗಳ ಪ್ರಕಾರ, 2019ರ ಏಪ್ರಿಲ್‍‍ನಿಂದ 125ಸಿಸಿಗಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿರುವ ಬೈಕುಗಳಲ್ಲಿ ಎ‍‍ಬಿ‍ಎಸ್ ಅಳವಡಿಕೆ ಕಡ್ಡಾಯವಾಗಿದೆ. ಕಂಪನಿಯು ತನ್ನ ಉತ್ಪಾದನಾ ಘಟಕದಲ್ಲಿ ಯಾವುದೇ ಬೈಕುಗಳನ್ನು ತಯಾರಿಸುತ್ತಿಲ್ಲ.

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಸ್ಥಗಿತಗೊಳಿಸಿದ ಯು‍ಎಂ ಮೋಟಾರ್‍‍ಸೈಕಲ್ಸ್

ಸದ್ಯಕ್ಕೆ ಯುಎಂ ಕಂಪನಿಯು ತನ್ನ ರೆನೆಗೇಡ್ ಬೈಕ್ ಅನ್ನು ಸ್ಪೋರ್ಟ್ ಎಸ್, ಕಮಾಂಡೋ, ಮೊಜಾವೆ ಹಾಗೂ ಕ್ಲಾಸಿಕ್ ಎಂಬ ವಿವಿಧ ಮಾದರಿಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಎಲ್ಲಾ ಮಾದರಿಗಳಲ್ಲೂ ಒಂದೇ ರೀತಿಯ 279.5 ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು 24.8 ಬಿಹೆಚ್‌ಪಿ ಮತ್ತು 23 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಸ್ಥಗಿತಗೊಳಿಸಿದ ಯು‍ಎಂ ಮೋಟಾರ್‍‍ಸೈಕಲ್ಸ್

ಕಂಪನಿಯು ಶೀಘ್ರದಲ್ಲೇ ತನ್ನ ಬೈಕುಗಳಲ್ಲಿ ಎಬಿಎಸ್ ಅಳವಡಿಸಿ ಮರು ಬಿಡುಗಡೆಗೊಳಿಸಲು ಯೋಜಿಸುತ್ತಿದೆ. ಮುಂಬರುವ ದಿನಗಳಲ್ಲಿ ಹೊಸ ಮಾದರಿಯ ಬೈಕುಗಳ ಜೊತೆಗೆ ಅಪ್‍‍ಡೇಟ್‍‍ಗೊಳಿಸಿದ ಬೈಕುಗಳನ್ನು ಸಹ ಈ ಕಂಪನಿಯು ಬಿಡುಗಡೆಗೊಳಿಸಲಿದೆ. 2018 ರ ಆಟೋ ಎಕ್ಸ್‌ಪೋದಲ್ಲಿ ಯುಎಂ ಕಂಪನಿಯು ಹಲವಾರು ರೀತಿಯ ಬೈಕುಗಳನ್ನು ಪ್ರದರ್ಶಿಸಿತ್ತು. ಅವುಗಳಲ್ಲಿ ಕೆಲವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಸ್ಥಗಿತಗೊಳಿಸಿದ ಯು‍ಎಂ ಮೋಟಾರ್‍‍ಸೈಕಲ್ಸ್

ಇತ್ತೀಚೆಗಷ್ಟೇ ಕಂಪನಿಯ ಹೊಸ ಬೈಕ್ ಆದ ಅಡ್ವೆಂಚರ್ ಟೂರರ್ ಅನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಅಡ್ವೆಂಚರ್-ಟೂರರ್ ಹಾಗೂ ಡಿಎಸ್ಆರ್ ಅಡ್ವೆಂಚರ್ 200 ಬೈಕುಗಳನ್ನು ಕಂಪನಿಯು ಭಾರತದಲ್ಲಿ ಮರು ಕಾರ್ಯಾಚರಣೆ ಶುರುಗೊಳಿಸಿದ ನಂತರ ಬಿಡುಗಡೆಗೊಳಿಸಲಾಗುವುದು. ಆದರೆ ಈ ಬೈಕಿನ ಬಗ್ಗೆ ಯಾವುದೇ ಮಾಹಿತಿಗಳು ಅಧಿಕೃತಗೊಂಡಿಲ್ಲ.

ಯುಎಂ ರೆನೆಗೇಡ್‌ನ ನಾಲ್ಕು ಮಾದರಿಗಳಲ್ಲಿ ಸ್ಪೋರ್ಟ್ ಎಸ್‌ಮಾದರಿಯ ಬೆಲೆ ರೂ.1.68 ಲಕ್ಷ ರೂ.ಗಳಿಂದ ಕ್ಲಾಸಿಕ್‌ಗೆ ರೂ.2.02 ಲಕ್ಷಗಳಾಗಿದೆ. (ದೆಹಲಿಯ ಎಕ್ಸ್ ಶೋರೂಂ ದರ). ಸದ್ಯಕ್ಕೆ ದೇಶದಲ್ಲಿರುವ ಎಲ್ಲಾ ಶೋ ರೂಂಗಳನ್ನು ಮುಚ್ಚಲಾಗಿದೆ ಎಂದು ಬೆಂಗಳೂರಿನ ಮಾಜಿ ಡೀಲರ್‍‍ವೊಬ್ಬರು ತಿಳಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಯುಎಂ ಮೋಟರ್‌ಸೈಕಲ್‌ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. 300 ಸಿಸಿ ಕ್ರೂಸರ್ ವಿಭಾಗದಲ್ಲಿ ಹಿಡಿತ ಸಾಧಿಸಬೇಕೆಂದು ಕಂಪನಿಯು ಬಯಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಸ್ಥಗಿತಗೊಳಿಸಿದ ಯು‍ಎಂ ಮೋಟಾರ್‍‍ಸೈಕಲ್ಸ್

300 ಸಿಸಿ ವಿಭಾಗದಲ್ಲಿ ಹೆಚ್ಚಿನ ಪೈಪೋಟಿಯಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ ಬುಲೆಟ್ 350 ನಂತಹ ಬೈಕುಗಳ ಪ್ರಾಬಲ್ಯವಿದೆ. ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ನಂತರ, ಯುಎಂ ಬೈಕುಗಳು ಮತ್ತೆ ಹೇಗೆ ಪುಟಿದೇಳುತ್ತವೆ ಎಂಬುದನ್ನುಕಾದು ನೋಡೋಣ.

Most Read Articles

Kannada
English summary
UM Motorcycles Sales Discontinued In India — Dealerships Shut Down Due To Low Demand - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X