ಮೈಲೇಜ್ ಬೈಕ್ ಪರಿಚಯಿಸಲಿರುವ ಯಮಹಾ
ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ಇಂಡಿಯಾ, ನಿಧಾನವಾಗಿ ನಿರ್ವಹಣಾ ಬೈಕ್ ದರ್ಜೆಯಿಂದ ಮೈಲೇಜ್ ದ್ವಿಚಕ್ರ ವಾಹನಗಳತ್ತ ಹೆಚ್ಚು ಗಮನ ಕೇಂದ್ರಿಕರಿಸಲು ಆರಂಭಿಸಿದೆ.
ಭಾರತದಂತಹ ಬೃಹತ್ ಮಾರುಕಟ್ಟೆಯಲ್ಲಿ ಮೈಲೇಜ್ ವಾಹನಗಳಿಗೆ ಹೆಚ್ಚಿನ ಬೇಡಿಕೆಯಿರುವುದೇ ಇದರ ಹಿಂದಿರುವ ಕಾರಣವಾಗಿದೆ. ಇದರಂತೆ ಜಗತ್ತಿನಾದ್ಯಂತ ನಿರ್ವಹಣಾ ಬೈಕ್ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ಯಮಹಾ ಇದೀಗ ನಿಧಾನವಾಗಿ ತನ್ನ ಟ್ರ್ಯಾಕ್ ಬದಲಾಯಿಸುತ್ತಿದೆ.

ಅಂದರೆ ನಿಕಟ ಭವಿಷ್ಯದಲ್ಲಿ ಯಮಹಾದಿಂದ ಆಗಮನವಾಗಲಿರುವ ಎಲ್ಲ ಬೈಕ್‌ಗಳು ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಸಕ್ಷಮವಾಗಿರಲಿದೆ. ಅದೇ ರೀತಿ ಈಗಿರುವ ಮಾದರಿಗಳನ್ನು ಅಪ್‌ಗ್ರೇಡ್ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.
ಸದ್ಯ ಯಮಹಾ ಸಂಸ್ಥೆಯು ಎಫ್‌ಝಡ್, ಎಫ್‌ಝಡ್‌ಎಸ್, ಫೇಜರ್ ಹಾಗೂ ಆರ್15 ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅದೇ ರೀತಿ ಆಲ್ಫಾ, ರಾಝ್ ಮತ್ತು ರೇ ಝಡ್‌ಗಳಂತಹ ಸ್ಕೂಟರುಗಳನ್ನು ಸೇಲ್ ಮಾಡುತ್ತಿವೆ. ಅಷ್ಟೇ ಅಲ್ಲದೆ 150 ಸಿಸಿ ಹಾಗೂ ಅದಕ್ಕಿಂತಲೂ ಮೇಲ್ಪಟ್ಟ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವನ್ನು ಕಾಯ್ದುಕೊಂಡಿದೆ. ಇನ್ನು 2013-2014 ಅವಧಿಯಲ್ಲಿ 3,07,511 ಯುನಿಟ್‌ಗಳ ಮಾರಾಟವನ್ನು ಕಂಡಿರುವುದು ಸಂಸ್ಥೆಯ ಯಶಸ್ಸಿಗೆ ಕೈಗನ್ನಡಿಯಾಗಿದೆ.


Click it and Unblock the Notifications