ಕ್ಯಾಮರಾ ಕಣ್ಣಿಗೆ ಬಿದ್ದ ಯು‍ಎಂ ಅಡ್ವೆಂಚರ್ ಟೂರರ್

ಇತ್ತೀಚಿಗಷ್ಟೆ ಯು‍ಎಂ ಅಡ್ವೆಂಚರ್ ಟೂರರ್‍ ಬೈಕಿನ ಚಿತ್ರಗಳು ಹಾಗೂ ಪ್ರೆಸೆಂಟೆಷನ್‍‍ಗಳು ಸೋರಿಕೆಯಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದವು. ರಶ್‍‍ಲೇನ್ ವರೆದಿಗಳ ಪ್ರಕಾರ, ಡಿಎಸ್ಆರ್ 200 ಅಡ್ವೆಂಚರ್ ಬೈಕಿನಲ್ಲಿರುವ ಹೆಚ್ಚಿನ ವಿನ್ಯಾಸಗಳನ್ನು ಪೋಲಿಷ್ ತಯಾರಿಸಿರುವ ರೋಮೆಟ್ ಎಡಿವಿ 125 ಎಫ್ಐ ಪ್ರೊ ಬೈಕಿನಿಂದ ಪಡೆಯಲಾಗಿದೆ. ಯುಎಂ ಅಡ್ವೆಂಚರ್ ಟೂರರ್‌ ಸರಣಿಯಲ್ಲಿರುವ ಹಲವಾರು ಬೈಕಿನ ಮೂಲಮಾದರಿಗಳನ್ನು ತೋರಿಸುವ ಹೊಸ ರಹಸ್ಯ ಚಿತ್ರಗಳು ಲಭ್ಯವಾಗಿವೆ.

ಕ್ಯಾಮರಾ ಕಣ್ಣಿಗೆ ಬಿದ್ದ ಯು‍ಎಂ ಅಡ್ವೆಂಚರ್ ಟೂರರ್

ಅಮೆರಿಕಾ ಮೂಲದ ಯು‍ಎಂ ಕಂಪನಿಯು, ದೇಶಿಯ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಮಧ್ಯಮ ತೂಕದ ಅಡ್ವೆಂಚರ್ ಟೂರರ್ ಬೈಕುಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹೊಸ ಬೈಕ್, ರೋಮೆಟ್ ಶೈಲಿಯ ಡಿಎಸ್ಆರ್ ಅಡ್ವೆಂಚರ್ 200 ಹಾಗೂ ಸದ್ಯಕ್ಕೆ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಯು‍ಎಂ ಬೈಕುಗಳಿಗಿಂತ ಭಿನ್ನವಾದ ವಿನ್ಯಾಸವನ್ನು ಹೊಂದಿದೆ. ಚಿತ್ರದಲ್ಲಿರುವ ಎರಡೂ ಮೂಲಮಾದರಿಗಳಲ್ಲೂ ಒಂದೇ ರೀತಿಯ ಹೆಡ್‍‍ಲ್ಯಾಂಪ್ ಹಾಗೂ ಫ್ಯೂಯಲ್ ಟ್ಯಾಂಕ್ ಎಕ್ಸ್ ಟೆಂಷನ್‍‍ಗಳಿದ್ದು, ಕಾನ್ಫಿಗರೇಷನ್‍‍ಗಳು ಬೇರೆ ಬೇರೆಯಾಗಿವೆ.

ಕ್ಯಾಮರಾ ಕಣ್ಣಿಗೆ ಬಿದ್ದ ಯು‍ಎಂ ಅಡ್ವೆಂಚರ್ ಟೂರರ್

ಒಂದು ಬೈಕಿನಲ್ಲಿ ದೊಡ್ಡ ಗಾತ್ರದ ವಿಂಡ್‌ಶೀಲ್ಡ್, ಡ್ಯೂಯಲ್ ಪರ್ಪಸ್‍‍ನ ಸ್ಪೋಕ್ ವ್ಹೀಲ್ ಹಾಗೂ ಸಾನ್ಸ್ ಫ್ರಂಟ್ ಫೆಂಡರ್‍‍ಗಳಿದ್ದರೆ, ಇನ್ನೊಂದು ಬೈಕಿನಲ್ಲಿ ಹೈ ಮೌಂಟೆಡ್ ಫ್ರಂಟ್ ಫೆಂಡರ್, ಕಾಂಪ್ಯಾಕ್ಟ್ ವಿಂಡ್ ಷೀಲ್ಡ್ ಹಾಗೂ ರೆಗ್ಯುಲರ್ ಟಯರ್‍‍ಗಳಲ್ಲಿ ಅಲಾಯ್ ವ್ಹೀಲ್‍‍ಗಳಿವೆ. ಎರಡೂ ಮಾದರಿಗಳಲ್ಲಿ ರೆಗ್ಯುಲರ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‍‍ಗಳಿದ್ದರೂ, ಬೇರೆ ಬೇರೆ ವಿನ್ಯಾಸವನ್ನು ಹೊಂದಿವೆ. ಸೋರಿಕೆಯಾಗಿರುವ ಈ ಚಿತ್ರದಲ್ಲಿ ಯುಎಂ ಮೂಲಮಾದರಿಗಳ ಜೊತೆಗೆ ಮಹೀಂದ್ರಾ ಮೊಜೊವನ್ನು ಸಹ ಕಾಣಬಹುದು.

ಕ್ಯಾಮರಾ ಕಣ್ಣಿಗೆ ಬಿದ್ದ ಯು‍ಎಂ ಅಡ್ವೆಂಚರ್ ಟೂರರ್

ಇದರಿಂದಾಗಿ ಈ ಬೈಕ್ ಬೆಂಚ್‍‍ಮಾರ್ಕ್ ಮಾಡೆಲ್ ಆಗಿರುವ ಸಾಧ್ಯತೆಗಳಿವೆ . ಈ ಫ್ರೇಂನಲ್ಲಿ ಗುರುತಿಸಲಾಗದ ಬೇರೆ ಬೈಕ್‍‍ಗಳಿದ್ದರೂ, ಗಮನವೆಲ್ಲಾ ಅಡ್ವೆಂಚರ್ ಟೂರರ್ ಟ್ವಿನ್ ಬೈಕುಗಳ ಮೇಲಿರುವುದು ಸ್ಪಷ್ಟವಾಗುತ್ತದೆ. ಯುಎಂ ಕಂಪನಿಯು ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಅಧಿಕೃತವಾಗಿ ಘೋಷಿಸಿಲ್ಲ, ಆದರೆ ಸೋರಿಕೆಯಾದ ಚಿತ್ರಗಳಿಂದಾಗಿ ಡಿಎಸ್ಆರ್ ಅಡ್ವೆಂಚರ್200 ಹಾಗೂ ಚಿಲ್ 150 ರೆಟ್ರೊ-ಕ್ಲಾಸಿಕ್ ಆಟೋಮ್ಯಾಟಿಕ್ ಸ್ಕೂಟರ್‍‍ಗಳು 2019ರಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ.

ಕ್ಯಾಮರಾ ಕಣ್ಣಿಗೆ ಬಿದ್ದ ಯು‍ಎಂ ಅಡ್ವೆಂಚರ್ ಟೂರರ್

ಈ ಬೈಕುಗಳು ಆರಂಭಿಕ ಮೂಲಮಾದರಿಗಳಾಗಿರುವ ಸಾಧ್ಯತೆಯಿದೆ. ಯುಎಂ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ಅಡ್ವೆಂಚರ್ ಟೂರರ್‍‍‍ಗಳಿಗಾಗಿ ಸರಿಯಾದ ಸಂರಚನೆ ಹಾಗೂ ವಿನ್ಯಾಸವನ್ನು ಶೂನ್ಯಗೊಳಿಸಿರುವ ಸಾಧ್ಯತೆಗಳಿವೆ. ಈ ಬಗ್ಗೆ ಯುಎಂ ಕಂಪನಿಯು ಅಧಿಕೃತವಾಗಿ ಘೋಷಿಸುವವರೆಗೆ ಕಾದು ನೋಡಬೇಕಿದೆ. ಯು‍ಎಂ ಕಂಪನಿಯ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ನಿರೀಕ್ಷಿಸಿದ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ.

ಯು‍ಎಂ ಕಂಪನಿಯ ಬೈಕುಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಲಿರುವ ಎಬಿಎಸ್ ಸೇರಿದಂತೆ ಹೊಸ ಸುರಕ್ಷತಾ ನಿಯಮಗಳನ್ನು ಅಳವಡಿಸದ ಕಾರಣ, ಕಳೆದ ತಿಂಗಳು ಕಂಪನಿಯ ಯಾವುದೇ ಬೈಕುಗಳ ಮಾರಾಟವಾಗಿರಲಿಲ್ಲ. ಕಂಪನಿಯು ಹೊಸ ಬೈಕುಗಳನ್ನು ಬಿಡುಗಡೆಗೊಳಿಸುವ ಮೊದಲು ಚಾಲ್ತಿಯಲ್ಲಿರುವ ಬೈಕುಗಳಲ್ಲಿ ಅಗತ್ಯ ಸುರಕ್ಷತಾ ಫೀಚರ್‍‍ಗಳನ್ನು ಅಳವಡಿಸಬೇಕಿದೆ. ಬಿಎಸ್-6 ನಿಯಮಗಳಿಗೆ ನಿಗದಿಪಡಿಸಿರುವ ಗಡುವು ಸಹ ಯು‍ಎಂ ಕಂಪನಿಯ ಮುಂದಿರುವ ಮತ್ತೊಂದು ಸವಾಲಾಗಿದೆ.

ಕ್ಯಾಮರಾ ಕಣ್ಣಿಗೆ ಬಿದ್ದ ಯು‍ಎಂ ಅಡ್ವೆಂಚರ್ ಟೂರರ್

ಈ ಅಡ್ವೆಂಚರ್ ಟೂರರ್ ಬೈಕುಗಳು ಬಿಡುಗಡೆಯ ನಂತರ ಮತ್ತೊಂದು ದೊಡ್ಡ ಸವಾಲನ್ನು ಎದುರಿಸಲಿವೆ. ಬಿಡುಗಡೆಯಾದ ನಂತರ ಈ ಬೈಕುಗಳು ಹೀರೋ ಎಕ್ಸ್‌ಪಲ್ಸ್ 200 ಬೈಕುಗಳಿಗೆ ಪೈಪೋಟಿ ನೀಡಲಿವೆ.

ಕ್ಯಾಮರಾ ಕಣ್ಣಿಗೆ ಬಿದ್ದ ಯು‍ಎಂ ಅಡ್ವೆಂಚರ್ ಟೂರರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸೋರಿಕೆಯಾದ ಚಿತ್ರಗಳನ್ನು ಒಂದು ಕೋನದಿಂದ ಮಾತ್ರ ಪರಿಗಣಿಸಿ ಬೈಕುಗಳು ಹೇಗೆ ಕಾಣಲಿವೆ ಎಂಬುದರ ಕುರಿತು ನಾವು ಹೆಚ್ಚು ಹೇಳಲು ಸಾಧ್ಯವಿಲ್ಲ. ಯು‍ಎಂ ಕಂಪನಿಯ ಮುಂದೆ, ಭಾರತೀಯ ಗ್ರಾಹಕರು ಕಂಪನಿಯ ಬಗೆಗೆ ಕಳೆದುಕೊಂಡಿರುವ ನಂಬಿಕೆಯನ್ನು ಪುನಃ ಬೆಳೆಸಬೇಕಾದ ದೊಡ್ಡ ಜವಾಬ್ದಾರಿಯಿದೆ. ನಾವು ಯು‍ಎಂ ಕಂಪನಿಗೆ ಶುಭ ಹಾರೈಸುತ್ತೇವೆ.

Source: Rushlane

More from DriveSpark

Article Published On: Monday, July 1, 2019, 11:22 [IST]
English summary
New UM Adventure Tourer Spied — Will It Rebuild The Brand In India? - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+