ಭವಿಷ್ಯದತ್ತ ದಿಟ್ಟ ನೋಟ ಹಾಯಿಸಿದ ಯಮಹಾ
ಜಪಾನ್‌ನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ದೇಶದ ಸ್ಕೂಟರ್ ಹಾಗೂ ಬೈಕ್ ವಿಭಾಗದಲ್ಲಿ ತನ್ನದೇ ಆದ ಮಾರಾಟ ವಲಯ ಕಾಯ್ದುಕೊಂಡಿದೆ. ಇದು ಯುವ ಗ್ರಾಹಕರಲ್ಲಿ ಅತಿ ಹೆಚ್ಚಿನ ಮನ್ನಣೆಗೆ ಪಾತ್ರವಾಗಿದೆ.
150 ಸಿಸಿ ರೇಂಜ್ ಬೈಕ್‌ಗಳತ್ತ ಹೆಚ್ಚು ಗಮನ ಕೇಂದ್ರಿತವಾಗಿರುವ ಯಮಹಾ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಂಡಿದೆ.

ಇದೀಗ ಈ ಜಪಾನ್ ಮೂಲದ ಈ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ಶೇಕಡಾ 10ರಷ್ಟು ಏರುಗತಿಯನ್ನು ಗುರಿಯಿರಿಸಿಕೊಂಡಿದೆ.
ಈ ಸಂದರ್ಭದಲ್ಲಿ ದೇಶಕ್ಕೆ ಹೊಸ ಮಾದರಿಗಳು ಪರಿಚಯವಾಗಲಿದೆ. ಮುಂದಿನ ಎರಡು ಮೂರು ವರ್ಷಗಳು ದೇಶದಲ್ಲಿ ಯಮಹಾ ಪಾಲಿಗೆ ನಿರ್ಣಾಯಕವೆನಿಸಲಿದೆ. ಈ ನಿಟ್ಟಿನಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಇರಾದೆ ಹೊಂದಿದೆ.
ಮೆಟ್ರೋ ನಗರಗಳತ್ತ ಹೆಚ್ಚು ಗಮನ ಕೇಂದ್ರಿತವಾಗಿರುವ ಯಮಹಾ, ನಿಧಾನವಾಗಿಯೂ ಗ್ರಾಮೀಣ ವಲಯದತ್ತವೂ ಗಮನ ಹರಿಸಲಿದೆ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ದರ ಕಾಯ್ದುಕೊಳ್ಳುವುದು ಅಗತ್ಯವೆನಿಸಿದೆ.


Click it and Unblock the Notifications








